ಮಂಜೇಶ್ವರ: ತಮ್ಮ ಪೀಳಿಗೆಯ ಅಭ್ಯುದಯ ಆಕಾಂಕ್ಷಿಗಳಾದ ಹೆತ್ತವರು ಮಕ್ಕಳ ಸೃಜನಶೀಲತೆಯ ಬೆಳವಣಿಗೆಗೆ ಪೂರಕರಾಗಿ ಮಾರ್ಗದರ್ಶನ ನೀಡಬೇಕು. ಎಳೆಯ ಹರೆಯದ ಪ್ರತಿಯೊಂದು ಘಟನೆಗಳೂ ಭವಿಷ್ಯ ರೂಪಿಸುವಲ್ಲಿ ಪ್ರತಿಫಲನಗೊಳ್ಳುವುದೆಂಬುದನ್ನು ಗ್ರಹಿಸುವ ತಾರ್ಕಿಕತೆ ಹೆತ್ತವರಲ್ಲಿರಬೇಕು. ಮಕ್ಕಳ ಬೌದ್ದಿಕ-ಶಾರೀರಿಕ ಬೆಳವಣಿಗೆಯಲ್ಲಿ ಪೋಷಕರು ತಳೆಯುವ ನಿರ್ಧಾರಗಳೇ ಪ್ರಧಾನವಾದುದು ಎಂದು ಖ್ಯಾತ ಆಪ್ತ ಸಲಹೆಗಾರ್ತಿ ಭಾರತೀ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಂಜತ್ತೂರಿನ ಶ್ರೀಮಹಾಲಿಂಗೇಶ್ವರ ವಿದ್ಯಾನಿಕೇತನ ವಿದ್ಯಾಸಂಸ್ಥೆಯಲ್ಲಿ ಶನಿವಾರ ನಡೆದ ಮಾತೃಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾಸಂಸ್ಥೆಯ ಅಧ್ಯಕ್ಷ ಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉತ್ತರಕಾಶಿಯ ಕಪಿಲಾಶ್ರಮದ ಶ್ರೀರಾಮಚಂದ್ರ ಸ್ವಾಮೀಜಿ, ಪ್ರಸಾದ್ ಗುರೂಜಿ, ಶಾಲಾ ಪ್ರಾಂಶುಪಾಲ ದಾಮೋದರ ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಆಶಾ ರವಿ ಸ್ವಾಗತಿಸಿ, ಮಮತಾ ಎಂ.ಶಿವಂ ವಂದಿಸಿದರು. ಚಂದ್ರಿಕಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಾತೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.