ಬದಿಯಡ್ಕ: ಅಕ್ಷರಕಾಶಿ ನೀರ್ಚಾಲಿನ ಮಹಾಜನ ವಿದ್ಯಾಸಂಸ್ಥೆಗಳ ಆವರಣದಲ್ಲಿ ಶನಿವಾರದಿಂದ ಆರಂಭಗೊಂಡ ಜಿಲ್ಲಾ 12ನೆ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಬಳಿಕ ವೇದಿಕೆಯಲ್ಲಿ ಮಹಾಜನ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಸೊಗಡು ಕಾರ್ಯಕ್ರಮದಡಿ ವಿವಿಧ ಜಾನಪದ, ನಾಡಗೀತೆಗಳ ಗಾಯನ, ನೃತ್ಯ ಕಾರ್ಯಕ್ರಮಗಳು ನಡೆಯಿತು. ಸಮ್ಮೇಳನದ ಸನ್ಮಾನ ಸಮಿತಿ ಸದಸ್ಯೆ ಶೈಲಜಾ ಎ. ನಿಔಹಿಸಿದರು. ಮೆರವಣಿಗೆ ಸಮಿತಿ ಸದಸ್ಯೆ ವಾಣೀ ಪಿ.ಎಸ್.ಸ್ವಾಗತಿಸಿ, ಗಾಯತ್ರೀ ಎ.ವಂದಿಸಿರು.
ಬಳಿಕ ಗಡಿನಾಡಿನ ಹೆಮ್ಮೆಯ ಸಾಂಸ್ಕøತಿಕ ಸಂಘಟನೆಯಾದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದಿಂದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಸಾರಥ್ಯದಲ್ಲಿ ರಾಜಾ ಸೌದಾಸ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಚಂದ್ರಶೇಖರ ಭಟ್ ಕೊಂಕಣಾಜೆ, ಲವಕುಮಾರ ಐಲ ಹಾಗೂ ಉದಯ ಕಂಬಾರು, ಮುರಾರಿ ಭಟ್ ಪಂಜಿಗದ್ದೆ ಸಹಕರಿಸಿದರು. ಮುಮ್ಮೇಳದಲ್ಲಿ ಸುಬ್ರಾಯ ಹೊಳ್ಳ ಕಾಸರಗೋಡು, ಹರಿನಾರಾಯಣ ಭಟ್ ಎಡನೀರು, ಮಹೇಶ್ ಕುಮಾರ್ ಸಾಣೂರು, ಪೆರುವೊಡಿ ಸುಬ್ರಹ್ಮಣ್ಯ ಭಟ್, ಕಿಶನ್ ನೆಲ್ಲಿಕಟ್ಟೆ, ಶ್ರೀಗಿರಿ ಅನಂತಪುರ, ಶಶಿಧರ ಕುಲಾಲ್ ಕನ್ಯಾನ, ಪ್ರಕಾಶ ನಾಯಕ್ ನೀರ್ಚಾಲು, ಮವ್ವಾರು ಬಾಲಕೃಷ್ಣ ಮಣಿಯಾಣಿ, ಶಂಭಯ್ಯ ಭಟ್ ಕಂಜರ್ಪಣೆ, ರಾಧಾಕೃಷ್ಣ ನಾವಡ ಮಧೂರು, ಬಾಲಕೃಷ್ಣ ಸೀತಾಂಗೋಳಿ, ಡಾ.ಶ್ರುತಕೀರ್ತಿ ರಾಜ್ ಉಜಿರೆ, ಉಪಾಸನಾ ಪಂಜರಿಕೆ ಮೊದಲಾದವರು ಸಹಕರಿಸಿದರು. ರಾಕೇಶ್ ಬಳಗ ಮಲ್ಲ ವೇಷಭೂಷಣದಲ್ಲಿ ಸಹಕರಿಸಿದರು. ಗೋವಿಂದ ಭಟ್ ಬಳ್ಳಮೂಲೆ ಸ್ವಾಗತಿಸಿ, ನಿರೂಪಿಸಿದರು. ಸುಬ್ರಹ್ಮಣ್ಯ ಬಿ ವಂದಿಸಿದು.
ಸಂಜೆ 5 ರಿಂದ ಕೇರಳ ರಾಜ್ಯ ಕಲೋತ್ಸವ ಸ್ಪರ್ಧೆಯಲ್ಲಿ ಪ್ರದರ್ಶನಗೊಂಡ ಧರ್ಮತ್ತಡ್ಕ ಶ್ರೀದುರ್ಗಾಪರಮೇಶ್ವರಿ ಅನುದಾನಿತ ಹೈಸ್ಕೂಲಿನ ವಿದ್ಯಾರ್ಥಿಗಳ ಏಕೈಕ ಕನ್ನಡ ನಾಟಕ ಸದಾಶಿವ ಮಾಸ್ತರ್ ಪೊಯ್ಯೆ ಅವರ ನುರ್ದೇಶನದ ಕೊಂಬುಮೀಸೆ ಕನ್ನಡ ನಾಟಕ ಪ್ರದರ್ಶನ ನಡೆಯಿತು. ವೀರೇಶ್ವರ ಭಟ್ ಸ್ವಾಗತಿಸಿ, ಅನ್ನಪೂರ್ಣ ಎಸ್ ವಂದಿಸಿದರು. ಶೈಲಜಾ ಬಿ ನಿರ್ವಹಿಸಿದರು. ಬಳಿಕ ನೀರ್ಚಾಲು ಮಜಾಜನ ವಿದ್ಯಾಸಂರ್ಸತೆಯ ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ನಡೆಯಿತು. ಪ್ರಚಾರ ಸಮಿತಿಯ ಸದಸ್ಯೆ ಸುಶೀಲಾ ನಿರ್ವಹಿಸಿದರು. ಲಲಿತಾಕುಮಾರಿ ಎನ್ ಎಚ್ ಸ್ವಾಗತಿಸಿ, ವಿನೋದಿನಿ ಕೆ ವಂದಿಸಿದರು.