ಕುಂಬಳೆ: ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದವಾರ್ಷಿಕ ಜಾತ್ರೆಯ ಅಂಗವಾಗಿ ಗುರುವಾರ ರಾತ್ರಿ ಐತಿಹಾಸಿಕ ಸಿಡಿಮದ್ದು ಪ್ರದರ್ಶನ(ಬೆಡಿ)ಬಾನಂಗಳದಲ್ಲಿ ವರ್ಣ ಚಿತ್ತಾರದೊಮದಿಗೆ ಸಂಪನ್ನಗೊಂಡಿತು.
ಪೋಲೀಸ್ ಇಲಾಖೆಯ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ವಾಡಿಕಿಯ ಸಮಯಕ್ಕಿಂತಲೂ ಮೊದಲು ಆರಂಭಗೊಂಡ ಸಿಡಿಮದ್ದು ಪ್ರದರ್ಶನ ಅರ್ಧ ಗಂಟೆಯಲ್ಲಿ ಸಮಾಪ್ತಿಗೊಂಡಿತು. ಸಾಮಾನ್ಯವಾಗಿ ರಾತ್ರಿ 12ರ ಬಳಿಕ ಶ್ರೀಕ್ಷೇತ್ರದಿಂದ ಬೆಡಿಕಟ್ಟೆಗೆ ದೇವರು ಆಗಮಿಸಿ ಬಳಿಕ ಒಂದೂವರೆ ಗಂಟೆಗಳ ಸುಧೀರ್ಘ ಬೆಡಿ ಸೇವೆ ಇರುತ್ತಿತ್ತು. ಈ ಬಾರಿ ಮಂಜೇಶ್ವರ ತಾಲೂಕು ಸಹಿತ ರಾಜ್ಯದ ಪ್ರಕ್ಷುಬ್ದ ಗಲಭೆ ಸ್ಥಿತಿಗಳ ಕಾರಣ ಪೋಲೀಸ್ ಇಲಾಖೆ ರಾತ್ರಿ 10 ರ ಮೊದಲು ಬೆಡಿ ಸೇವೆ ಜರಗಿಸುವಂತೆ ಒತ್ತಡ ಹೇರಿದ್ದರು.ಪೋಲೀಸರು ಭಾರೀ ಬಂದೋಬಸ್ತ್ ಏರ್ಪಡಿಸಿದ್ದರು. ಪೋಲೀಸ್ ಇಲಾಖೆಯು ಸಂಪ್ರದಾಯ ನಿರ್ವಹಣೆಗೆ ಮೂಗು ತೂರಿಸಿದ್ದರಿಂದ ಸಾಂಕೇತಿಕವೆಂಬಂತೆ ಕುಂಬಳೆ ಬೆಡಿ ಆಚರಣೆಗೊಂಡಿರುವ ಬಗ್ಗೆ ಭಕ್ತರು ತೀವ್ರ ಅಸಮಧಾನ, ಅತೃಪ್ತಿಗೊಂಡಿರುವುದು ಕಂಡುಬಂದಿದೆ.
ಶುಕ್ರವಾರ ಬೆಳಿಗ್ಗೆ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ ನಡೆಯಿತು ಸಂಜೆ ಯಕ್ಷದ್ರುವ ಪಟ್ಲ ಫೌಂಡೇಶನ್ ಕುಂಬಳೆ ಘಟಕದ ನೇತೃತ್ವದಲ್ಲಿ ಯಕ್ಷ ಗಾನ ವೈಭವ ನಡೆಯಿತು. ರಾತ್ರಿ ಯಕ್ಷಗಾನ ಬಯಲಾಟ, ರಾತ್ರಿ 12.30ಕ್ಕೆ ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆ, ಬಳಿಕ ಧ್ವಜಾವರೋಹಣದೊಂದಿಗೆ ಉತ್ಸವ ಸಂಪನ್ನಗೊಂಡಿತು.