HEALTH TIPS

ಉಜ್ವಲ ಯೋಜನೆಯ ಪರಿಕರ ವಿತರಣೆ

        ಬದಿಯಡ್ಕ: ಜನೋಪಯೋಗಿಯಾದ ಹಲವಾರು ಯೋಜನೆಗಳನ್ನು ಕೇಂದ್ರ ಸರಕಾರ ಜಾರಿಗೆ ತಂದಿದ್ದು ಅರ್ಹ ಪ್ರತಿಯೊಬ್ಬ ಫಲಾನುಭವಿಯೂ ಅದರ ಸದುಪಯೋಗವನ್ನು ಪಡೆಯುವಲ್ಲಿ ಮುಂದೆ ಬರಬೇಕು. ಆ ಮೂಲಕ ದೇಶದ ಬಡಜನತೆ ಅಭಿವೃದ್ಧಿಯತ್ತ ಸಾಗಬೇಕು. ಮೋದಿಯರ ಸಮರ್ಥ ಆಡಳಿತದಲ್ಲಿ ದೇಶವು ಪುರೋಗತಿಯನ್ನು ಪಡೆಯುತ್ತಿದೆ ಎಂದು ಧಾರ್ಮಿಕ - ಸಾಮಾಜಿಕ ಮುಂದಾಳು, ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ಮುಖಂಡ ಗೋಪಾಲಕೃಷ್ಣ ಸಿ.ಎಚ್ ಹೇಳಿದರು.
ಇತ್ತಿಚೆಗೆ ಮವ್ವಾರಿನ ಬಿಜೆಪಿ ಕಛೇರಿಯಲ್ಲಿ ನಡೆದ "ಪ್ರಧಾನ ಮಂತ್ರಿ ಉಜ್ವಲ್ ಯೋಜನೆ" ಯ ಮೂರನೇ ಹಂತದ ಗ್ಯಾಸ್ ಸಿಲಿಂಡರ್ ಹಾಗೂ ಸ್ಟೌ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
     ಕೇಂದ್ರದ ನರೇಂದ್ರ ಮೋದಿ ಸರಕಾರ ದೇಶದ ಅಭಿವೃದ್ಧಿಯ ಚಿಂತನೆಯನ್ನು ಮುಂದಿಟ್ಟು ಬಡಜನರಿಗಾಗಿ ಜಾರಿಗೊಳಿಸಿದ ಹಲವಾರು ಯೋಜನೆಗಳಲ್ಲಿ "ಪ್ರಧಾನ ಮಂತ್ರಿ ಉಜ್ವಲ್ ಯೋಜನೆ" ಕೂಡಾ ಒಂದು. ಇದು ಎಲ್ಲಾ ಮನೆಗಳಿಗೂ ಆವಶ್ಯಕತೆಯಿರುವುದಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯನ್ನು ಜನರಿಗೆ ತಲುಪಿಸುವಲ್ಲಿ ನಾವೆಲ್ಲಾ ಕಾರ್ಯಪ್ರವೃತರಾಗೋಣವೆಂದೂ ಅವರು ಹೇಳಿದರು.
     ಬಿಜೆಪಿ ಕುಂಬ್ಡಾಜೆ ಪಂಚಾಯತು ಸಮಿತಿ ಅಧ್ಯಕ್ಷ ಬಿ.ರಾಜೇಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಯುವಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಹರೀಶ್ ಗೋಸಾಡ, ಬಿಜೆಪಿ ಪಂಚಾಯತ್ ಕಾರ್ಯದರ್ಶಿ ಶಶಿಧರ ತೆಕ್ಕೆಮೂಲೆ, ಸದಾಶಿವ ರೈ ಗೋಸಾಡ, ಜನಪ್ರತಿನಿಧಿಗಳಾದ ಯಶೋದಾ ಎನ್., ಶೈಲಜಾ ಭಟ್, ನಳಿನಿ ಕೃಷ್ಣ, ಶಾಂತಾ ಎಸ್. ಭಟ್ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries