ಉಪ್ಪಳ: ಕಯ್ಯಾರು ಕ್ರಿಸ್ತರಾಜ ದೇವಾಲಯದ ವಾರ್ಷಿಕ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ಪವಿತ್ರ ಮೊಂಬತ್ತಿಯನ್ನು ಕಯ್ಯಾರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಫಾದರ್ ವಿಕ್ಟರ್.ಡಿ.ಸೋಜ ವಿತರಿಸಿದರು.
ಬಳಿಕ ನಡೆದ ದಿವ್ಯಬಲಿ ಪೂಜೆಯನ್ನು ಕಾಸರಗೋಡು ವಲಯ ವಿಕಾರ್‍ವಾರ್ ಹಾಗೂ ಬೇಳ ಶೋಕಮಾತಾ ಪುಣ್ಯಕ್ಷೇತ್ರದ ಧರ್ಮಗುರು ಫಾದರ್ ಜೋನ್‍ವಾಸ್ ನೆರವೇರಿಸಿ, ಪ್ರವಚನ ನೀಡಿದರು.
ನಾರಂಪಾಡಿ ಜೋನ್ ಡಿ ಬ್ರಿಟ್ಟೊ ದೇವಾಲಯದ ಧರ್ಮಗುರು ಫಾ. ಜೋನ್ ಮೊರಾಸ್, ಕೊಲ್ಲಂಗಾನ ದೇವಾಲಯದ ಧರ್ಮಗುರು ಫಾ. ಡೇನಿಯಲ್ ಡಿಸೋಜ, ಉಕ್ಕಿನಡ್ಕ ದೇವಾಲಯದ ಧರ್ಮಗುರು ಫಾ.ರೋಶನ್ ಲೋಪಜ್, ಮಣಿಯಂಪಾರೆ ಸಂತ ಲಾರೆನ್ಸ್ ದೇವಾಲಯದ ಧರ್ಮಗುರು ಫಾ. ಪೌಲ್ ಡಿಸೋಜ, ಕಾಸರಗೋಡು ಶೋಕಮಾತಾ ದೇವಾಲಯದ ಧರ್ಮಗುರು ಫಾ.ಸಂತೋಷ್ ಲೋಬೊ, ಮಂಜೇಶ್ವರ ಅವರ್ ಲೇಡಿ ಆಫ್ ಮೆರ್ಸಿ ದೇವಾಲಯದ ಧರ್ಮಗುರು ಫಾ.ವಲೇರಿಯನ್ ಲೂವಿಸ್, ಕುಂಬಳೆ ಸಂತ ಮೋನಿಕಾ ದೇವಾಲಯದ ಧರ್ಮಗುರು ಫಾ.ಅನಿಲ್ ಪ್ರಕಾಶ್ ಡಿ ಸಿಲ್ವಾ, ಬೋವಿಕ್ಕಾನ ದೇವಾಲಯದ ಧರ್ಮಗುರು ಫಾ.ಸ್ಟ್ಯಾನಿ ಡಿ ಸೋಜ, ಪೆರ್ಮುದೆ ಸಂತ ಲಾರೆನ್ಸ್ ದೇವಾಲಯದ ಧರ್ಮಗುರು ಫಾ.ಮೆಲ್ವಿನ್ ಫೆನಾರ್ಂಡೀಸ್, ಮೀಯಪದವು ಫಾತಿಮಾ ದೇವಾಲಯದ ಧರ್ಮಗುರು ಫಾ. ಅನಿಲ್ ಜೋಯಲ್ ಡಿ ಸೋಜ, ಫಾ.ಎಲಿಯಾಸ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.