ಶಬರಿಮಲೆ ಘಟನಾವಳಿಗಳ ಬಗ್ಗೆ ಪ್ರಖರ ಹಿಂದೂ ವಾಗ್ಮಿ ಮಂಜುನಾಥ ಉಡುಪರ ಬರಹ ಸಮರಸದಲ್ಲಿ ಇಂದು
ಇತ್ತೀಚೆಗೆ ಯೂಟ್ಯೂಬ್ ನಲ್ಲಿ ಒಂದು ವೀಡಿಯೋ ನನ್ನನ್ನು ಯೋಚಿಸುವಂತೆ ಮಾಡಿತು.
ಚಿರತೆಯೊಂದು ತುಂಬು ಗರ್ಭಿಣಿ ಜಿಂಕೆಯನ್ನು ಬೇಟೆ ಮಾಡುತ್ತದೆ. ಆ ಜಿಂಕೆ ತನ್ನ ಪ್ರಾಣ ಬಿಡುವ ಸಮಯದಲ್ಲಿ ಈ ಪ್ರಪಂಚಕ್ಕೆ ತನ್ನ ಮರಿಯನ್ನು ಬಿಟ್ಟು ಹೋಗುತ್ತದೆ. ಆ ಹಸುಗೂಸು ಜಿಂಕೆ ಮರಿಯನ್ನು ಭಕ್ಷಿಸದ ಚಿರತೆಯು ಆದ್ರ್ರ ದೃಷ್ಟಿಯಿಂದ ಅದನ್ನು ನೋಡುತ್ತಾ ಆಹಾರಕ್ಕೋಸ್ಕರ ನಿನ್ನ ತಾಯಿಯನ್ನು ಕೊಲ್ಲಬೇಕಾಗಿ ಬಂತು ನನ್ನನ್ನು ಕ್ಷಮಿಸಿಬಿಡು ಎನ್ನುವಂತಿತ್ತು.
ಪ್ರಾಣಿ ಪ್ರಪಂಚದಲ್ಲಿ ಇಣುಕಿ ನೋಡಿದರೆ ಇಂತಹ ಹಲವಾರು ಮನಕಲುಕುವ ಮಾನವೀಯ ಘಟನೆಗಳು ಹೇರಳವಾಗಿ ಕಾಣಸಿಗುತ್ತದೆ. ಪ್ರಾಣಿಗಳಿಗೇ ಈ ಮಾನವೀಯತೆಯ ಅಂತಃಕರಣ ಇರಬೇಕಾದರೆ ಎಲ್ಲಾ ಪ್ರಾಣಿಗಳಿಗಿಂತ ತಾನೇ ಶ್ರೇಷ್ಠ ಎಂದು ಬೀಗುವ ಮನುಷ್ಯನಿಗೆ ಇನ್ನೆಷ್ಟಿರಬೇಡ? ಅದರಲ್ಲೂ ಪ್ರಜಾಪ್ರಭುತ್ವದ ಹೆಸರಿನಲ್ಲಿ ಸಂವಿಧಾನ ಬದ್ದವಾಗಿ ಅಧಿಕಾರ ನಡೆಸುತ್ತೇವೆ ಎಂದು ಗದ್ದುಗೆಯೇರುವ ರಾಜಕಾರಣಿಗಳಿಗೆ ತಮ್ಮದೇ ಪ್ರಜೆಗಳ ವಿಚಾರದಲ್ಲಿ ಕಳಕಳಿ ಪೂರ್ವಕ ಮಾನವೀಯ ಅಂತಃಕರಣ ಇರಲೇ ಬೇಕಲ್ಲವೆ ?
ಆದರೆ ಇಂದು ನಡೆಯುತ್ತಿರುವ ರಾಜಕಾರಣಿಗಳ ಆಟಾಟೋಪ ನೋಡಿದರೆ ಹೇಸಿಗೆಯಾಗುತ್ತದೆ. ಇತಿಹಾಸದಲ್ಲೇ ಕೇರಳ ಕಂಡ ಅತೀ ನಿಕೃಷ್ಟ ಹಾಗು ರಾಕ್ಷಸಿ ಮಾನಸಿಕತೆಯ ಮುಖ್ಯಮಂತ್ರಿ ಎಂದು ಹೆಸರಾದ ಪಿಣರಾಯಿ ವಿಜಯನ್ ರನ್ನು ನೋಡುವಾಗ ಹಾಗೇ ಅನ್ನಿಸುತ್ತದೆ.
ಈಗ ನಡೆಯುತ್ತಿರುವ ಶಬರಿಮಲೆ ಕ್ಷೇತ್ರದ ವಿಚಾರವನ್ನೇ ತೆಗೆದುಕೊಂಡರೆ ಸಾಕು ಚೆಗುವೆರಾನ ಹಿಂಬಾಲಕ ಮತಿಗೇಡಿ ಪಿಣರಾಯಿಯ ಹೀನ ಮಾನಸಿಕತೆ ಅರ್ಥವಾಗುತ್ತದೆ. ಭಾರತದ ಹಿಂದುಗಳ ಪವಿತ್ರ ಕ್ಷೇತ್ರದ ಸುಮಾರು ಎಂಟುನೂರು ವರ್ಷಗಳಿಂದ ಅನೂಚಾನವಾಗಿ ನಡೆದುಕೊಂಡು ಬರುತ್ತಿರುವ ಸಂಪ್ರದಾಯಗಳನ್ನು ಭಕ್ತರ ಭಾವನೆಗಳಿಗೆ ವಿರುದ್ದವಾಗಿ ಮುರಿಯುತ್ತಿದ್ದಾರೆಂದರೆ ಏನೆನ್ನಬೇಕು? ರಾಜ್ಯವನ್ನಾಳುವ ವ್ಯಕ್ತಿಗೆ ತನ್ನ ರಾಜ್ಯ ಸುಭಿಕ್ಷವಾಗಿರಬೇಕು ಪ್ರಜೆಗಳು ಸಮಾಧಾನ ಸಂತೋಷದಿಂದಿರಬೇಕೆಂಬ ಚಿಂತನೆ ಇರಬೇಕು . ಪಕ್ಷ,ಸಿದ್ಧಾಂತ ಯಾವುದೇ ಇರಲಿ ಅದು ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯವವರೆಗೆ ಮಾತ್ರ.
ಗೆದ್ದು ಅಧಿಕಾರಕ್ಕೆ ಬಂದ ನಂತರ ಪ್ರಜೆಗಳೆಲ್ಲರನ್ನು ಸಮಾನ ದೃಷ್ಟಿಯಿಂದ ನೋಡಬೇಕು. ಬಹುಜನರ ಭಾವನೆಗೆ ಬೆಲೆ ಕೊಡಬೇಕು. ಮುಖ್ಯಮಂತ್ರಿ ಹುದ್ದೆ ಸಿಕ್ಕುವುದೇ ಪ್ರಜೆಗಳ ರಕ್ತ ಬಸಿದು ಕುಡಿಯುವುದಕ್ಕೆ ಎಂಬ ಚಿಂತನೆ ಬಂದರೆ ಪಿಣರಾಯಿಯಂತಹ ನಾಲಾಯಕ್ ಮುಖ್ಯಮಂತ್ರಿಗಳು ಹುಟ್ಟಿಕೊಳ್ಳುತ್ತಾರೆ. ತಾನು ಕುಳಿತ ಹುದ್ದೆಯ ಘನತೆಯನ್ನರಿಯದೆ ಕೇರಳವನ್ನು ರಕ್ಕಸರ ನಾಡಾಗಿಸಿದ ಪಿಣರಾಯಿ ವಿಜಯನ್ ನಂತಹ ಮೂರ್ಖನಿಗೆ ಆ ಅಯ್ಯಪ್ಪನೇ ಪಾಠ ಕಲಿಸಬೇಕು.
ಎಂಟುನೂರು ವರ್ಷಗಳ ಸಂಪ್ರದಾಯವನ್ನು ನಾಸ್ತಿಕರ ಒತ್ತಾಸೆಯ ಮೇರೆಗೆ ಮುರಿಯಬಹುದೆಂದಾರೆ ಸ್ವಾತಂತ್ರ್ಯ ನಂತರ ಸಿದ್ದವಾದ ಸಂವಿಧಾನವನ್ನು ಮುರಿಯಲಿಕ್ಕಾಗುವುದಿಲ್ಲವೆ?. ಚುನಾವಣೆ ಗೆದ್ದು ಸರಕಾರ ರಚಿಸಬೇಕೆಂದರೆ ಬಹುಮತ ಬೇಕು, ಅದಕ್ಕೆ ಆಧಾರ ಸಂವಿಧಾನ. ಆದರೆ ಕೆಲವೇ ಕೆಲವು ಮತಿಹೀನ ನಾಸ್ತಿಕವಾದಿಗಳನ್ನು ತೃಪ್ತಿ ಪಡಿಸಲು ಎಂಟುನೂರು ವರ್ಷಗಳ ಸಂಪ್ರದಾಯವನ್ನು ಬಹುಜನರ ಭಾವನೆಗೆದುರಾಗಿ ಮುರಿಯುತ್ತಾರೆಂದರೆ ಇದರ ಹಿಂದಿರುವ ಷಡ್ಯಂತ್ರ ಬಹುಸುಲಭವಾಗಿ ಅರ್ಥವಾಗುತ್ತದೆ. ಮೊನ್ನೆ ಮೊನ್ನೆ ನಡೆದ ವನಿತಾ ಮದಿಲ್ ಕಾರ್ಯಕ್ರಮಕ್ಕೆ ಮಹಿಳೆಯರನ್ನು ಹೆದರಿಸಿ ಒತ್ತಾಯ ಪಡಿಸಿ ಕರೆದುಕೊಂಡು ಹೋದದ್ದು ಎಲ್ಲರಿಗೂ ಗೊತ್ತೇ ಇದೆ. ನಂತರ ಎಷ್ಟೋ ಮಹಿಳೆಯರು ಹತ್ತಿರದ ಅಯ್ಯಪ್ಪ ಮಂದಿರಕ್ಕೆ ಬಂದು ತಪ್ಪು ಕಾಣಿಕೆ ಕಟ್ಟಿದಂತಹ ಹಲವು ನಿದರ್ಶನಗಳೂ ಸಿಕ್ಕಿವೆ. ಬಹು ಜನ ಭಕ್ತರ ಭಾವನೆಗಳಿಗೆ ಉದ್ದೇಶ ಪೂರ್ವಕ ಘಾಸಿ ಮಾಡಲು ಪ್ರಯತ್ನಿಸುತ್ತಾರೆಂದರೆ ಪಿಣರಾಯಿ ವಿಜಯನ್ ಗೆ ಪ್ರಾಣಿಗಳಿಗಿದ್ದಷ್ಟೂ ಸಂವೇದನೆ ಇಲ್ಲದಾಯಿತೇ ಎಂಬ ಪ್ರಶ್ನೆ ಮೂಡದಿರದು. ಶಬರಿಮಲೆಗೆ ಯುವತಿಯರನ್ನು ನುಗ್ಗಿಸುವ ವಿಚಾರವಾಗಿ ಸುಪ್ರೀಂ ಕೋರ್ಟ್ ನ ಆದೇಶವನ್ನು ಪಾಲಿಸುತ್ತಿದ್ದೇವೆಂದು ಹೇಳುವ ಮೂರ್ಖ ಶಿಖಾಮಣಿ ಪಿಣರಾಯಿ ಗಂಡಸೇ ಆಗಿದ್ದರೆ ದೇಹದಲ್ಲಿ ನಿಜವಾದ ಅವರ ಹಿರಿಯರ ರಕ್ತವೇ ಹರಿಯುತ್ತಿದ್ದರೆ ಅದೇ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನನ್ವಯ ಮಸೀದಿಗಳಿಗೆ ಧ್ವನಿ ವರ್ಧಕ ಕಟ್ಟಿ ದಿನಕ್ಕೈದು ಬಾರಿ ಒದರುವುದನ್ನು ನಿಲ್ಲಿಸಲಿ ನೋಡೋಣ ?
ಬೀಫ್ ಫೆಸ್ಟಿವಲ್ ಮಾಡಿ ಹಿಂದುತ್ವದ ಸುಧಾರಣೆ ಮಾಡುತ್ತೇವೆ ಎನ್ನುತ್ತೀರಲ್ಲ ರಂಜಾನ್,ಬಕ್ರೀದ್, ನಬಿ, ದಿನಗಳಲ್ಲಿ ಮುಸ್ಲೀಂ ಬಾಹುಳ್ಯದ ಪ್ರದೇಶಗಳಲ್ಲಿ ಪೋರ್ಕ್ ಫೆಸ್ಟ್ ಮಾಡಿ ಇಸ್ಲಾಂನ ಸುಧಾರಣೆ ಮಾಡುತ್ತೇವೆಂದು ಕೇವಲ ಹೇಳಿಕೆ ಕೊಡಿ ನೋಡೋಣ. ಹೊಸ ವರ್ಷಾಚರಣೆಯಂದು ರಾತ್ರಿಯಿಡಿ ಪಾರ್ಟಿ ಮಾಡಲು ಅವಕಾಶವನ್ನು ನಿಬರ್ಂಧಿಸಿ ನೋಡೋಣ .ಲಿಂಗ ಸಮಾನತೆಯೆಂದು ಗಂಟಲು ಹರಿದುಕೊಳ್ಳುವ ನೀವು ಶಬರಿಮಲೆಗೆ ಯುವತಿ ಪ್ರವೇಶದ ಪರವಾಗಿ ಮುಸ್ಲೀಂ ಸ್ತ್ರೀಯರನ್ನು ಒಳಗೊಂಡು ಮಹಿಳಾ ಮಾನವ ಸರಪಳಿಯನ್ನು ಆಯೋಜಿಸುತ್ತೀರಿ,ನಾಚಿಕೆ ಮಾನ ಮರ್ಯಾದೆ ಬಿಟ್ಟು ಈ ಆಂದೋಲನಕ್ಕೆ ರಾಜ್ಯ ಸರ್ಕಾರವೇ ಸಚಿವೆ ಕೆ ಕೆ ಶೈಲಜ ಮೊದಲ ಮಹಿಳೆಯಾಗಿ ಕೈ ಜೋಡಿಸಿ ತಿರುವನಂತಪುರಂ ನಲ್ಲಿ ಸಿಪಿಎಂ ನ ಹಿರಿಯ ಮತಿಗೇಡಿ ನಾಯಕಿ ಬೃಂದಾಕಾರಟ್ ಕೊನೆಯ ಮಹಿಳೆಯಾಗಿ ಭಾಗವಹಿಸುವಂತೆ ಆಂದೋಲನ ರೂಪಿಸುತ್ತೀರಿ. ಪಿಣರಾಯಿ ವಿಜಯನ್ ಮತ್ತು ಸಿಪಿಎಂ ನ ಹಿರಿಯ ನೇತಾರರೇ ನೀವು ಗಂಡಸರೇ ಆಗಿದ್ದಲ್ಲಿ ಒಂದೇ ಪುರುಷನಿಗೆ ಜನಿಸಿದ್ದು ಹೌದಾದಲ್ಲಿ ಲಿಂಗ ಸಮಾನತೆಗೆ ಮಾರಕವಾದ ಬುರ್ಕಾ ನಿಷೇಧ, ತಲಾಕ್ ನಿಷೇಧ, ಇಸ್ಲಾಂ ನಲ್ಲಿ ಬಹುಪತ್ನಿತ್ವ ನಿಷೇಧ ಇದನ್ನೆಲ್ಲ ನಿಷೇಧಿಸಿ ನಿಜವಾದ ಸಮಗ್ರ ಲಿಂಗ ಸಮಾನತೆಗೆ ಕಾರ್ಯಕ್ರಮ ರೂಪಿಸಿ ನೋಡೋಣ...?