ಕಾಸರಗೋಡು: ಹೊಗೆಸೊಪ್ಪು ಬಳಕೆ ರಹಿತ ವಿದ್ಯಾಲಯದ ಜಿಲ್ಲಾ ಮಟ್ಟದ ಘೋಷಣೆ ಚಟುವಟಿಕೆಗಳ ಉದ್ಘಾಟನೆ ಇಂದು(ಜ.23) ನಡೆಯಲಿದೆ.
ಜಿಲ್ಲಾಡಳಿತೆ, ಜಿಲ್ಲಾ ಆರೋಗ್ಯ ಇಲಾಖೆ, ರಾಷ್ಟ್ರೀಯ ಹೊಗೆಸೊಪ್ಪು ಬಳಕೆ ನಿಯಂತ್ರಣ ಕಾರ್ಯಕ್ರಮ ಜಂಟಿವತಿಯಿಂದ ಸಮಾರಂಭ ನಡೆಯಲಿದೆ.
ತಳಂಗರೆ ಸರಕಾರಿಮುಸ್ಲಿಂ ವೊಕೇಶನಲ್ ಹೈಯರ್ ಸೆಕಂಡರಿ ಶಾಲೆಯಲ್ಲಿ ಮಧ್ಯಾಹ್ನ 2.30ಕ್ಕೆ ನಡೆಯುವ ಸಮಾರಂಭವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಉದ್ಘಾಟಿಸುವರು. ಸಮಾರಂಭದಲ್ಲಿ ಮಕ್ಕಳಿಗೆ ಸಂರಕ್ಷಣೆ ಸಂಕಲೆ ಯೋಜನೆಯನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸುವರು. ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ ಅಧ್ಯಕ್ಷತೆ ವಹಿಸುವರು. ವಾರ್ಡ್ ಸದಸ್ಯೆ ರಸೀನಾ ರಿಯಾಝ್ ಹೊಗೆಸೊಪ್ಪು ಬಳಕೆ ವಿರುದ್ಧ ಪ್ರತಿಭಟನೆಗೆ ನೇತೃತ್ವ ವಹಿಸುವರು.