ಕಾಸರಗೋಡು: ರಾಜ್ಯದ ಅಂಗನವಾಡಿಗಳನ್ನು ಸಮಗ್ರವಾದ ರೀತಿಯಲ್ಲಿ ಪರಿಷ್ಕರಿಸಲಾಗುವುದು ಹಾಗೂ ಅದಕ್ಕಾಗಿ ಮಾಸ್ಟರ್ ಪ್ಲಾನ್ ತಯಾರಿಸಲಾಗುವುದು ಎಂದು ಆರೋಗ್ಯ ಮತ್ತು ಸಮಾಜ ಕಲ್ಯಾಣ ಖಾತೆ ಸಚಿವೆ ಕೆ.ಕೆ.ಶೈಲಜಾ ಟೀಚರ್ ಕಣ್ಣೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಈ ನೂತನ ಯೋಜನೆಯಂತೆ ಕೇರಳದ ಎಲ್ಲ ಅಂಗನವಾಡಿಗಳಿಗೆ ಏಕೀಕೃತ ಕಟ್ಟಡಗಳನ್ನು ನಿರ್ಮಿಸಿಕೊಡಲಾಗುವುದು. ಅಂಗನವಾಡಿಗಳನ್ನು ಪ್ರಿ ಪ್ರೈಮರಿ ಮಟ್ಟಕ್ಕೇರಿಸಲಾಗುವುದು. ಅಂಗನವಾಡಿ ಮಕ್ಕಳಿಗಾಗಿ ವಿಶೇಷ ಪಠ್ಯ ಪದ್ಧತಿಯನ್ನು ಜಾರಿಗೊಳಿಸಲಾಗುವುದು. ಆ ಮೂಲಕ ಅಂಗನವಾಡಿಗಳನ್ನು ಮಾದರಿ ಶಿಕ್ಷಣ ಕೇಂದ್ರವನ್ನಾಗಿ ಮಾರ್ಪಡಿಸಲು ನಿರ್ಧರಿಸಲಾಗಿದೆ ಎಂದರು.
ಮಾಸ್ಟರ್ ಪ್ಲಾನ್ ತಯಾರಿಸುವ ಹೊಣೆಗಾರಿಕೆಯನ್ನು ಸೆಂಟರ್ ಫೆÇೀರ್ ಡೆವಲಪ್‍ಮೆಂಟ್ ಸ್ಟಡೀಸ್ ಸಂಸ್ಥೆಗೆ ವಹಿಸಿಕೊಡಲಾಗಿದೆ. ಮೊದಲ ಹಂತವಾಗಿ ರಾಜ್ಯದ ಆಯ್ದ ಅಂಗನವಾಡಿಗಳಲ್ಲಿ ಈ ನೂತನ ಪರಿಷ್ಕರಣೆಯನ್ನು ಕಾರ್ಯಗತಗೊಳಿಸಲಾಗುವುದು. ಸ್ಥಳ ಪರಿಮಿತಿ ಅಂಗನವಾಡಿಗಳು ಎದುರಿಸುತ್ತಿರುವ ಒಂದು ಪ್ರಧಾನ ಸಮಸ್ಯೆಯಾಗಿದೆ ಎಂದು ಅವರು ಹೇಳಿದರು.
ಮಾಸ್ಟರ್ ಪ್ಲಾನ್ ಪ್ರಕಾರದ ಅಂಗನವಾಡಿಗಳನ್ನು ನಿರ್ಮಿಸಲು ಕನಿಷ್ಠ ಹತ್ತು ಸೆಂಟ್ಸ್ ಸ್ಥಳವಾದರೂ ಬೇಕಾಗಿ ಬರಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನೇತೃತ್ವದಲ್ಲಿ ರೂಪಿಸಲಾದ ಯೋಜನೆಯ ಸಂದ`ರ್Àದಲ್ಲೂ ಈ ವಿಷಯದ ಬಗ್ಗೆ ಚರ್ಚೆ ನಡೆಸಲಾಗಿತ್ತು. ಅಲ್ಲದೆ ಅಂಗನವಾಡಿ ಮಕ್ಕಳಿಗೆ ಶಿಕ್ಷಣದೊಂದಿಗೆ ಆಟಗಳನ್ನು ಕಲಿಸುವ ಕುರಿತು ಚಿಂತನೆ ನಡೆಯುತ್ತಿದೆ ಎಂದು ಸಚಿವೆ ಕೆ.ಕೆ.ಶೈಲಜಾ ಟೀಚರ್ ಹೇಳಿದರು.