ಉಪ್ಪಳ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಸಂಸ್ಥೆಯ ಉಪ್ಪಳ ಘಟಕದ ವಾರ್ಷಿಕೋತ್ಸವ ಸಮಾರಂಭ ಹಾಗೂ ಉಪ್ಪಳ ಘಟಕದ ವತಿಯಿಂದ ಉಚಿತ ಯಕ್ಷಗಾನ ತರಬೇತಿ ಹೊಂದಿದ ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿಗಳ ರಂಗಪ್ರವೇಶವು ಜ. 27ರಂದು ಭಾನುವಾರ ಅಪರಾಹ್ನ 3.30ರಿಂದ ಕೊಂಡೆವೂರು ಯೋಗಾಶ್ರಮದಲ್ಲಿ ಜರಗಲಿದೆ. ಆ ಬಗೆಗಿನ ಆಮಂತ್ರಣ ಪತ್ರಿಕೆಯನ್ನು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಇತ್ತೀಚೆಗೆ ಬಿಡುಗಡೆಗೊಳಿಸಿದರು.
ಉಪ್ಪಳ ಘಟಕದ ಗೌರವಾಧ್ಯಕ್ಷ ಪಿ.ಆರ್.ಶೆಟ್ಟಿ ಪೊಯ್ಯೆಲು, ಗೌರವ ಸಲಹೆಗಾರ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಸಂಚಾಲಕ ಯೋಗೀಶ ರಾವ್ ಚಿಗುರುಪಾದೆ, ಉಪಾಧ್ಯಕ್ಷ ಪದ್ಮನಾಭ ಭಂಡಾರಿ ಮುಳಿಂಜ, ಕಾರ್ಯದರ್ಶಿ ಪ್ರಜ್ವಲ್ ಶೆಟ್ಟಿ ಮೀನಾರು, ನಾರಾಯಣ ನಾೈಕ್ ನಡುಹಿತ್ಲು, ಜಗದೀಶ್ ಮಂಗಲ್ಪಾಡಿ, ಹಾಗೂ ಉಪ್ಪಳ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದರು.