ಬದಿಯಡ್ಕ: ಸಾಮಾಜಿಕ, ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಗಳ ಮೂಲಕ ಗ್ರಾಮಾಭಿವೃದ್ದಿಯಲ್ಲಿ ಕ್ರಿಯಾತ್ಮಕವಾಗಿ ಕಾರ್ಯವೆಸಗುವ ಸ್ಥಳೀಯ ಸಂಘಟನೆಗಳು ಸುದೃಢವಾದಷ್ಟು ಪ್ರಾದೇಶಿಕ ಅಭಿವೃದ್ದಿಗೆ ಹೆಚ್ಚು ಶಕ್ತಿ ಬಂದಂತಾಗುತ್ತದೆ. ಜಾತಿ, ಮತ, ಧರ್ಮಾತೀತರಾಗಿ ಯುವ ಸಂಘಟನೆಗಳು ಸಾಮಾಜಿಕ ಏಕತೆ, ಶಾಂತಿ-ಸಮಾಧಾನ ಮತ್ತು ಸ್ವಾವಲಂಬಿ ವ್ಯವಸ್ಥೆ ನಿರ್ಮಿಸಲು ಪೂರಕವಾಗಿ ಕಾರ್ಯಾಚರಿಸಬೇಕು ಎಂದು ಹಿರಿಯ ಸಾಮಾಜಿಕ ಕಾರ್ಯಕರ್ತ, ದೀನಬಂಧು ಸಾಯಿರಾಂ ಗೋಪಾಲಕೃಷ್ಣ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
ಜೋಡುಕಲ್ಲು ಆದರ್ಶ ನಗರದ ಜನಾರ್ಧನ ಕಲಾವೃಂದದ ನೂತನ ಸುಸಜ್ಜಿತ ಕಟ್ಟಡದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಸೋಮವಾರ ಕಿಳಿಂಗಾರಿನ ಸ್ವಗೃಹದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕಲಾವೃಂದದ ಉಪಾಧ್ಯಕ್ಷ ಝಡ್.ಎ.ಕಯ್ಯಾರ್, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಉಪಾಧ್ಯಕ್ಷ ಪ್ರೊ.ಎ.ಶ್ರೀನಾಥ್ ಈ ಸಂದರ್ಭ ಉಪಸ್ಥಿತರಿದ್ದರು.
ಸಾಮಾಜಿಕ, ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಜನಾರ್ಧನ ಕಲಾವೃಂದ 1973ರಲ್ಲಿ ರೂಪುಗೊಂಡು ಜನಪರ ಕಾಳಜಿಗಳ ಮೂಲಕ ಗುರುತಿಸಿಕೊಂಡಿದ್ದು, ಸಂಘಟನೆಯ ನೂತನ ಸುಸಜ್ಜಿತ ಕಟ್ಟಡದ ಉದ್ಘಾಟನೆ ಜ.6 ರಂದು ಬೆಳಿಗ್ಗೆ 10ಕ್ಕೆ ನಡೆಯಲಿದೆ. ಕರ್ನಾಟಕ ವಿಧಾನ ಪರಿಷತ್ತು ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಕಲಾವೃಂದದ ನೂತನ ಕಟ್ಟಡ ಲೋಕಾರ್ಪಣೆಗೊಳಿಸುವರು. ಮಂಗಳೂರು ಸಿಟಿ ಪೋಲೀಸ್ ಕಮಿಷನರ್ ಟಿ.ಆರ್.ಸುರೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪ್ರದೀಪ್ ಕುಮಾರ್ ಕಲ್ಕೂರ, ಸೈಯ್ಯದ್ ಪೂಕೋಯ ತಂಙಳ್ ಕಯ್ಯಾರು, ಜೋಸೆಫ್ ಕ್ರಾಸ್ತಾ ಸ್ನೇಹಾಲಯ, ಶಾಹುಲ್ ಹಮೀದ್ ಬಂದ್ಯೋಡು, ಕೆ.ಎನ್.ಕೃಷ್ಣ ಭಟ್, ಚೇತನಾ ಎಂ ಮೊದಲಾದ ಗಣ್ಯರು ಭಾಗವಹಿಸುವರು. ಬಳಿಕ ಕಲಾವೃಂದದ ಪರಿಸರದಲ್ಲಿ ವಿವಿಧಾಟೋಟ ಸ್ಪರ್ಧೆಗಳು ನಡೆಯಲಿದೆ. ಸಂಜೆ6ಕ್ಕೆಬಹುಮಾನ ವಿತರಣೆ ಹಾಗೂ ಸನ್ಮಾನ ಸಮಾರಂಭ ನಡೆಯಲಿದ್ದು, ಕಲಾವೃಂದದ ಅಧ್ಯಕ್ಷ ರವೀಂದ್ರ ಎಂ.ಎನ್ ಅಧ್ಯಕ್ಷತೆ ವಹಿಸುವರು. ಕಂದಾಯ ಸಚಿವ ಇ.ಚಂದ್ರಶೇಖರನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಬಹುಮಾನಗಳನ್ನು ವಿತರಿಸುವರು. ಅಬ್ದುಲ್ ಲತೀಫ್ ಉಪ್ಪಳ ಗೇಟ್, ಎಕೆಎಂ ಅಶ್ರಫ್, ಹರ್ಷಾದ್ ವರ್ಕಾಡಿ, ಶಂಕರ ರೈ ಮಾಸ್ತರ್, ಕೋಳಾರು ಸತೀಶ್ಚಂದ್ರ ಭಂಡಾರಿ, ಅಜಿತ್ ಎಂ.ಸಿ.ಲಾಲ್‍ಬಾಗ್, ಪ್ರಭಾಕರ ಕಲ್ಲೂರಾಯ ಬನದಗದ್ದೆ, ಖಯ್ಯೂಮ್ ಮಾನ್ಯ, ಮಹಮ್ಮೂದ್ ಇಬ್ರಾಹಿಂ ಚರೋಲಿ, ಕೃಷ್ಣಪ್ಪ ಪೂಜಾರಿ ದೇರಂಬಳ, ದಯಾನಂದ ಮಡಂದೂರು, ಆನಂದ ಕಾರ್ನವರ್ ಜೋಡುಕಲ್ಲು, ವೆಂಕಪ್ಪ ಮಾಸ್ತರ್ ಜೋಡುಕಲ್ಲು, ಶಿವರಾಮ ಭಂಡಾರಿ ಪಿಲಿಯಂದೂರು, ಹರೀಶ್ ಪಟ್ಲ ಮೊದಲಾದವರು ಉಪಸ್ಥಿತರಿರುವರು. ಎಸ್.ಜಗದೀಶ್ ಚಂದ್ರ ಅಂಚನ್ ಸೂಪರ್ಪೇಟೆ, ಸಿದ್ದೀಕ್ ಕೆ ಕೆ ನಗರ, ರಾಮಚಂದ್ರ ಪಟ್ಲ, ಲೋರೆನ್ಸ್ ಡಿಸೋಜಾ, ಪ್ರೇಮಲತಾ ಜೋಡುಕಲ್ಲು, ಅಂದುಂಞÂ ಜೋಡುಕಲ್ಲು, ಚಂದ್ರಕಾಂತ ಶೆಟ್ಟಿ ದೇರಂಬಳ ಮೊದಲಾದವರು ಶುಭಹಾರೈಸುವರು.