ಮುಂಬೈ: ಜೀಯೋ ಮೂಲಕ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಅಧಿಪತ್ಯ ಸಾಧಿಸಿರುವ ಮುಖೇಶ್ ಅಂಬಾನಿ ಅವರು ಇದೀಗ ಇ-ಕಾಮರ್ಸ್ ಮಾರುಕಟ್ಟೆಯಲ್ಲೂ ಅಧಿಪತ್ಯ ಸಾಧಿಸಲು ಮುಂದಾಗಿದ್ದಾರೆ.
ಭಾರತದಲ್ಲಿ ಅಮೆಜಾನ್ ಮತ್ತು ವಾಲ್ ಮಾರ್ಟ್ ನ ಫ್ಲಿಪ್ ಕಾರ್ಟ್ ಗೆ ಪ್ರತಿಸ್ಪರ್ಧಿಯಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹೊಸ ಆನ್ ಲೈನ್ ಶಾಪಿಂಗ್ ತಾಣ ಆರಂಭಿಸುವುದಕ್ಕೆ ಭರ್ಜರಿ ಸಿದ್ಧತೆ ನಡೆಸಿದೆ.
ಭಾರತದಲ್ಲಿ ಎಲ್ಲವನ್ನು ತನ್ನ ಬುಟ್ಟಿಗೆ ಹಾಕಿಕೊಂಡಿರುವ ರಿಲಯನ್ಸ್ ಸಮೂಹ ಇದೀಗ ಆನ್ ಲೈನ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ.
ಗುಜರಾತ್ ನಲ್ಲಿ ನಮ್ಮ 12 ಲಕ್ಷ ಸಣ್ಣ ವ್ಯಾಪಾರಿಗಳನ್ನು ಮತ್ತು ಅಂಗಡಿ ಮಾಲೀಕರನ್ನು ಉತ್ಕೃಷ್ಟಗೊಳಿಸಲು ಜಿಯೋ ಮತ್ತು ರಿಲಯನ್ಸ್ ರಿಟೇಲ್ ವಿಶಿಷ್ಟವಾದ ಹೊಸ ವಾಣಿಜ್ಯ ವೇದಿಕೆ ಪ್ರಾರಂಭಿಸಲಿದೆ ಎಂದು ರಿಲಯನ್ಸ್ ಗ್ರೂಪ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಹೇಳಿದ್ದಾರೆ.