ಮಂಜೇಶ್ವರ: ಕಣ್ವತೀರ್ಥ ಶ್ರೀಬ್ರಹ್ಮೇಶ್ವರ ರಾಮಾಂಜನೇಯ ಶ್ರೀಕ್ಷೇತ್ರದಲ್ಲಿ ಕ್ಷೇತ್ರದ ನೂತನ ಸುತ್ತು ಪೌಳಿ ಸಮರ್ಪಣೆ ಮತ್ತು ಕಲಶಾಭಿಷೇಕ ಕಾರ್ಯಕ್ರಮವು ಇಂದು (ಜ.25ರಂದು) ಉಡುಪಿ ಪೇಜಾವರ ಮಠಾಧೀಶರಾದ ಶ್ರೀವಿಶ್ವೇಷ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಯತಿವರ್ಯ ವಿಶ್ವಪ್ರಸನ್ನ ತೀರ್ಥ ಶ್ರೀಗಳ ನೇತೃತ್ವದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬುಧವಾರ ಸಂಜೆ ಬೃಹತ್ ಹೊರೆಕಾಣಿಕೆ ಮೆರವಣಿಗೆಶ್ರೀಕ್ಷೇತ್ರಕ್ಕೆಆಗಮಿಸಿತು. ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕೊಲ್ಯ ಮೂಕಾಂಬಿಕಾ ಕ್ಷೇತ್ರದಾಡಳಿತ ಮೊಕ್ತೇಸರ ಮಧುಸೂದನ ಅಯರ್, ಹಿರಿಯ ಮುಂದಾಳು ಸುಧಾಕರರಾವ್ ಪೇಜಾವರ, ಗೋಪಾಲ ಶೆಟ್ಟಿ ಅರಿಬೈಲು, ಕೃಷ್ಣ ಭಟ್, ಚೋಮ ಬೆಳ್ಚಪ್ಪಾಡ, ಕೃಷ್ಣಪ್ಪ ಬೆಂಗ್ರೆ, ರಮೇಶ್ ಉಪಾಧ್ಯಾಯ, ಮಧುಸೂದನ ಆಚಾರ್ಯ, ಬಾಲಕೃಷ್ಣ ರಾಮಾಡಿ, ಗೋಪಾಲ ಸಾಲ್ಯಾನ್ ಹಾಗೂ ಮಹಿಳಾ ಸಂಘಗಳು, ಸ್ಥಳೀಯ ವಿವಿಧ ಸಂಘಸಂಸ್ಥೆಗಳು, ವಿವಿಧ ಶ್ರದ್ದಾ ಕೇಂದ್ರಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.