ಪೆರ್ಲ:ಎಣ್ಮಕಜೆ ಪಂಚಾಯಿತಿ ಬಂಟರ ಸಂಘ, ಮಹಿಳಾ ಸಂಘದ ಮಹಾ ಸಭೆ, ನೂತನ ಸಮಿತಿ ರಚನೆ ಬಜಕೂಡ್ಲು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಇತ್ತೀಚೆಗೆ ನಡೆಯಿತು.
ಬೆಳಿಗ್ಗೆ ಸಾಮೂಹಿಕ ಸತ್ಯ ನಾರಾಯಣ ಪೂಜೆಯ ಬಳಿಕ ನಡೆದ ಸಭೆಯಲ್ಲಿ ನಾರಾಯಣ ಆಳ್ವ ಅಧ್ಯಕ್ಷತೆ ವಹಿಸಿದರು.
ಸಂಘದ ಮಾಜೀ ಅಧ್ಯಕ್ಷ ಸಂಜೀವ ರೈ ಕೆಂಗಣಾಜೆ, ಜಿಲ್ಲಾ ಸಮಿತಿ ಅಧ್ಯಕ್ಷ ಪದ್ಮನಾಭ ರೈ ವಳಮಲೆ, ಪ್ರಸಾದ್ ರೈ ಪೆರಡಾಲ, ಚಂದ್ರಹಾಸ ರೈ ಪೆರಡಾಲ ಮಾತನಾಡಿದರು.
ನೂತನ ಸಮಿತಿ ರಚಿಸಲಾಯಿತು.ಹರಿಪ್ರಸಾದ್ ರೈ, ಬಿ.ಎಸ್.ಗಾಂಭೀರ, ಚಿದಾನಂದ ಆಳ್ವ ಜಿಲ್ಲಾ ಸಮಿತಿಗೆ ಆಯ್ಕೆಯಾದರು.
ಎಣ್ಮಕಜೆ ಪಂಚಾಯಿತಿ ನೂತನ ಸಮಿತಿ ಅಧ್ಯಕ್ಷರಾಗಿ ನಾರಾಯಣ ಆಳ್ವ ಎಣ್ಮಕಜೆ, ಉಪಾಧ್ಯಕ್ಷರುಗಳಾಗಿ ಬಾಲಕೃಷ್ಣ ಶೆಟ್ಟಿ ಕಾಟುಕುಕ್ಕೆ, ಉಮೇಶ್ ಭಂಡಾರಿ ಪೂವನಡ್ಕ, ಕಾರ್ಯದರ್ಶಿ ಶರತ್ಚಂದ್ರ ಶೆಟ್ಟಿ ಶೇಣಿ, ಜತೆ ಕಾರ್ಯದರ್ಶಿಗಳಾಗಿ ರಮೇಶ್ ಚಂದ್ರ ರೈ ನಡುಬೈಲು, ಜನಾರ್ಧನ ರೈ ಸೇರಾಜೆ, ಕೋಶಾಧಿಕಾರಿ ವಿಶ್ವನಾಥ ರೈ ಬಜಕೂಡ್ಲು, ಸದಸ್ಯರಾಗಿ ಸದಾನಂದ ಶೆಟ್ಟಿ ಕುದ್ವ, ಪ್ರಸಾದ್ ರೈ ಪಂಬೆತ್ತಡ್ಕ, ಸುಧಾಕರ ರೈ ಪಡ್ಡಂಬೈಲು, ಸುಂದರ ರೈ ಬಜಕೂಡ್ಲು, ಮಹಿಳಾ ಸಮಿತಿ ಅಧ್ಯಕ್ಷೆಯಾಗಿ ರಾಜೇಶ್ವರಿ ಬಜಕೂಡ್ಲು, ಉಪಾಧ್ಯಕ್ಷೆ ಶಾಂತಾ ಜೆ.ರೈ ಸೇರಾಜೆ, ಪ್ರಫುಲ್ಲ ಶೆಟ್ಟಿ ಬಲ್ತಕ್ಕಲ್ಲು, ಕಾರ್ಯದರ್ಶಿ ವಿದ್ಯಾ ಮಾಯಿಲೆಂಗಿ, ಜತೆ ಕಾರ್ಯದರ್ಶಿ ಅಮಿತ ಬಜಕೂಡ್ಲು, ಚೈತ್ರಾ ಪೂವನಡ್ಕ, ಕೋಶಾಧಿಕಾರಿ ರಾಜಶ್ರೀ ರೈ, ಸದಸ್ಯರುಗಳಾಗಿ ಮೋಹಿನಿ ಆಳ್ವ ಕುದ್ವ, ರಾಧ ಬಜಕೂಡ್ಲು, ಪವಿತ್ರ ರಮೇಶ್ ರೈ ನಡುಬೈಲು, ವಿಲಾಸಿನಿ ಶೆಟ್ಟಿ ಸೂರ್ಡೇಲು, ಅಕ್ಷತ ಬಜಕೂಡ್ಲು, ಜಯಲಕ್ಷ್ಮಿ ಮಾಯಿಲೆಂಗಿ, ಯುವ ಒಕ್ಕೂಟದ ಅಧ್ಯಕ್ಷರಾಗಿ ಗಿರೀಶ್ ರೈ ಕಾಟುಕುಕ್ಕೆ, ಕಾರ್ಯದರ್ಶಿ ಪ್ರವೀಣ್ ರೈ ಬಜಕೂಡ್ಲು, ಕೋಶಾಧಿಕಾರಿ ಅರವಿಂದ ಕುದ್ವ ಆಯ್ಕೆಯಾದರು.
ಬಿ.ಎಸ್.ಗಾಂಭೀರ ಸ್ವಾಗತಿಸಿ, ನಾರಾಯಣ ಆಳ್ವ ವಂದಿಸಿದರು.ಹರಿಪ್ರಸಾದ್ ರೈ ನಿರೂಪಿಸಿದರು.