ಕಾಸರಗೋಡು, ಜ.30: ಕೇರಳ ಸರಕಾರಿ ವೈದ್ಯಾಧಿಕಾರಿಗಳ ಸಂಘಟನೆಯ ತಜ್ಞ ವೈದ್ಯರ ವಿಭಾಗದಲ್ಲಿ ರಾಜ್ಯದ `ಅತ್ಯುತ್ತಮ ವೈದ್ಯ' ಪ್ರಶಸ್ತಿಗೆ ಡಾ.ಜನಾರ್ಧನ ನಾಯ್ಕ್ ಅವರು ಅರ್ಹರಾಗಿದ್ದಾರೆ.
ಪ್ರಶಸ್ತಿಯನ್ನು ತಿರುವನಂತಪುರದ ಅನಯಾರ ಐ.ಎಂ.ಎ. ಸಭಾಂಗಣದಲ್ಲಿ ನಡೆದ ಸಂಘಟನೆಯ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಕೇರಳ ಆರೋಗ್ಯ ಕಾರ್ಯದರ್ಶಿ ರಾಜೀವ್ ಸದಾನಂದನ್ ಪ್ರಶಸ್ತಿ ನೀಡಿ ಗೌರವಿಸಿದರು.
ಡಾ.ಜನಾರ್ಧನ ನಾಯ್ಕ್ ಪ್ರಸ್ತುತ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.