ಮುಳ್ಳೇರಿಯ: ಕುಂಡಂಗುಳಿ ಶ್ರೀ ಪಂಚಲಿಂಗೇಶ್ವರ ಕ್ಷೇತ್ರದ ಆರಾಟ್ಟು ಮಹೋತ್ಸವ ಜ.19ರ ತನಕ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ
ಉತ್ಸವದ ಅಂಗವಾಗಿ ಶನಿವಾರ ಉತ್ಸವ ಧ್ವಜಾರೋಹಣ ನಡೆಯಿತು. ಜ.13ರಂದು ಬೆಳಿಗ್ಗೆ 6ಕ್ಕೆ ಗಣಪತಿಹೋಮ, 6.30ಕ್ಕೆ ಉಷಃಪೂಜೆ, ತ್ರಿಕಾಲಪೂಜೆ, 9.30ಕ್ಕೆ ಶ್ರೀ ಭೂತಬಲಿ ಉತ್ಸವ, 11ಕ್ಕೆ ನವಕ, 11.30ಕ್ಕೆ ಸತ್ಸಂಗ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂಜೆ 5ಕ್ಕೆ ತಾಯಂಬಕ, 6ಕ್ಕೆ ದೀಪಾರಾಧನೆ, 6.15ಕ್ಕೆ ಭಜನೆ, 7ಕ್ಕೆ ಶ್ರೀ ಪಂಚಲಿಂಗೇಶ್ವರ ಕ್ಷೇತ್ರ ಮಾತೃ ಸಮಿತಿಯವರಿಂದ ತಿರುವಾದಿರ, ರಾತ್ರಿ 7.30ಕ್ಕೆ ಆರಾಧ್ಯ ನೃತ್ಯಶ್ರೀ ನೃತ್ಯ ವಿದ್ಯಾಲಯ ಮಕ್ಕಳ ರಂಗಪ್ರವೇಶ, ನೃತ್ಯನಿಶ, 8ಕ್ಕೆ ನಾಗಸ್ವರ ವಾದನ, 9ಕ್ಕೆ ಉತ್ಸವ, ರಾತ್ರಿಪೂಜೆ ನಡೆಯಿತು.
ಇಂದು(ಜ.14ರಂದು) ಬೆಳಿಗ್ಗೆ 6ಕ್ಕೆ ಗಣಪತಿಹೋಮ, 6.30ಕ್ಕೆ ಉಷಃಪೂಜೆ, 9.30ಕ್ಕೆ ಶ್ರೀ ಭೂತಬಲಿ ಉತ್ಸವ, 11ಕ್ಕೆ ನವಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಮೂಹ ಪ್ರಾರ್ಥನೆ, ಸಂಜೆ 4ಕ್ಕೆ ಶ್ರೀ ಭೂತಬಲಿ ಉತ್ಸವ, 5ಕ್ಕೆ ಬೇಡಗಕ್ಕೆ ಸವಾರಿ, ಕೊಳತ್ತೂರು ಕಾಳರಾತ್ರಿ ಕ್ಷೇತ್ರ ದೈವಗಳ ಸ್ವಾಗತ, ಶ್ರೀ ವೇಲಕ್ಕುನ್ನು ಕ್ಷೇತ್ರದಿಂದ ಸ್ವಾಗತ, ಬೀಂಬುಂಗಾಲ್‍ನಲ್ಲಿ ಚೆಟ್ಟಿ ಸಮೂದಾಯದವರಿಂದ ಸ್ವಾಗತ, ಸಂಜೆ 6ಕ್ಕೆ ಭಜನೆ, ಸಂಜೆ 6.30ಕ್ಕೆ ಶ್ರೀ ಕಿರಾತಮೂರ್ತಿ ಶ್ರೀ ಪಂಚಲಿಂಗೇಶ್ವರ ಯಕ್ಷಗಾನ ಕಲಾಸಂಘದವರಿಂದ ಯಕ್ಷಗಾನ, ರಾತ್ರಿ 9ಕ್ಕೆ ಶ್ರೀ ಭೂತಬಲಿ ಉತ್ಸವ, ಮಹಾಪೂಜೆ ನಡೆಯಲಿದೆ.
ಜ.15ರಂದು ಬೆಳಿಗ್ಗೆ 6ಕ್ಕೆ ಗಣಪತಿಹೋಮ, 6.30ಕ್ಕೆ ಉಷಃಪೂಜೆ, 9.30ಕ್ಕೆ ಶ್ರೀ ಭೂತಬಲಿ ಉತ್ಸವ, 11ಕ್ಕೆ ಭಜನಾಮೃತ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, 3ಕ್ಕೆ ಅಕ್ಷರ ಶ್ಲೋಕ, 5ಕ್ಕೆ ತಯಂಬಕ, ಸಂಜೆ 6ಕ್ಕೆ ದೀಪಾರಾಧನೆ, 6.30ಕ್ಕೆ ಪಂಚವಾದ್ಯಮೇಳ, 7.30ಕ್ಕೆ ಮಹಾಪೂಜೆ, ಮಹೋತ್ಸವ, ನೃತ್ತೋತ್ಸವ ನಡೆಯಲಿದೆ.
ಜ.16ರಂದು ಬೆಳಿಗ್ಗೆ 6ಕ್ಕೆ ಗಣಪತಿಹೋಮ, ಮಧ್ಯಾಹ್ನ 2.30ಕ್ಕೆ ಕೊಪ್ಪಳ್ ಚಂದ್ರಶೇಖರ್ ಇವರಿಂದ ಧಾರ್ಮಿಕ ಭಾಷಣ, ಆರಾಟ್ಟು, ಪಾಂಡಿಕಂಡಕ್ಕೆ ಸವಾರಿ, ಕೋಲಾಟ, ಸಂಜೆ 6ಕ್ಕೆ ಸತ್ಸಂಗ, ರಾತ್ರಿ 10ಕ್ಕೆ ಧ್ವಜಾರೋಹಣ ನಡೆಯಲಿದೆ.
ಜ.17ರಂದು ರಾತ್ರಿ 8ಕ್ಕೆ ದೈವಗಳ ಭಂಡಾರ ಆಗಮನ, 18ರಂದು ಬೆಳಿಗ್ಗೆ 11ಕ್ಕೆ ಪಡಿಂಞಆರ್ ಚಾಮುಂಡಿ ದೈವ, ಉಗ್ರಮೂರ್ತಿ ಪಂಜುರ್ಲಿ, ರಾತ್ರಿ 8ಕ್ಕೆ ರಕ್ತೇಶ್ವರೀ, ವಿಷ್ಣುಮೂರ್ತಿ ದೈವಗಳ ತೊಡಂಗಲ್, ಪಾಷಾಣ ಮೂರ್ತಿ ದೈವ, ಜ.19ರಂದು ಬೆಳಿಗ್ಗೆ 11ಕ್ಕೆ ರಕ್ತೇಶ್ವರೀ ದೈವ, ಮಧ್ಯಾಹ್ನ 2ಕ್ಕೆ ವಿಷ್ಣುಮೂರ್ತಿ ದೈವಕೋಲ ನಡೆಯಲಿದೆ.