ಬದಿಯಡ್ಕ: ನೀರ್ಚಾಲು ಸಮೀಪದ ಕುಕ್ಕಂಗೋಡ್ಲು ಶ್ರೀಕಂಠಪ್ಪಾಡಿ ಶ್ರೀಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ವಾರ್ಷಿಕ ಕಿರು ಷಷ್ಠೀ ಉತ್ಸವ ಜ.12 ರಂದು ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಜ.12 ರಮದು ಪ್ರಾತಃಕಾಲ 6ಕ್ಕೆ ಗಣಪತಿ ಹವನ, 7ಕ್ಕೆದೀಪ ಪ್ರತಿಷ್ಠೆ, ಉಷಃಪೂಜೆ, 11. ರಿಂದ ಶರಣ್ಯ ಶ್ರೀಶ ಕೆ.ಪಂಜ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ. ವಯೋಲಿನ್ ನಲ್ಲಿ ಪ್ರಭಾಕರ ಕುಂಜಾರು, ಮೃದಂಗದಲ್ಲಿ ಶ್ರೀಧರ ಭಟ್ ಮುಳ್ಳೇರಿಯ ಸಹಕರಿಸುವರು. 11.30 ರಿಂದ ನವಕಾಭಿಷೇಕ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 5.30 ರಿಂದ 6.30ರ ವರೆಗೆ ನೀರ್ಚಾಲು ಶ್ರೀಧರ್ಮಶಾಸ್ತಾ ಸೇವಾ ಸಮಿತಿಯವರಿಂದ ಭಜನಾ ಸಂಕೀರ್ತನೆ ನಡೆಯಲಿದೆ. 5.45ಕ್ಕೆ ಶ್ರೀರಕ್ತೇಶ್ವರಿ ತಂಬಿಲ ಸೇವೆ, 6 ರಿಂದ ಪಡಿಯಡ್ಪಿನ ಬಾಲ ಕಲಾವಿದರಿಂದನೃತ್ಯ ವೈವಿಧ್ಯ ಪ್ರಸ್ತುಗೊಳ್ಳಲಿದೆ. 7 ರಿಂದ ಕುಂಬಳೆ ಕೀರ್ತನಾ ಕುಟೀರದ ಕಲಾರತ್ನ ಶಂ.ನಾ.ಅಡಿಗ ಅವರ ಶಿಷ್ಯಂದಿರಾದ ಧನ್ಯಶ್ರೀ ಮತ್ತು ಅರುಣಾ ಅವರಿಂದ ಹರಿಕಥಾ ಸಂಕೀರ್ತನಾ ಸತ್ಸಂಗ ನಡೆಯಲಿದೆ. ರಾತ್ರಿ 8ಕ್ಕೆ ಏಣಿಯರ್ಪು ಕೋದಂಬರತ್ತ್ ತರವಾಡಿನಿಂದ ಶ್ರೀವಿಷ್ಣುಮೂರ್ತಿ ದೈವದ ಭಂಡಾರ ಆಗಮನ, 8.15ಕ್ಕೆ ತೊಡಂಙಲ್, ರಾತ್ರಿ 9 ರಿಂದ ನಾಟ್ಯಮಂಟಪ ಮಧೂರಿನ ಜ್ಯೋಸ್ಸ್ನಾ ಕೊಲ್ಲಂಗಾಬ ತಂಡದವರಿಂದ ಭರತನಾಟ್ಯ ವೈವಿಧ್ಯ ನಡೆಯಲಿದೆ. ರಾತ್ರಿ 9.30ಕ್ಕೆರಾತ್ರಿ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಜ.13 ರಂದು ಭಾನುವಾರಬೆಳಿಗ್ಗೆ 10.30ಕ್ಕೆ ಶ್ರೀವಿಷ್ಣುಮೂರ್ತಿ ದೈವದ ಕೋಲ, ಪ್ರಸಾದ ವಿತರಣೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಭಂಡಾರ ಏಣಿಯರ್ಪಿಗೆ ಹಿಂತಿರುಗುವುದರೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.