ಬದಿಯಡ್ಕ: ಕಾಸರಗೋಡಿನ ಕನ್ನಡಿಗರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಅಲ್ಪಸಂಖ್ಯಾತರ ರಕ್ಷಣೆ ಮಾಡಬೇಕಾಗಿರುವ ಸರಕಾರವೇ ಇಂಥಾ ಹೇಯ ಕೃತ್ಯಕ್ಕೆ ಮುಂದಾಗಬಾರದು. ಮತ್ತೆ ಮತ್ತೆ ಕನ್ನಡ ಮಾಧ್ಯಮಕ್ಕೆ ಮಲಯಾಳಿ ಅಧ್ಯಾಪಕರ ನೇಮಕದ ಸುದ್ದಿ ಬರುತ್ತಿರುವುದು ಆಘಾತಕಾರಿ ವಿಚಾರವಾಗಿದ್ದು ಅದು ಖಂಡನೀಯ. ಈಗಾಗಲೇ ಕಾಸರಗೋಡಿನ ಕನ್ನಡಿಗರು ತಮಗಾಗುತ್ತಿರುವ ಈ ಅನ್ಯಾಯವನ್ನು ಸರಕಾರದ, ನ್ಯಾಯಾಲಯದ ಗಮನಕ್ಕೂ ತಂದಿದೆ. ಹಾಗಾಗಿ ಸರಕಾರವು ಕೂಡಲೇ ಆ ನೇಮಕಾತಿಗಳಿಗೆ ತಡೆ ನೀಡಿ, ಮುಗ್ಧ ಕನ್ನಡ ಮಕ್ಕಳಿಗೆ ನ್ಯಾಯ ಒದಗಿಸಬೇಕು ಎಂದು ಬದಿಯಡ್ಕದ ರಂಗಸಿರಿ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ವಿದ್ಯೆ ನೀಡುವ ಉದ್ದೇಶ ಭವಿಷ್ಯದ ಉತ್ತಮ ಪ್ರಜೆಗಳ ನಿರ್ಮಾಣ. ಆಯಾಯ ಮಾಧ್ಯಮದಲ್ಲೇ ಪಾಠ ಮಾಡದಿದ್ದರೆ ವಿದ್ಯೆಯ ಉದ್ದೇಶವಾಗಲೀ ಶಾಲೆಯ ಉಪಯೋಗವಾಗಲೀ ಊರಜನತೆಗೆ ದೊರಕುವುದಿಲ್ಲ. ಇದರಿಂದಾಗಿ ಭವಿಷ್ಯದ ಪ್ರಜೆಗಳ ಸಂಸ್ಕಾರ ಕೆಟ್ಟುಹೋಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಬದಿಯಡ್ಕ, ಬೇಕೂರು, ಪೈವಳಿಕೆ ಶಾಲೆಗಳಲ್ಲಿ ಇದೀಗ ನೇಮಕವಾಗಲು ಸಿದ್ಧವಾಗಿರುವ ಅಭ್ಯರ್ಥಿಗಳನ್ನು ಪುನಃ ಕರೆಸಿಕೊಳ್ಳಬೇಕು ಎಂದು ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆ ಅಧ್ಯಾಪಕರ ನೇಮಕವಾದರೆ ರಂಗಸಿರಿ ಸಾಂಸ್ಕøತಿಕ ವೇದಿಕೆಯೂ ಹೋರಾಟದೊಂದಿಗೆ ಸೇರಿಕೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.