ಕುಂಬಳೆ: ಬಜಕೂಡ್ಲು ಅಮೃತಧಾರಾ ಗೋಶಾಲೆಯ `ಗೋವಿಗಾಗಿ ಮೇವು-ಮೇವಿಗಾಗಿ ನಾವು' ಯೋಜನೆಯ ಅಂಗವಾಗಿ ಭಾನುವಾರ ಸೀತಾಂಗೋಳಿ ಮುಖಾರಿಕಂಡದಲ್ಲಿ ನಡೆದ ದ್ವಿತೀಯ ಹಂತದ ಸೇವಾ ಅಘ್ರ್ಯವು ಯಶಸ್ವಿಯಾಗಿ ಸಂಪನ್ನಗೊಂಡಿತು.
ಸ್ಥಳೀಯ ಕೃಷಿಕ ಕೃಷ್ಣ ಮಣಿಯಾಣಿ ಮುಖಾರಿಗದ್ದೆ ಧ್ವಜಾರೋಹಣ ನಡೆಸಿದರು. ಗುರಿಕ್ಕಾರ ಕಾವೇರಿಕಾನ ಶಂಕರ ಭಟ್ ಫಲಸಮರ್ಪಣೆ ಮಾಡಿದರು. ಕಾಮದುಘಾ ಕಾರ್ಯದರ್ಶಿ ಡಾ.ವೈ.ವಿ.ಕೃಷ್ಣಮೂರ್ತಿ ನೇತೃತ್ವವಹಿಸಿದ್ದರು. ಮಹಾ ಮಂಡಲ ಅಧ್ಯಕ್ಷೆ ಈಶ್ವರಿ ಶ್ಯಾಮ.ಭಟ್ ಬೇರ್ಕಡವು, ಶ್ಯಾಮ ಭಟ್ ಬೇರ್ಕಡವು, ಶ್ರೀಕೃಷ್ಣ ಭಟ್ ಮೀನಗದ್ದೆ ಸಲಹೆ ಸೂಚನೆಗಳನ್ನಿತ್ತು ಸೇವಾ ಅಘ್ರ್ಯದಲ್ಲಿ ಭಾಗವಹಿಸಿದರು.
ಮುಳ್ಳೇರ್ಯ ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಮಂಡಲ ಪದಾಧಿಕಾರಿಗಳಾದ ಕುಸುಮಾ ಪೆರ್ಮುಖ, ಡಾ.ಡಿ.ಪಿ.ಭಟ್, ಸತ್ಯ ಶಂಕರ ಭಟ್ ಹಿಳ್ಳೆಮನೆ ಉಪಸ್ಥಿತರಿದ್ದರು. ವಲಯ ಪದಾಧಿಕಾರಿಗಳಾದ ಬಾಲಕೃಷ್ಣ ಶರ್ಮ, ಗೋಪಾಲಕೃಷ್ಣ ಭಟ್ ಸೇಡಿಗುಮ್ಮೆ, ಸೂರ್ಯನಾರಾಯಣ ಭಟ್, ಸುಬ್ರಹ್ಮಣ್ಯ ಭಟ್ ಬೆಜಪ್ಪೆ, ರಮೇಶ ಭಟ್ ಏತಡ್ಕ, ಕನಕವಲ್ಲಿ ಬಡಗಮೂಲೆ, ಡಾ.ಮಾಲತಿಪ್ರಕಾಶ ನೀರ್ಚಾಲು, ವಿವಿಧ ವಲಯ ಗುರಿಕ್ಕಾರರು, ಪದಾಧಿಕಾರಿಗಳು, ವಿದ್ಯಾರ್ಥಿಗಳು, ಮಾತೆಯರು ಶ್ರಮದಾನದಲ್ಲಿ ಪಾಲ್ಗೊಂಡರು.
ಬಜಕೂಡ್ಲು ಅಮೃತಧಾರಾ ಗೋಶಾಲೆಯ ಪದಾಧಿಕಾರಿಗಳಾದ ಶ್ರೀಧರ ಭಟ್, ನಿರಂಜನ ದೇವಲೋಕ, ಕೃಷ್ಣ ಪ್ರಸಾದ್ ಬನಾರಿ ಸಹಕರಿಸಿದರು. ಕೇಶವಪ್ರಸಾದ ಎಡಕ್ಕಾನ ಕಾರ್ಯಕ್ರಮ ಸಂಯೋಜನೆ ಮಾಡಿದರು. ಉಲ್ಲೇಖ ಪ್ರಧಾನ ಬಳ್ಳಮೂಲೆ ಗೋವಿಂದ ಭಟ್ ಸಾಂದರ್ಭಿಕ ಸಹಾಯ ಮಾಡಿದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಸಮಾಜದ ಹಿರಿಯ ಮುಖಂಡರಾದ ಶಾಮ ಭಟ್ ಕೋಣಮ್ಮೆ , ಶ್ರೀ ರಾಮಾಶ್ರಮ ಗಿರಿನಗರದ ಕಾರ್ಯಕರ್ತರಾದ ಗಣಪತಿ ಶಾಸ್ತ್ರಿ ಇವರು ಆಗಮಿಸಿ ಕಾರ್ಯಚಟುವಟಿಕೆಯ ಬಗ್ಗೆ ಶ್ಲಾಘಿಸಿ ಸಂಘಟನೆಯ ಸಮರ್ಥವಾದ ಸಂಯೋಜನೆ ಮತ್ತು ಬೆಳವಣಿಗೆಗೆ ಇಂತಹ ಕಾರ್ಯ ಸಮಯೋಚಿತವೂ ಅನಿವಾರ್ಯವೂ ಆಗಿದೆ ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಪೆರ್ಲದ ಸಜೀವನ್, ಪೆರಡಾಲ ವಲಯದ ಕಾರ್ಯದರ್ಶಿ ಹರಿಪ್ರಸಾದ ಪೆರ್ಮುಖ, ಶಿವರಾಮ ದೊಡ್ಡಮಾಣಿ, ಶಂಭಟ್ಟ ಕುದ್ರೆಪಾಡಿ ಇವರು ಮುಳಿಹುಲ್ಲು ಕತ್ತರಿಸುವ ಯಂತ್ರಗಳನ್ನು ಒದಗಿಸಿದರು.
ಮಾತೃ ವಿಭಾಗದ ಸಹಕಾರದೊಂದಿಗೆ ಬಾಯಾರಿಕೆ, ಉಪಹಾರದ ವ್ಯವಸ್ಥೆ, ಕೋಡಿಮೂಲೆ ಕೃಷ್ಣಭಟ್ಟರ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಲಾಯಿತು. ಅಂದಾಜು 400ಕಟ್ಟ ಮುಳಿಹುಲ್ಲನ್ನು ಪೆರ್ಲದ ಅಮೃತಧಾರಾ ಗೋಶಾಲೆಗೆ ಸಾಗಿಸಲಾಯಿತು.