ಕಾಸರಗೋಡು: ಉತ್ತರ ಮಲಬಾರಿನ ಸಂಸ್ಕøತಿಯ ದ್ಯೋತಕ ತುಳು ಭವನವು ಶೀಘ್ರದಲ್ಲೇ ನನಸಾಗುವುದು ಎಂದು ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್.ಎಂ ಸಾಲಿಯಾನ್ ಹೇಳಿದರು.
ನೀಲೇಶ್ವರದ ಪಿ.ಕೆ ರಾಜನ್ ಮೆಮೋರಿಯಲ್ ಕಾಲೇಜಿನಲ್ಲಿ ನಡೆದ ಶ್ರೀಧರಂ ವಿಚಾರ ಸಂಕೀರ್ಣದ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತುಳು ಭಾಷೆ, ಸಂಸ್ಕøತಿ, ಕಲೆ ಹಾಗೂ ಸಾಹಿತ್ಯದ ಸಂರಕ್ಷಣೆಗೆ ಬೇಕಾದ ಯೋಜನೆಗಳನ್ನು ತುಳು ಭವನದ ಮೂಲಕ ಆಯೋಜಿಸಲಾಗುವುದೆಂದು ಅವರು ಹೇಳಿದರು. ಶತಮಾನಗಳ ಭವ್ಯ ಇತಿಹಾಸವಿರುವ ತುಳು ಜನಪದ ಸಾಹಿತ್ಯ, ಸಂಸ್ಕøತಿಯ ರಕ್ಷಣೆ ಮತ್ತು ಪೋಷಣೆಯ ಕಾರ್ಯ ಅಕಾಡೆಮಿಯಿಂದ ಸಾರ್ಥಕವಾಗಲಿದೆ ಎಂದರು. ಕಣ್ಣೂರು ವಿ.ವಿ ಮಲಯಾಳಂ ವಿಭಾಗದ ಮುಖ್ಯಸ್ಥ ಡಾ.ಎ.ಎಂ ಶ್ರೀಧರ ಅವರಿಗೆ ಏರ್ಪಡಿಸಿದ ಸನ್ಮಾನ ಮತ್ತು ರಾಜ್ಯ ವಿಚಾರ ಸಂಕೀರ್ಣದ ಸಮಾರೋಪ ಕಾರ್ಯಕ್ರಮದಲ್ಲಿ ಡಾ.ವಿ.ಕುಮಾರನ್ ಅಧ್ಯಕ್ಷತೆ ವಹಿಸಿದ್ದರು. ತೃಕರಿಪುರ ಫೋಕ್‍ಲ್ಯಾಂಡ್ ಅಧ್ಯಕ್ಷ ಡಾ.ಪಿ.ಜಯರಾಜನ್, ಡಾ.ಸ್ವರಾಜ್ ಬಶೀರ್, ಉದಿನೂರು ಬಾಲಗೋಪಾಲನ್, ನೀಲೇಶ್ವರ ಪತ್ರಕರ್ತ ಸಂಘದ ಅಧ್ಯಕ್ಷ ಪಿ.ಕೆ ಬಾಲಕೃಷ್ಣನ್, ರತೀಶ್ ಪಿಲಿಕ್ಕೋಡ್, ಡಾ.ಪಿ.ಸುರಬಿಲ, ವಾರ್ಡ್ ಕೌನ್ಸಿಲರ್ ಪಿ.ಮನೋಹರ್,ಸಜಿನ, ಪಿ.ಶಶಿ, ಡಾ.ಕೆ.ಕೆ.ಶಿವದಾಸ್, ಡಾ.ಪಿ.ರೀಜಾ, ಪ್ರಜಿನ್, ಕೆ.ಪಿ ಜಸ್ನ, ಮೊದಲಾದವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ತುಳು ಭಾಷೆ ಮತ್ತು ಸಂಸ್ಕøತಿ ಎಂಬ ವಿಷಯದಲ್ಲಿ ಡಾ.ರಾಧಾಕೃಷ್ಣ ಬೆಳ್ಳೂರು, ಡಾ.ರಾಜೇಶ ಬೆಜ್ಜಂಗಳ, ಪಿ.ಪಿ.ಮಂಜುಳಾ, ಕೆ.ಜಯರಾಜನ್ ಮುಂತಾದವರು ಪ್ರಬಂಧ ಮಂಡಿಸಿದರು. ಡಾ.ಚಂದ್ರಬೋಸ್ ಭಾಷಣವನ್ನು ಭಾಷಾಂತರಿಸಿದರು.