ಕಾಸರಗೋಡು: ಕಾಲುಬಾಯಿ ರೋಗ ನಿಯಂತ್ರಣ ಚುಚ್ಚುಮದ್ದು ನೀಡಿಕೆ ಸರಣಿಗೆ ಜಿಲ್ಲೆಯಲ್ಲಿ ಚಾಲನೆ ಲಭಿಸಿದೆ. ರಾಜ್ಯ ಪಶುಸಂಗೋಪನೆ ಇಲಾಖೆಯ 25ನೇ ಕಾಲುಬಾಯಿ ರೋಗ ನಿಯಂತ್ರಣ ಚುಚುಮದ್ದು ನೀಡಿಕೆ ಕಾರ್ಯಕ್ರಮ ಅಂಗವಾಗಿ ಜಿಲ್ಲಾ ಮಟ್ಟದ ಕಾರ್ಯ ಜರಗಿತು.
ಜಿಲ್ಲಾ ಮಟ್ಟದ ಕಾರ್ಯಕ್ರಮ ಬೇಳ ಜಾನುವಾರು ಫಾರ್ಮ್ ನಲ್ಲಿ ಜರಗಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಉದ್ಘಾಟಿಸಿದರು. ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಶುಸಂಗೋಪನೆ ಇಲಾಖೆ ಅಧಿಕಾರಿ ಡಾ.ಟಿ.ಜಿ.ಉಣ್ಣಿಕೃಷ್ಣನ್ ಯೋಜನೆ ಕುರಿತು ಮಾಹಿತಿ ನೀಡಿದರು.
ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮೋಹನ್ ಜೋಸೆಫ್, ಗೋರಕ್ಷಾ ಯೋಜನೆ ಜಿಲ್ಲಾ ಸಂಚಾಲಕ ಡಾ.ನಾಗರಾಜ್ ಪಿ., ಬೇಳ ಜಾನುವಾರು ಫಾರ್ಮ್‍ನ ಸಹಾಯಕ ನಿರ್ದೇಶಕ ಡಾ.ಜಿ.ಜಯಪ್ರಕಾಶ್, ಬದಿಯಡ್ಕ ವೆಟರ್ನರಿ ಸರ್ಜನ್ ಡಾ.ಇ.ಚಂದ್ರಬಾಬು, ಕುಂಬಳೆ ವೆಟರ್ನರಿ ಸರ್ಜನ್ ಡಾ.ಶ್ಯಾಮ್ ಮೊದಲಾದವರು ಉಪಸ್ಥಿತರಿದ್ದರು.