ಕಾಸರಗೋಡು: ಗಡಿನಾಡು ಕಾಸರಗೊಡಿನ ಕನ್ನಡ-ತುಳು ಸಾಂಸ್ಕøತಿಕ ಕೊಡುಗೆಗಳು ಅಪೂರ್ವವಾಗಿ ಇತರೆಡೆಗಳಿಗೆ ತುಲನೆಗೆ ನಿಲುಕದ ಕೊಡುಗೆಯಾಗಿ ಗುರುತಿಸಿಕೊಂಡಿದೆ. ನೆಲದ ಪರಂಪರೆಯ ಉಳಿವು-ಬೆಳವಣಿಗೆಗಳಿಗೆ ನಿರಂತರವಾಗಿ ಶ್ರಮಿಸುತ್ತಿರುವ ವಿವಿಧಸಂಘಟನೆಗಳ ಶ್ರಮ ಸ್ತುತ್ಯರ್ಹ. ನಾಗರಕಟ್ಟೆಯ ಶಾರದಾ ಭಜನಾ ಸಂಘದ ಸಾಮಾಜಿಕ-ಸಾಂಸ್ಕøತಿಕ ಸಾಧನೆಗಳು ಮಾದರಿಯಾದುದು ಎಂದು ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಅವರು ತಿಳಿಸಿದರು.
ನಾಗರಕಟ್ಟೆಯ ಶ್ರೀಶಾರದಾ ಭಜನಾ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಪಯಸ್ವಿನಿ ಸಾಂಸ್ಕøತಿಕ ತಂಡದ ನೇತೃತ್ವದಲ್ಲಿ ಆಯೋಜಿಸಲಾದ ಎರಡು ದಿನಗಳ ಕನ್ನಡ ಸಂಸ್ಕøತಿ ಉತ್ಸವ ಸಮಾರಂಭದ ಸಮಾರೋಪದಲ್ಲಿ ತಮಗೆ ನೀಡಲಾದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪಯಸ್ವಿನಿ ಸಾಂಸ್ಕøತಿಕ ಸಂಘದ ಅಧ್ಯಕ್ಷ ರೋಹಿತಾಕ್ಷ ಅಧ್ಯಕ್ಷತೆ ವಹಿಸಿದ್ದರು. ಚಲನಚಿತ್ರ ನಟ ಪೃಥ್ವಿ ಅಂಬಾರ್ ಉದ್ಘಾಟಿಸಿ ಈ ಸಂದರ್ಭ ಮಾತನಾಡಿ, ರಂಗ ಚಟುವಟಿಕೆಗಳು ಸಾಮಾಜಿಕ ಏಕತೆ, ನ್ಯಾಯಪರತೆಯ ಚಕ್ಷುಗಳಿಂದ ಮಾರ್ಗದರ್ಶಿಯಾಗಿ ಚಿಂತನೆಗೆ ಹಚ್ಚುತ್ತದೆ. ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ ಎಂದು ತಿಳಿಸಿದರು.
ಹಿರಿಯ ಚಲನಚಿತ್ರ ನಟ ಲಕ್ಷ್ಮಣ ಕುಮಾರ ಮಲ್ಲೂರ್, ಗೋಪಿನಾಥ ಭಟ್, ಮೈಮ್ ರಾಂದಾಸ್, ಶಶಿರಾಜ ಕಾವೂರು, ಸಂತೋಷ್ ಉಪಸ್ಥಿತರಿದ್ದು ಮಾತನಾಡಿದರು.
ಬಳಿಕ ರಂಗ ಸಂಗಾತಿ ಮಂಗಳೂರು ತಂಡದವರಿಂದ ಮೋಹನಚಂದ್ರ ನಿರ್ದೇಶನದ ಸಂಪಿಗೆ ನಗರ ಪೋಲೀಸ್ ಸ್ಟೇಶನ್ ಕನ್ನಡ ನಾಟಕ ಪ್ರದರ್ಶನಗೊಂಡಿತು. ಮೊದಲ ದಿನ ಬೆಂಗಳೂರಿನ ಪ್ರಸಿದ್ದ ಮೈಸೂರು ರಾಮಾನಂದ ಅವರ ಅಪ್ಪ ಮಗ ಗ್ಯಾಂಗ್ ಸತ್ತ ಹಾಸ್ಯ ನಾಟಕ ಹಾಗೂ ಬೆಂಗಳೂರಿನ ದೇವರಾಜ್ ತಂಡದವರಿಂದ ಸುಗಮ ಸಂಗೀತ, ಕೋಲಾರ ರಮೇಶ್ ಅವರ ನೇತೃತ್ವದಲ್ಲಿ ಸಮೂಹ, ಜನಪದ ನೃತ್ಯ, ಪಯಸ್ವಿನಿ ತಂಡದ ಪುಟಾಣಿಗಳಿಂದ ಛದ್ಮವೇಶ ಸ್ಪರ್ಧೆಗಳು ನಡೆದವು. ಕಾರ್ಯದರ್ಶಿ ದಿನೇಶ್ ನಾಗಕಟ್ಟೆ ಸ್ವಾಗತಿಸಿ, ವಿನೋದ್ ಕುಮಾರ್ ವಂದಿಸಿದರು.