ಕಾಸರಗೋಡು: ಕರ್ನಾಟಕ ಸುಗಮ ಸಂಗೀತ ಪರಿಷತ್ ಬೆಂಗಳೂರು ಇದರ ಆಶ್ರಯದಲ್ಲಿ ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಮಠದ ಅನುಭವ ಮಂಟಪದಲ್ಲಿ 16 ನೇ ಸುಗಮ ಸಂಗೀತ ಸಮ್ಮೇಳನ `ಗೀತೋತ್ಸವ - 2019' ಇತ್ತೀಚೆಗೆ ನಡೆಯಿತು.
ಪೂಜ್ಯರಾದ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ರಚಿಸಿದ ಗೀತೆಯನ್ನು ಪರಿಷತ್ತಿನ ಕಾಸರಗೋಡು ಘಟಕದ ಅಧ್ಯಕ್ಷೆ ಶಾಹಿರತ್ನ ಬಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಪಿ.ದಿವಾಕರ ಕಾಸರಗೋಡು, ಕೋಶಾಧಿಕಾರಿ ಲೀಲಾಧರ ಆಚಾರ್ಯ, ಚಲನಚಿತ್ರ ಗಾಯಕ ರಮೇಶ್ಚಂದ್ರ, ಸುಚಿತ್ರ, ಚೈತ್ರ, ದೀಕ್ಷಿತ ಮುಂತಾದವರು ಸಮೂಹ ಗಾಯನದಲ್ಲಿ ಸುಶ್ರಾವ್ಯವಾಗಿ ಹಾಡಿ ಜನಮೆಚ್ಚುಗೆಗಳಿಸಿದರು.