HEALTH TIPS

ತ್ರಿವಳಿ ತಲಾಕ್ ನಿಷೇಧ: ಸರ್ಕಾರದಿಂದ ಮತ್ತೆ ಸುಗ್ರೀವಾಜ್ಞೆ ಜಾರಿ!

     
   ನವದೆಹಲಿ: ತ್ರಿವಳಿ ತಲಾಕ್ ನಿಷೇಧಿಸುವ ತನ್ನ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರ ಪುನಃಪ್ರಕಟಿಸಿದೆ. ಶನಿವಾರ ಹೊರಡಿಸಿದ  ಮುಸ್ಲಿಂ ಮಹಿಳಾ (ಮದುವೆ ಮೇಲಿನ ಹಕ್ಕುಗಳ ರಕ್ಷಣೆ) 2019 ಆದೇಶದಂತೆ ತ್ರಿವಳಿ ತಲಾಕ್ ಮೂಲಕ ವಿಚ್ಚೇದನ ಹೊಂದುವುದು ಕಾನೂನು ಬಾಹಿರ. ಹಾಗೂ ಈ ವಿಚ್ಚೇದನವು ಕಾನೂನಿನಡಿ ಮಾನ್ಯವಾಗತಕ್ಕದ್ದಲ್ಲ. ಅಲ್ಲದೆ ಈ ಬಗೆಯಲ್ಲಿ ತ್ರಿವಳಿ ತಲಾಕ್ ನಿಡಿದ ಪತಿ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
    2018ರ ಸೆಪ್ಟೆಂಬರ್ ನಲ್ಲಿ ತನ್ನ ಹಿಂದಿನ ಮಸೂದೆಯ ಕೆಲ ಭಾಗಗಳಲ್ಲಿ ಪರಿವರ್ತಿಸಿ ಮತ್ತೆ ಲೋಕಸಭೆಯಲ್ಲಿ ಮಂಡಿಸಿದ್ದ ಸರ್ಕಾರ ಲೋಕಸಭೆಯಲ್ಲಿ ಮಸೂದೆ ಅಂಗೀಕಾರಗೊಳಿಸುವುದರಲ್ಲಿ ಯಶಸ್ವಿಯಾಗಿದೆ. ಇದೀಗ ತ್ರಿವಳಿ ತಲಾಕ್ ಮಸೂದೆ ರಾಜ್ಯಸಭೆ ಅಂಗಣದಲ್ಲಿದೆ.
    ಈ ಮಸೂದೆಯು ಸಂಸತ್ತಿನ ಅಂಗೀಕಾರವನ್ನು ಪಡೆಯಲು ಸಾಧ್ಯವಾಗದ ಕಾರಣ,ಈಗ ಮತ್ತೆ ಹೊಸ ಸುಗ್ರೀವಾಜ್ಞೆ  ಜಾರಿಗೊಳಿಸಲಾಗಿದೆ. ಈ ಮೊದಲು ಕಳೆದ ವಾರ ಸಭೆ ಸೇರಿದ್ದ ಕೇಂದ್ರ ಸಂಪುಟ ಆದೇಶದ ಮರುಪರಿಶೀಲನೆಗೆ ಒಪ್ಪಿಗೆ ನೀಡಿತ್ತು.ಪ್ರಸ್ತಾವಿತ ಕಾನೂನನ್ನು ದುರ್ಬಳಕೆ ಮಾಡಬಹುದೆಂಬ ಭೀತಿಯಿಂದ ಸರ್ಕಾರ ಕೆಲವು ಸುರಕ್ಷತಾ ಅಂಶವನ್ನೊಳಗೊಂಡಂತೆ ಈ ಹೊಸ ಸುಗ್ರೀವಾಜ್ಞೆ ನೀಡಿದೆ.
        ಹೊಸ ಸುಗ್ರೀವಾಜ್ಞೆಯಲ್ಲಿನ ಕೆಲ ಅಂಶಗಳು ಹೀಗಿದೆ:
     ಆರೋಪಿಯು ಇದೊಂದು ಜಾಮೀನು ರಹಿತ ಅಪರಾಧವಾಗಿದ್ದರೂ ಸಹ ವಿಚಾರಣೆಗೆ ಮುಂಚೆಯೇ ಜಾಮೀನಿಗಾಗಿ ನ್ಯಾಯಾಧೀಶರನ್ನು ಸಂಪರ್ಕಿಸಲು ಅವಕಾಶವಿದೆ.
ಈ ಜಾಮೀನು ರಹಿತ ಅಪರಾಧದಡಿಯಲ್ಲಿ ಪೋಲೀಆರು ಪೋಲೀಸ್ ಠಾಣೆಯಲ್ಲಿಯೇ ಜಾಮೀನು ನೀಡುವುದಕ್ಕೆ ಸಾಧ್ಯವಿಲ್ಲ.
    ಪತ್ನಿಯ ಹೇಳಿಕೆ ಕೇಳಿದ ನಂತರ ಜಾಮೀನು ನೀಡಲು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಿಗೆ ಅವಕಾಶವಿದೆ.
     ಮಸೂದೆಯಲ್ಲಿ ಹೇಳಲ್ಪಟ್ಟಂತೆ ಪತ್ನಿಗೆ ಪರಿಹಾರ ನೀಡಲು ಪತಿ ಒಪ್ಪಿಗೆ ನೀಡಿದ ಬಳಿಕವಷ್ಟೇ ಜಾಮೀನು ನೀಡಲಾಗುವುದು.
   ಪತ್ನಿ, ಆಕೆಯ ರಕ್ತ ಸಂಬಂಧಿಗಳು ಅಥವಾ ವಿವಾಹದ ಮೂಲಕ ಸಂಬಂಧಿಗಳಾದವರು ಯಾರಾದರೂ ದೂರಿತ್ತ ಪಕ್ಷದಲ್ಲಿ ಮಾತ್ರ ಪೋಲೀಸರು ಈ ಸಂಬಂಧ ಎ???ಆರ್ ದಾಖಲಿಸಬಹುದು.
     ತ್ರಿವಳಿ ತಲಾಕ್ ಒಂದು ಸೂಕ್ಷ್ಮ ವಿಚಾರವಾಗಿದ್ದು ಓರ್ವ ನ್ಯಾಯಾಧೀಶ ಪತಿ-ಪತ್ನಿಯರ ನಡುವಿನ ವಿವಾದ ಬಗೆಹರಿಸಲು ತನ್ನ ಪ್ರಯತ್ನ ಮಾಡುವುದಕ್ಕೆ ಅವಕಾಶವಿದೆ. ಪತ್ನಿ ಸಹ ನ್ಯಾಯಾಲಯಕ್ಕೆ ಹಾಜರಾದಾಗಲಷ್ಟೇ ಇದು ಸಂಭವಿಸಲಿದೆ.
     ಒಂದು ಸಂಯುಕ್ತ ಅಪರಾಧವಾದ ತ್ರಿವಳಿ ತಲಾಕ್ ಅಪರಾಧದ ದೂರನ್ನು ಎರಡೂ ಪಕ್ಷಗಳು ಒಪ್ಪಿಕೊಂಡಲ್ಲಿ ಹಿಂಪಡೆಯುವುದಕ್ಕೆ ಸಹ ಅವಕಾಶವಿದೆ.
ಈ ಕಾನೂನು ತ್ವರಿತ ತ್ರಿವಳಿ ತಲಾಕ್ ಅಥವಾ  'ತಲಾಕ್-ಇ-ಬಿಡ್ಡತ್ ಗೆ ಮಾತ್ರ ಅನ್ವಯ.ಇನ್ನು ಸಂತ್ರಸ್ಥೆ ಅಥವಾ ಆಕೆ ಚಿಕ್ಕ ಮಕ್ಕಳಿಗೆ ಪರಿಹಾರ ಒದಗಿಸುವ ಅಧಿಕಾರವನ್ನು ಇದು ಆಯಾ ನ್ಯಾಯಾಧೀಶರಿಗೆ ಬಿಡುತದೆ. ಓರ್ವ ಮಹಿಳೆ ನ್ಯಾಯಾಧೀಶರ ಮೂಲಕ ಆಕೆಯ ಚಿಕ್ಕ ಮಕ್ಕಳ ಪಾಲನ್ನು ಪಡೆಯುವುದು ಸಾಧ್ಯ. ಈ ಸಂಬಂಧ ನ್ಯಾಯಾಧೀಶರ ತೀರ್ಮಾನ ಅಂತಿಮವಾಗಿರಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries