ಮಂಜೇಶ್ವರ : ಬೆಜ್ಜ ಶ್ರೀ ಧೂಮವತಿ ಬಂಟ ದೈವಗಳ ಕ್ಷೇತ್ರದ ಶ್ರೀ ದೈವಗಳ ಭಂಡಾರ ಮನೆಯ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಬ್ರಹ್ಮಶ್ರೀ ಬಡಾಜೆ ಬೂಡು ಗೋಪಾಲಕೃಷ್ಣ ತಂತ್ರಿಯವರ ದಿವ್ಯಹಸ್ತದಿಂದ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜ. 18ರಿಂದ 20ರ ವರೆಗೆ ನಡೆಯಲಿದೆ.
ಜ. 18ರಂದು ಶುಕ್ರವಾರ ಮಧ್ಯಾಹ್ನ 2.30ಕ್ಕೆ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಿಂದ ಹೊರೆಕಾಣಿಕೆ ಮೆರವಣಿಗೆ, ಸಂಜೆ 5.ಕ್ಕೆ ತಂತ್ರಿವರ್ಯರ ಆಗಮನ, ಪೂರ್ಣಕುಂಭ ಸ್ವಾಗತ, ಸಾಮೂಹಿಕ ಪ್ರಾರ್ಥನೆ, ಬಳಿಕ ವಿವಿಧ ವೈದಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 7.ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಬ್ರಹ್ಮಕಲಶೋತ್ಸವ ಸಮಿತಿ ಗೌರವಧ್ಯಕ್ಷ ಕೃಷ್ಣಪ್ಪ ಪೂಜಾರಿ ದೇರಂಬಳ ಅಧ್ಯಕ್ಷತೆ ವಹಿಸುವರು, ಬ್ರಹ್ಮಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿಗಳು ದೀಪ ಪ್ರಜ್ವಲನೆಗೈಯಲಿರುವರು.
ವಿದ್ವಾನ್.ಹಿರಣ್ಯ ವೆಂಕಟೇಶ ಭಟ್ ಧಾರ್ಮಿಕ ಭಾಷಣ ಮಾಡಿಲಿರುವರು. ವೇದಿಕೆಯಲ್ಲಿ ಉದ್ಯಾವರ ಮಾಡ ಶ್ರೀ ಅರಸು ಮಂಜಿಷ್ಣಾರ್ ದೈವ ಕ್ಷೇತ್ರದ ಅಣ್ಣ ದೈವದ ಪಾತ್ರಿ ರಾಜ ಬೆಳ್ಚಪ್ಪಾಡ, ವಿ.ಎಚ್.ಪಿ. ಮಾತೃ ಮಂಡಳಿ ಜಿಲ್ಲಾಧ್ಯಕ್ಷೆ ಶ್ರೀಮತಿ ಮೀರಾ ಆಳ್ವ, ಜೀರ್ಣೊದ್ಧಾರ ಸಮಿತಿ ಉಪಾಧ್ಯಕ್ಷ ಕೌಡೂರು ಬೀಡು ಮಾರಪ್ಪ ಭಂಡಾರಿ, ಮೀಂಜ ಗ್ರಾಮ ಪಂಚಾಯತಿ ಸದಸ್ಯೆ ಕುಸುಮ ಮೋಹನ್ ಉಪಸ್ಥಿತರಿರುವರು. ರಾತ್ರಿ 9.ಕ್ಕೆ ಅನ್ನ ಸಂತರ್ಪಣೆ, ರಾತ್ರಿ 10.ಕ್ಕೆ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ, ಶಾರದಾ ಆಟ್ರ್ಸ್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಇವರಿಂದ 'ಬಂಜಿಗ್ ಹಾಕೋಡ್ಚಿ' ನಾಟಕ ಪ್ರದರ್ಶನಗೊಳ್ಳಲಿದೆ. ಜ.19ರಂದು ಶನಿವಾರ ಬೆಳಿಗ್ಗೆ 8.ಕ್ಕೆ ಗಣಪತಿ ಹೋಮ, ಶಾಂತಿ ಹೋಮ, ಪ್ರಾಯಶ್ಚಿತ ಹೋಮ, ಮಧ್ಯಾಹ್ನ 1.ಕ್ಕೆ ಅನ್ನ ಸಂತರ್ಪಣೆ, ಸಂಜೆ 5.ಕ್ಕೆ ಕಲಶಾಧಿವಾಸ, ಅಧಿವಾಸ ಹೋಮ, ಧೂಮವತಿ ಮತ್ತು ಪರಿವಾರ ದೈವಗಳ ಮಂಚ ಅಧಿವಾಸ, ದುರ್ಗಾಪೂಜೆ, ಸಂಜೆ 7.ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಲಿದೆ. ಜೀರ್ಣೊದ್ಧಾರ ಸಮಿತಿ ಅಧ್ಯಕ್ಷ ಎಮ್. ಸಂಜೀವ ಶೆಟ್ಟಿ ಬೆಜ್ಜದ ಗುತ್ತು ಅಧ್ಯಕ್ಷತೆ ವಹಿಸುವರು. ಕಟೀಲು ಕ್ಷೇತ್ರದ ಅನುವಂಶಿಕ ಮೋಕ್ತೇಸರ ವೇದಮೂರ್ತಿ ಅನಂತಪದ್ಮ್ಮನಾಭ ಅಸ್ರಣ್ಣ ಆಶೀರ್ವಚನ ನೀಡಲಿರುವರು. ಮಂಚಿ ಧರ್ಮ ಜಾಗರಣ ಪ್ರತಿಷ್ಠಾನದ ಅಧ್ಯಕ್ಷ ಕೆಯ್ಯೂರು ನಾರಾಯಣ ಭಟ್, ಧಾರ್ಮಿಕ ಸಾಮಾಜಿಕ ಮುಂದಾಳು ಕೃಷ್ಣ ಶಿವಕೃಪಾ ಕುಂಜತ್ತೂರು, ಶ್ರೀ ಕ್ಷೇತ್ರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ ಚೇತನಾ .ಎಮ್, ಮುಂಬೈ ಉದ್ಯಮಿ ಮೋಹನ ಹೆಗ್ಡೆ ಬೆಜ್ಜ ಉಪಸ್ಥಿತರಿರುವರು. ರಾತ್ರಿ 9.ಕ್ಕೆ ಅನ್ನ ಸಂತರ್ಪಣೆ, 10ಕ್ಕೆ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ತಾಂಬೂಲ ಕಲಾವಿದೆರ್ ಪೂಂಜಾಲ ಕಟ್ಟೆ ಕುಡ್ಲ ಇವರಿಂದ 'ಅರ್ಗಂಟ್' ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ. ಜ.20ರಂದು ಬೆಳಿಗ್ಗೆ 7.ಕ್ಕೆ ಗಣಪತಿ ಹೋಮ, 8.32ರ ಕುಂಭ ಲಗ್ನ ಶುಭ ಮೂಹೂರ್ತದಲ್ಲಿ ಶ್ರೀ ಧೂಮವತಿ ಬಂಟ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶಾಭಿಷÉೀಕ, ದುರ್ಗಾ ಹೋಮ, ದೈವಗಳ ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1.ಕ್ಕೆ ಅನ್ನ ಸಂತರ್ಪಣೆ, ರಾತ್ರಿ 8ಕ್ಕೆ ಚೌಕಿ ಪೂಜೆ, 8.30ರಿಂದ ಅನ್ನ ಸಂತರ್ಪಣೆ, 9.00ಕ್ಕೆ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮುಲ್ಕಿ ಇವರಿಂದ 'ಬಾಲೆ ಭಗವಂತ'ನ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.