ಕಾಸರಗೋಡು: ಜಿಲ್ಲಾಡಳಿತೆ ವತಿಯಿಂದ ಜ.26ರಂದು ಗಣರಾಜ್ಯೋತ್ಸವ ದಿನಾಚರಣೆ ವೈಭವಯುತವಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಗಣರಾಜ್ಯೋತ್ಸವ ಆಚರಣೆ ಸಂಬಂಧ ಪ್ರಥಮ ಸಮಾಲೋಚನೆ ಸಭೆ ಜರುಗಿತು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಭಾವೈಕ್ಯತೆ ಮೂಲಕ ಇಂದು ಸಮಾಜದಲ್ಲಿ ಆವರಿಸಿರುವ ಕಲುಷಿತ ಭಾವನೆಗಳ ನಿವಾರಣೆ ಸಾಧ್ಯವಿದ್ದು, ಗಣರಾಜ್ಯೋತ್ಸವ ಆಚರಣೆ ಇದಕ್ಕೆ ಪೂರಕವಾಗಿದೆ. ಸಾರ್ವಜನಿಕರು ಸಮಾರಂಭದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಅವರು ಈ ಸಂದರ್ಭ ಆಗ್ರಹಿಸಿದರು.
ಸಮಾರಂಭದ ವೇಳೆ ನಡೆಸಬೇಕಾದ ಚಟುವಟಿಕೆಗಳು, ನಡೆಸಬೇಕಾದ ಮುಂಜಾಗರೂಕತೆಗಳು ಇತ್ಯಾದಿ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಅಂದಿನ ಹೊಣೆಗಾರಿಕೆಗಳನ್ನು ವಿವಿಧ ಇಲಾಖೆಗಳಿಗೆ ಹಂಚಿದರು.
ವಿದ್ಯಾನಗರದ ನಗರಸಭೆ ಕ್ರೀಡಾಂಗಣದಲ್ಲಿ ಸಮಾರಂಭ ನಡೆಯಲಿದ್ದು, ಪಥಸಂಚಲನ, ಬ್ಯಾಂಡ್ ಮೇಳ, ಕಲಾ ಕಾರ್ಯಕ್ರಮಗಳು ಇತ್ಯಾದಿ ನಡೆಯಲಿವೆ. ಜಿಲ್ಲೆಯ ವಿವಿಧ ಶಿಕ್ಷಣಾಲಯಗಳ ವಿದ್ಯಾರ್ಥಿಗಳಿಂದ, ಪೆÇಲೀಸ್ ತಂಡಗಳಿಂದ ಪ್ರತ್ಯೇಕ ಪ್ರಸ್ತುತಿಗಳು ನಡೆಯಲಿವೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಹಾಯಕ ಪೆÇಲೀಸ್ ವರಿಷ್ಠಾಧಿಕಾರಿ ಶಿಲ್ಪಾ, ಎ.ಸಿ.ಪಿ ಕೆ.ಕೆ.ಪ್ರೇಂಕುಮಾರ್, ವಿವಿಧ ಇಲಾಖೆಗಳ ಪ್ರತಿನಿಧಿಗಳು, ಶಾಲಾ ಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು.