ಬದಿಯಡ್ಕ: ಪೆರ್ಲ, ಬದಿಯಡ್ಕ , ಮುಳ್ಳೇರಿಯಾ ಸಹಿತ ವಿವಿಧೆಡೆಗಳಲ್ಲಿ ಬಹಿರಂಗ ಮದ್ಯ ಸೇವನೆ ಒಂದು ಪಿಡುವಾಗಿ ಪರಿಣಮಿಸಿದೆ. ಹಗಲು ದಾರಿ ಬದಿಯಲ್ಲೂ , ರಾತ್ರಿ ಅಂಗಡಿಗಳ ಮುಂದೆಯೂ ಬಹಿರಂಗವಾಗಿ ಮದ್ಯಪಾನ ನಡೆಯುತ್ತಿದೆ. ಬೆಳಿಗ್ಗೆ ಅಂಗಡಿಗೆ ತಲುಪಿದಾಗ ಅಲ್ಲಿ ಖಾಲಿ ಬಾಟಲಿ ಹಾಗೂ ಆಹಾರ ಪೆÇಟ್ಟಣಗಳ ಕಣಿ ಕಾಣಬೇಕಾದ ದುಸ್ಥಿತಿಯುಂಟಾಗಿದೆ. ಈ ಹಿಂದೆ ಬದಿಯಡ್ಕದಲ್ಲಿ ಸರಕಾರದ ಬಿವರೇಜಸ್ ಮದ್ಯದಂಗಡಿ ಇತ್ತು. ಬಳಿಕ ಅದು ಮುಳ್ಳೇರಿಯಾಕ್ಕೆ ಸ್ಥಳಾಂತರಗೊಂಡ ನಂತರ ಪೆರ್ಲ, ಬದಿಯಡ್ಕ , ನೀರ್ಚಾಲು, ಮಾನ್ಯ ಮೊದಲಾಡೆಗಳಲ್ಲಿ ಅನಧಿಕೃತ ಮದ್ಯಮಾರಾಟ ಆರಂಭಗೊಂಡಿದೆ. ಕೇರಳ ನಿರ್ಮಿತ ಕರ್ನಾಟಕ, ಗೋವಾ, ಪಾಂಡಿಚೇರಿ ನಿರ್ಮಿತ ಎಂಬ ಸ್ಟಿಕರ್ ಅಂಟಿಸಿರುವ ಮದ್ಯ ಇಲ್ಲಿ ಹೇರಳವಾಗಿ ಲಭಿಸುತ್ತಿವೆ.
ಹಗಲು ವೇಳೆ ಪೇಟೆಗೆ ಒಳದಾರಿ ಬದಿಯಲ್ಲಿ ಹಾಗೂ ರಾತ್ರಿ ವೇಳೆ ಬಾಗಿಲು ಮುಚ್ಚುವ ಅಂಗಡಿಗಳ ಮುಂದೆ ವ್ಯಾಪಕ ಮದ್ಯ ಸೇವನೆಯೂ ನಡೆಯುತ್ತಿದೆ. ಬದಿಯಡ್ಕ ಪೇಟೆಯ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಹೈಸ್ಕೂಲ್ ರಸ್ತೆ ಬದಿಯು ಬಾರ್ ಆಗಿ ಪರಿಣಮಿಸಿದೆ. ಇಲ್ಲಿನ ರಸ್ತೆ ಬದಿ ಹಾಗೂ ಸಮೀಪದ ಮೊಬೈಲ್ ಟವರ್ ಪರಿಸರದಲ್ಲಿ ಹಗಲು ವೇಳೆ ಬಹಿರಂಗ ಮದ್ಯ ಸೇವನೆ ನಡೆಯುತ್ತಿದೆ. ಖಾಲಿ ಬಾಟಲಿಗಳು, ಗ್ಲಾಸುಗಳು ರಸ್ತೆ ಬದಿಯಲ್ಲಿ ಬಿದ್ದಿರುತ್ತದೆ. ಮುಳ್ಳೇರಿಯಾ ಪೇಟೆಯ ಕೆಲವು ಅಂಗಡಿಗಳ ಮುಂದೆಯೂ ಇದೇ ಸ್ಥಿತಿಯಾಗಿದೆ. ಬೆಳಿಗ್ಗೆ ಬಂದು ಅಂಗಡಿಗಳ ಮಲ್ಭಾಗದ ಮದ್ಯ , ತ್ಯಾಜ್ಯ ಶುಚೀಕರಿಸುವುದೇ ಕೆಲಸವೆಂದು ಕೆಲವು ವ್ಯಾಪಾರಿಗಳು ಹೇಳುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವಿಸುವಲ್ಲಿ ಪೆÇೀಲಿಸರು ದಾಳಿ ನಡೆಸಿದ್ದಾರೆ. ಬದಿಯಡ್ಕ , ಆದೂರು ಸಹಿತ ವಿವಿಧ ಠಾಣೆಗಳಲ್ಲಿ ಬಹಿರಂಗ ಮದ್ಯ ಸೇವನೆ ಪ್ರಕರಣದಲ್ಲಿ ಕನಿಷ್ಠ ಒಂದು ಕೇಸಾದರೂ ದಾಖಲಾಗಿಲ್ಲ. ಆದರೆ ಕುಡುಕರ ಸಂಖ್ಯೆ ಇದಕ್ಕಿಂತ ಎಷ್ಟೋ ಪಾಲು ಹೆಚ್ಚಾಗಿದೆ. ಬಹಿರಂಗ ಮದ್ಯಪಾನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.