ಕಾಸರಗೋಡು: ಕೇಂದ್ರ ಸರಕಾರದ ಕಾರ್ಮಿಕ ನೀತಿಯನ್ನು ಪ್ರತಿಟಿಭಸಿ ವಿವಿಧ 10 ಕಾರ್ಮಿಕ ಸಂಘಟನೆಗಳು ಕರೆ ನೀಡಿದ 48 ಗಂಟೆಗಳ ಭಾರತ್ ಬಂದ್ ಮುಷ್ಕರಕ್ಕೆ ಎರಡನೇ ದಿನವಾದ ಬುಧವಾರ ಕಾಸರಗೋಡು ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ರಾಜ್ಯ ಸಾರಿಗೆ ಬಸ್ ಮತ್ತು ಖಾಸಗಿ ಬಸ್‍ಗಳು ರಸ್ತೆಗಿಳಿಯದಿದ್ದರೂ, ಆಟೋ ರಿಕ್ಷಾ, ಟ್ಯಾಕ್ಸಿ ಮೊದಲಾದ ಖಾಸಗಿ ವಾಹನಗಳು ಬಹುತೇಕ ರಸ್ತೆಗಿಳಿಯಿತು.
ಬುಧವಾರ ಕಾಸರಗೋಡು ನಗರದಲ್ಲಿ ಹೆಚ್ಚಿನ ಅಂಗಡಿಗಳು, ಹೊಟೇಲ್‍ಗಳು ತೆರೆದು ಕಾರ್ಯಾಚರಿಸಿದ್ದು, ಖಾಸಗಿ ವಾಹನಗಳು ಎಂದಿನಂತೆ ರಸ್ತೆಯಲ್ಲಿ ಓಡಾಡಿತು. ಮುಷ್ಕರ ನಿರತ ಸಂಘಟನೆಗಳಿಗೆ ಸೇರಿದ ಸಿಬ್ಬಂದಿಗಳು ಬಹುತೇಕ ಮಂದಿ ಹಾಜರಾಗದ ಕಾರಣದಿಂದ ಸರಕಾರಿ ಕಚೇರಿಗಳಲ್ಲಿ ಹಾಜರಾತಿ ಕಡಿಮೆಯಾಗಿತ್ತು. ಬ್ಯಾಂಕ್‍ಗಳಲ್ಲಿ ಹಾಗೂ ಸಹಕಾರಿ ಸಂಸ್ಥೆಗಳಲ್ಲಿ, ಅಂಚೆ ಕಚೇರಿಗಳಲ್ಲಿ ಹಾಜರಾತಿ ಕಡಿಮೆಯಾಗಿತ್ತು.
ಕುಂಬಳೆ, ಮಂಜೇಶ್ವರ, ಉಪ್ಪಳ, ಹೊಸಂಗಡಿ, ಬದಿಯಡ್ಕ, ಮುಳ್ಳೇರಿಯ ಮೊದಲಾದ ಪೇಟೆಗಳಲ್ಲಿ ಬಸ್ ಸರ್ವೀಸ್ ಹೊರತುಪಡಿಸಿ ಜನಜೀವನ ಎಂದಿನಂತಿತ್ತು. ಅಂಗಡಿಗಳು ತೆರೆದಿತ್ತು. ಆಟೋ ರಿಕ್ಷಾ, ಟ್ಯಾಕ್ಸಿ ಸರ್ವೀಸ್ ನಡೆಸಿತು. ಖಾಸಗಿ ವಾಹನಗಳು ಎಂದಿನಂತೆ ರಸ್ತೆಯಲ್ಲಿ ಓಡಾಡಿತು.
ಕಾಂಞಂಗಾಡ್‍ನಲ್ಲೂ ಹಲವು ಅಂಗಡಿಗಳು ತೆರೆದು ಕಾರ್ಯಾಚರಿಸಿತು. ನೀಲೇಶ್ವರ, ಚೆರ್ವತ್ತೂರು, ನೀಲೇಶ್ವರ ಮೊದಲಾದೆಡೆಗಳಲ್ಲೂ ಇದೇ ಪರಿಸ್ಥಿತಿ ಇತ್ತು. ಭಾರತ್ ಬಂದ್ ಬೆಂಬಲಿಗರು ಬುಧವಾರವೂ ಕಾಸರಗೋಡು ನಗರದಲ್ಲಿ ಮೆರವಣಿಗೆ ನಡೆಸಿದರು.
ರಾಜ್ಯದ ವಿವಿಧೆಡೆಗಳಲ್ಲಿ ಬುಧವಾರವೂ ರೈಲು ತಡೆ ನಡೆಸಲಾಯಿತು. ಕಲ್ಲಿಕೋಟೆ, ಕೊಚ್ಚಿ, ವಯನಾಡು, ಕಣ್ಣೂರು ಮೊದಲಾದೆಡೆಗಳಲ್ಲಿ ಬುಧವಾರ ಹೆಚ್ಚಿನ ಅಂಗಡಿಗಳು ತೆರೆದು ಕಾರ್ಯಾಚರಿಸಿತು. ಇದೇ ವೇಳೆ ಈ ಜಿಲ್ಲೆಗಳಲ್ಲಿ ಸಾರಿಗೆ ಬಸ್‍ಗಳು ಹಾಗೂ ಖಾಸಗಿ ಬಸ್‍ಗಳು ರಸ್ತೆಗಿಳಿಯಲಿಲ್ಲ.
ಬ್ಯಾಂಕ್ ವ್ಯವಹಾರಕ್ಕೆ ಹಾನಿ : ರಾಜ್ಯದ ರಾಜಧಾನಿ ತಿರುವನಂತಪುರದಲ್ಲಿ ಎಸ್.ಬಿ.ಐ. ಶಾಖೆಯನ್ನು ಬಂದ್ ಬೆಂಬಲಿಗರು ನುಗ್ಗಿ ಹಾನಿಗೊಳಿಸಿದರು. ಸೆಕ್ರೆಟರಿಯೇಟ್ ಸಮೀಪದಲ್ಲಿರುವ ಈ ಬ್ಯಾಂಕ್ ಬೆಳಿಗ್ಗೆ ತೆರೆದಿತ್ತು. ಇದೇ ವೇಳೆ ಗುಂಪೆÇಂದು ಬ್ಯಾಂಕ್‍ಗೆ ನುಗ್ಗಿ ಬ್ಯಾಂಕ್ ಮುಚ್ಚುವಂತೆ ಕೇಳಿಕೊಂಡಿತು. ಆದರೆ ಬ್ಯಾಂಕ್ ಮುಚ್ಚದಿದ್ದಾಗ ಬ್ಯಾಂಕ್‍ನಲ್ಲಿದ್ದ ಕಂಪ್ಯೂಟರ್, ಫೆÇೀನ್, ಕಿಟಕಿ ಗಾಜು ಹಾನಿಗೊಳಿಸಲಾಯಿತು. ಘಟನೆಗೆ ಸಂಬಂಧಿಸಿ ಬ್ಯಾಂಕ್ ಪ್ರಬಂಧಕ ನೀಡಿದ ದೂರಿನಂತೆ ಕಂಟೋನ್ಮೆಂಟ್ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಸಿಐಟಿಯು, ಐಎನ್‍ಟಿಯುಸಿ, ಎಐಟಿಯುಸಿ, ಎಸ್‍ಟಿಯು, ಯುಟಿಯುಸಿ, ಎಚ್‍ಎಂಎಸ್, ಕೆಟಿಯು, ಸೆವಾ, ಟಿಯುಸಿಐ, ಕೆಟಿಯುಸಿ(ಎಂ), ಐಎನ್‍ಎಲ್‍ಸಿ, ಎನ್‍ಟಿಯುಐ, ಎಚ್‍ಎಂಕೆಪಿ, ಎಐಟಿಯುಐ, ಎನ್‍ಎಲ್‍ಸಿ, ಕೆಟಿಯುಸಿ(ಬಿ), ಕೆಟಿಯುಸಿ(ಜೆ) ಮತ್ತು ಟಿಯುಪಿಸಿ ಇತ್ಯಾದಿ ಕಾರ್ಮಿಕ ಸಂಘಟನೆಗಳ ಸಂಯುಕ್ತ ಒಕ್ಕೂಟವಾದ ಕಾನ್ಪಡರೇಶನ್ ಆಫ್ ಟ್ರಾನ್ಸ್‍ಪೆÇೀರ್ಟ್ ವರ್ಕರ್ಸ್ 48 ಗಂಟೆಗಳ ರಾಷ್ಟ್ರೀಯ ಮುಷ್ಕರಕ್ಕೆ ಕರೆ ನೀಡಿತ್ತು. ಬಿಎಂಎಸ್ ಮತ್ತು ಅದರ ಪೆÇೀಷಕ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಂಡಿಲ್ಲ.