ಕಾಸರಗೋಡು: ಹೊಸ ವರ್ಷವನ್ನು ಹಸುರು ಸಮೃದ್ಧಗೊಳಿಸುವ ಉದ್ದೇಶದೊಂದಿಗೆ ಹರಿತ ಕೇರಳ ಮಿಷನ್ ಜಿಲ್ಲೆಯಲ್ಲಿ `ಹರಿತ ಮುಟ್ಟಂ(ಹಸುರು ಅಂಗಳ)' ಯೋಜನೆಯನ್ನು ಜಾರಿಗೊಳಿಸುತ್ತಿದೆ.
ಜಿಲ್ಲೆಯ ಎಲ್ಲ ವಿದ್ಯಾಲಯಗಳ, ಸಂಸ್ಥೆಗಳ ಆವರಣವನ್ನು ಸಸ್ಯ ಶಾಮಲಗೊಳಿಸುವ ಉದ್ದೇಶದಿಂದ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಈ ಯೋಜನೆ ಜಾರಿಮಾಡಲಾಗುತ್ತಿದೆ. ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯಿತು. ಫಲ ನೀಡುವ ಸಸ್ಯವನ್ನು ನೆಡುವ ಮೂಲಕ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಕಾರ್ಯಕ್ರಮ ಉದ್ಘಾಟಿಸಿದರು.
ಹರಿತ ಕೇರಳ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಜಿಲ್ಲಾ ಮಾಹಿತಿ ಕೇಂದ್ರ ಅಧಿಕಾರಿ ರಶೀದ್ ಬಾಬು, ಎ.ಡಿ.ಸಿ.ಬೆವಿನ್, ಜಿಲ್ಲಾ ಪೆÇ್ರಬೇಷನ್ ಅ„ಕಾರಿ `Áಸ್ಕರನ್ ಬಿ., ಕೆ.ಪಿ.ಗಂಗಾಧರನ್ ಮೊದಲಾದವರು ಉಪಸ್ಥಿತರಿದ್ದರು.