ಕೊನೆಗೂ ಬಾವಿಕ್ಕೆರೆ ಕಾಂಕ್ರೀಟ್ ಕಾಮಗಾರಿಗೆ ಚಾಲನೆ
ಕಾಸರಗೋಡು: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಹತ್ವಾಕಾಂಕ್ಷೆಯ ಬಾವಿಕ್ಕೆರೆ ಕುಡಿಯುವ ನೀರು ಯೋಜನೆಯ ಕಾಂಕ್ರೀಟ್ ಕಾಮಗಾರಿಗೆ ಚಾಲನೆ ನೀಡಲಾಯಿತು. ಚಂದ್ರಗಿರಿ ಹೊಳೆಯ ಅತಿ ಎತ್ತರದ ಭಾಗದಲ್ಲಿ ಕಾಂಕ್ರೀಟ್ ಕಾಮಗಾರಿ ಆರಂಭಿಸಲಾಗಿದ್ದು ಉದುಮ ಶಾಸಕ ಕೆ.ಕುಂಞÂರಾಮನ್ ಅವರು ಜೆಸಿಬಿಯನ್ನು ಕೆಳಗಿಳಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಯೋಜನೆಯ ಗುತ್ತಿಗೆಯನ್ನು ಸ್ವೀಕರಿಸಿದ ಚಟ್ಟಂಚಾಲ್‍ನ ಜಾಸ್ಮಿನ್ ಕನ್‍ಸ್ಟ್ರಕ್ಷನ್ ಕಂಪೆನಿಗೆ ಸೈಟ್ ಹಸ್ತಾಂತರಿಸಿದ ಬಳಿಕ ಎರಡು ತಿಂಗಳೊಳಗೆ ಕಾಂಕ್ರೀಟ್ ಕಾಮಗಾರಿ ಆರಂಭಿಸಲಾಗಿದೆ. ಕಳೆದ 12 ವರ್ಷಗಳಿಂದ ಈ ಯೋಜನೆ ಸಂದಿಗ್ಧಾವಸ್ತೆಯಲ್ಲಿತ್ತು. ಹೊಳೆಯ ಆಳ ಹೆಚ್ಚಳವಿರುವ ಭಾಗದ ಕಾಮಗಾರಿಯನ್ನು ಉಪೇಕ್ಷಿಸಿ ಈ ಹಿಂದೆ ಗುತ್ತಿಗೆ ಸ್ವೀಕರಿಸಿದ ಗುತ್ತಿಗೆದಾರರು ಕಾಮಗಾರಿಯಿಂದ ಹಿಂದೆ ಸರಿದಿದ್ದರು. ಆಳ ಹೆಚ್ಚಿರುವ ಭಾಗಕ್ಕೆ ಹೋಗಲು ಹೊಸದಾಗಿ ರಸ್ತೆ ನಿರ್ಮಿಸಿ ಹೊಳೆಯಲ್ಲಿ ಆಳದಲ್ಲಿ ಶೀಲ್ಡ್ ಪ್ಲೇಟ್ ಅಳವಡಿಸಿ ಮಣ್ಣು ಹಾಕಿ ಅಣೆಕಟ್ಟು ನಿರ್ಮಿಸಿ ನೀರು ತಡೆಹಿಡಿದು ಕಾಂಕ್ರೀಟ್ ಕಾಮಗಾರಿ ಆರಂಭಿಸಲಾಗಿತ್ತು. ನುರಿತ ಕಾರ್ಮಿಕರನ್ನು ಬಳಸಿ ಆಧುನಿಕ ವ್ಯವಸ್ಥೆಗಳೊಂದಿಗೆ ಕಾಮಗಾರಿ ನಡೆಯುತ್ತಿದೆ. ನೂತನ ನಿರ್ಮಾಣ ಉಪಕರಣಗಳ ಸಹಾಯದೊಂದಿಗೆ ಕಾಮಗಾರಿ ವೀಕ್ಷಿಸಲು ಸ್ಥಳೀಯ ನಿವಾಸಿಗಳ ಜನದಟ್ಟಣೆ ಯೋಜನಾ ಪ್ರದೇಶದಲ್ಲಿ ದಿನಾ ಕಂಡುಬರುತ್ತಿದೆ.
ಕಾಸರಗೋಡು ನಗರ ಸಹಿತ ಕೆಲವು ಗ್ರಾಮ ಪಂಚಾಯತಿ ಪ್ರದೇಶಗಳಿಗೆ ಕುಡಿಯುವ ನೀರು ತಲುಪಿಸಲಿರುವ ಈ ಯೋಜನೆಯಿಂದ ಪ್ರದೇಶ ನಿವಾಸಿಗಳಿಗೆ ಪ್ರಯೋಜನವಾಗಲಿದೆ. ಇದೇ ವೇಳೆ ಅಣೆಕಟ್ಟಿನೊಂದಿಗೆ ಟ್ರ್ಯಾಕ್ಟರ್‍ವೇ ನಿರ್ಮಿಸಲು ಅನುಮತಿ ಲಭಿಸಿದೆ. ಟ್ರ್ಯಾಕ್ಟರ್‍ವೇಯ ಪ್ರಾಥಮಿಕ ಪ್ರಕ್ರಿಯೆಗಳಿಗೆ ಆರು ಲಕ್ಷ ರೂ. ಮಂಜೂರುಗೊಳಿಸಲಾಗಿದೆ. ಟ್ರ್ಯಾಕ್ಟರ್‍ವೇ ನಿರ್ಮಾಣ ಅಣೆಕಟ್ಟಿನೊಂದಿಗೆ ಇದೇ ಗುತ್ತಿಗೆದಾರರನ್ನಿಟ್ಟುಕೊಂಡು ಪೂರ್ಣಗೊಳಿಸಲು ಪರಿಸರ ನಿವಾಸಿಗಳು ಆಗ್ರಹಿಸಿದ್ದಾರೆ. ಈ ವಿಷಯದಲ್ಲಿ ವಿಳಂಬಗೊಳ್ಳದೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.
ಏನಂತಾರೆ:
* ಕಾಸರಗೋಡು ನಗರ ಸಹಿತ ಕೆಲವು ಗ್ರಾಮ ಪಂಚಾಯತ್ ಪ್ರದೇಶಗಳಿಗೆ ಕುಡಿಯುವ ನೀರು ತಲುಪಿಸಲಿರುವ ಈ ಯೋಜನೆಯಿಂದ ಪ್ರದೇಶ ನಿವಾಸಿಗಳಿಗೆ ಪ್ರಯೋಜನವಾಗಲಿದೆ ಎಂಬ ಉದ್ದೇಶವನ್ನಿಟ್ಟುಕೊಂಡು ಅಣೆಕಟ್ಟಿನೊಂದಿಗೆ ಟ್ರ್ಯಾಕ್ಟರ್‍ವೇ ನಿರ್ಮಿಸಲು ಅನುಮತಿ ಲಭಿಸಿದೆ.
- ಕೆ.ಕುಂಞÂರಾಮನ್
ಉದುಮ ಶಾಸಕ