ಕಾಸರಗೋಡು: ಕಲೆ ಹಾಗೂ ಸಂಸ್ಕøತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಂಗೀತ ಶಾಲೆಗಳು ಪ್ರಧಾನ ಪಾತ್ರವನ್ನು ವಹಿಸುತ್ತವೆ. ಸಂಗೀತ, ಯಕ್ಷಗಾನ ಮುಂತಾದ ಕಲೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಸಂಸ್ಕøತಿಯ ಬೇರು ಗಟ್ಟಿಯಾಗುತ್ತದೆ ಎಂದು ಎಡನೀರು ಮಠದ ಕಾರ್ಯದರ್ಶಿ ಜಯರಾಮ ಮಂಜತ್ತಾಯ ಅಭಿಪ್ರಾಯಪಟ್ಟರು.
ಅವರು ಭಾನುವಾರ ಕಾಸರಗೋಡು ಲಲಿತಕಲಾಸದನದಲ್ಲಿ ನಡೆದ ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ 22ನೇ ವಾರ್ಷಿಕೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಧಾರ್ಮಿಕ ಮುಂದಾಳು, ಕಲಾಪೋಷಕ ಕೆ.ಎನ್. ವೆಂಕಟ್ರಮಣ ಹೊಳ್ಳ ಕಾಸರಗೋಡು, ಸಂಗೀತ ಶಾಲೆಯ ಸಂಚಾಲಕ ಬಿ.ಜಿ.ಈಶ್ವರ ಭಟ್, ಸಂಗೀತ ಗುರುಗಳಾದ ಉಷಾ ಈಶ್ವರ ಭಟ್, ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಸತ್ಯನಾರಾಯಣ ಕೆ., ವಿದ್ವಾನ್ ಪ್ರಭಾಕರ ಕುಂಜಾರು, ಕಣ್ಣನ್ ಕಾಞಂಗಾಡು, ಟಿ.ಕೆ.ವಾಸುದೇವ ಕಾಞಂಗಾಡು, ಪ್ರಕಾಶ ಆಚಾರ್ಯ ಕುಂಟಾರು ಉಪಸ್ಥಿತರಿದ್ದರು. ಶಿವರಂಜನಿ ಭಟ್ ಪ್ರಾರ್ಥಿಸಿದರು. ನಂತರ ಸಂಗೀತ ಶಾಲೆಯ ವಿದ್ಯಾರ್ಥಿಗಳು ತಮ್ಮ ಸಂಗೀತ ಜ್ಞಾನವನ್ನು ವೇದಿಕೆಯಲ್ಲಿತೆರೆದಿಟ್ಟರು.
ಅಪರಾಹ್ನ ನಡೆದ ಪ್ರಧಾನ ಕಚೇರಿಯಲ್ಲಿ ಅಮೃತಾ ವೆಂಕಟೇಶ್ ಬೆಂಗಳೂರು ಹಾಡುಗಾರಿಕೆಗೆ ವಯಲಿನ್‍ನಲ್ಲಿ ಎನ್.ಸಂಪತ್ ತಿರುವನಂತಪುರಂ, ಮೃದಂಗದಲ್ಲಿ ಮಹೇಶ್ ಕುಮಾರ್ ಪಾಲಕ್ಕಾಡು, ಮೋರ್ಸಿಂಗ್‍ನಲ್ಲಿ ಗೋವಿಂದ ಪ್ರಸಾದ್ ಪಯ್ಯನ್ನೂರು ಸಹಕರಿಸಿದರು.