ಮಧೂರು: ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಕಾಸರಗೋಡು ಅಂಗಸಂಸ್ಥೆಯ 150 ನೇ ಸಂಪರ್ಕ ಸಭೆಯ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಕಾಸರಗೋಡು ಅಂಗಸಂಸ್ಥೆಯ ಸಭೆಯಲ್ಲಿ ನೀಡಲಾಯಿತು.
ಕೊಲ್ಯದ ರಾಮ ನಾವಡ ಅವರ ಮನೆಯಲ್ಲಿ ಜರಗಿದ ಅಂಗಸಂಸ್ಥೆಯ ಕಾರ್ಯಕಾರಿ ಸಮಿತಿಯ ಸಭೆಯ ಅಧ್ಯಕ್ಷತೆಯನ್ನು ಅಂಗಸಂಸ್ಥೆಯ ಅಧ್ಯಕ್ಷ ಎಸ್.ಎನ್.ಮಯ್ಯ ಬದಿಯಡ್ಕ ಅವರು ವಹಿಸಿದ್ದರು.
150 ನೇ ವಿಶೇಷ ಸಂಪರ್ಕ ಸಭೆಯ ವರದಿಯನ್ನು ಪ್ರಧಾನ ಕಾರ್ಯದರ್ಶಿ ನರಸಿಂಹ ಮಯ್ಯ ಎಂ. ಮಧೂರು ಮಂಡಿಸಿದರು. ಲೆಕ್ಕಪತ್ರವನ್ನು ಕೋಶಾಧಿಕಾರಿ ಬಿ.ಕೃಷ್ಣ ಕಾರಂತ ಮಂಡಿಸಿದರು.
ಸಾಲಿಗ್ರಾಮ ದೇವಾಲಯಕ್ಕೆ ವಾರ್ಷಿಕ ಗುರುಸ್ಥಾನ ಭೇಟಿ ಕಾರ್ಯಕ್ರಮವನ್ನು ಫೆ.3 ರಂದು ನಡೆಸಲು ತೀರ್ಮಾನಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸುವಂತೆ ಕೋರಲಾಯಿತು. ಸಭೆಯಲ್ಲಿ ಎಸ್.ಎನ್.ಮಯ್ಯ ಮಧೂರು ಕೊಲ್ಯ, ಕೃಷ್ಣ ಪ್ರಸಾದ ಅಡಿಗ ಮುಟ್ಟತ್ತೋಡಿ, ಚಂದ್ರಶೇಖರ ರಾವ್ ಏತಡ್ಕ ಮುಂತಾದವರು ಮಾತನಾಡಿದರು.
ಮುಂದಿನ ಸಂಪರ್ಕ ಸಭೆಯನ್ನು ಜ.6 ರಂದು ಅಪರಾಹ್ನ ಪುತ್ತಿಗೆಯ ಕಟ್ಟತ್ತಡ್ಕದ ಎಂ.ನರಸಿಂಹ ರಾಜ ಮಾಸ್ತರ್ ಅವರ ಮನೆಯಲ್ಲಿ ಜರಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸುವಂತೆ ಕೋರಲಾಗಿದೆ. ಹರಿಕೃಷ್ಣ ಕೆ.ಕೊಲ್ಯ ಸ್ವಾಗತಿಸಿ, ರಾಜೇಶ್ ಬಿ.ಬನ್ನೂರು ವಂದಿಸಿದರು.