ಮತೀಯ ಸೌಹಾರ್ದತೆ ಸಂರಕ್ಷಣೆಗೆ ಯೂತ್ ಕ್ಲಬ್‍ಗಳ ಮುನ್ನಡೆ ಅಗತ್ಯ : ಶಾಸಕ ನೆಲ್ಲಿಕುನ್ನು
ಕಾಸರಗೋಡು: ಮತೀಯ ಸೌಹಾರ್ದತೆ ಮತ್ತು ಪ್ರಜಾಪ್ರಭುತ್ವ ನೀತಿಯ ಮೌಲ್ಯದ ಸಂರಕ್ಷಣೆಯಲ್ಲಿ ಯೂತ್ ಕ್ಲಬ್‍ಗಳು ಮುನ್ನಡೆ ಸಾಧಿಸಬೇಕು ಎಂದು ಶಾಸಕ ಎನ್.ಎ.ನೆಲ್ಲಿಕುನ್ನು ಅಭಿಪ್ರಾಯಪಟ್ಟರು.
ಅವರು ರಾಷ್ಟ್ರೀಯ ಯುವಜನ ಸಪ್ತಾಹ ಆಚರಣೆಯ ಸಮಾರೋಪ ಅಂಗವಾಗಿ ಪುರÀಭವನದಲ್ಲಿ ನಡೆದ ಜಿಲ್ಲಾ ಯುವ ಅಧಿವೇಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಸರಗೋಡು ಜಿಲ್ಲೆಯ ನಿರ್ಮಾಣದಲ್ಲಿ ಯುವಜನತೆ ಪ್ರಧಾನ ಯತ್ನ ನಡೆಸಬೇಕು. ಮತ, ಜಾತಿ, ಭಾಷೆ ಇತ್ಯಾದಿಗಳ ಹೆಸರಲ್ಲಿ ಯುವ ಕ್ಲಬ್‍ಗಳು ಚಟುವಟಿಕೆ ನಡೆಸಲು ಹೊರಟರೆ ಅದು ಸಾಮಾಜಿಕ ಪ್ರಗತಿಗೆ ತಡೆಯಾಗುವ ಭೀತಿಯಿದೆ. ಸಮಾಜವನ್ನು ಒಡೆಯಲು ಯತ್ನಿಸುವ ಯತ್ನಗಳನ್ನು ತಡೆಯಲು ಯುವ ಜನತೆ ಸಿದ್ಧರಾಗಬೇಕು. ವ್ಯಕ್ತಿಗತ ಸ್ಥಾನ, ಪದವಿಗಳಿಗಾಗಿ ಪ್ರಯತ್ನ ನಡೆಸುವ ಬದಲು ಮತೀಯ ಸೌಹಾರ್ದ, ಪ್ರಜಾಪ್ರಭುತ್ವ ನೀತಿ ಉಳಿಕೆಗೆ ಯತ್ನ ನಡೆಸಬೇಕು ಎಂದು ಅವರು ಹೇಳಿದರು
ಜಿಲ್ಲಾಧಿಕಾರಿ ಡಾ.ಡಿ.ಸಜಿತ್‍ಬಾಬು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಅತ್ಯುತ್ತಮ ಚಟುವಟಿಕೆಯ ಕ್ಲಬ್ ಆಗಿ ಆಯ್ಕೆಗೊಂಡ ಗೋಪಿ ಆ್ಯಂಡ್ ನಾಣು ಆಟ್ರ್ಸ್ ಆಂಡ್ ಸ್ಪೋಟ್ರ್ಸ್ ಕ್ಲಬ್‍ಗೆ ಬಹುಮಾನ ವಿತರಣೆ ನಡೆಯಿತು. ಚೌಕಿಯ ಸರ್ವಾನ್ಸ್ ಆಟ್ರ್ಸ್ ಆಂಡ್ ಸ್ಪೋಟ್ರ್ಸ್ ಕ್ಲಬ್, ಯೂತ್ ಕಲ್ಚರಲ್ ಸೆಂಟರ್ ಎರಿಯಾಲ್, ಯುಸಖ್ತಿ ಪಬ್ಲಿಕ್ ಗ್ರಂಥಾಲಯ ಆಯನ್ನೂರ್ ಸಂಸ್ಥೆಗಳಿಗೆ ಪ್ರತ್ಯೇಕ ಬಹುಮಾನ ವಿತರಿಸಲಾಯಿತು. ನೆಹರೂ ಯುವ ಕೇಂದ್ರದ ಅಂಗಗಳಾದ ವಿವಿಧ ಯೂತ್ ಕ್ಲಬ್ ಗಳಿಗೆ ಕ್ರೀಡಾ ಕಿಟ್ ವಿತರಣೆ ನಡೆಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು.
ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ, ಹೆಚ್ಚುವರಿ ದಂಡಾಧಿಕಾರಿ ಬಿಫಾತಿಮಾ ಇಬ್ರಾಹಿಂ, ಜಿಲ್ಲಾ ಮಾಹಿತಿ ಅ„ಕಾರಿ ಎಂ.ಮಧುಸೂದನನ್, ಯೂತ್ ವೆಲೇರ್ ಬೋರ್ಡ್ ಅ„ಕಾರಿ ಕೆ.ಪ್ರಸೀತಾ, ಕಾಸರಗೋಡು ಸರಕಾರಿ ಕಾಲೇಜಿನ ಎನ್.ಎಸ್.ಎಸ್. ಪೆÇ್ರೀಗ್ರಾಂ ಅಧಿಕಾರಿ ಟಿ.ವಿನಯನ್, ಎನ್.ವೈ.ಕೆ. ಕಾಸರಗೋಡು ಪೆÇ್ರೀಗ್ರಾಂ ಅಧಿಕಾರಿ ಶಾಫಿ ಸಲೀಂ, ಜಿಲ್ಲಾ ಯೂತ್ ಕೋ-ಆರ್ಡಿನೇಟರ್ ಎಂ.ಅನಿಲ್ ಕುಮಾರ್, ಪ್ರತಿನಿ„ ನವೀನ್ ರಾಜ್ ಮೊದಲಾದವರು ಉಪಸ್ಥಿತರಿದ್ದರು.