ಕಾಸರಗೋಡು: ಜಿಲ್ಲೆಯಲ್ಲಿ "ಅನಾಥ ರಹಿತ ಕೇರಳ"ಯೋಜನೆ ಜಾರಿಗೊಳಿಸುವ ಅಂಗವಾಗಿ ಜ.17.18 ರಂದು ವಿವಿಧೆಡೆ ಒಂದು ದಿನದ ಕಾರ್ಯಾಗಾರ ನಡೆಯಲಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷರು, ಸ್ಥಾಯೀ ಸಮಿತಿ ಅಧ್ಯಕ್ಷರು, ಸಿ.ಡಿ.ಎಸ್.ಅಧ್ಯಕ್ಷೆಯರು, ಅಕೌಂಟೆಂಟ್, ಸದಸ್ಯ ಕಾರ್ಯದರ್ಶಿಗಳಿಗಾಗಿ ಈ ಕಾರ್ಯಾಗಾರ ನಡೆಯಲಿದೆ. ಕಾಸರಗೋಡು, ಮಂಜೇಶ್ವರ, ಕಾರಡ್ಕ ಬ್ಲಾಕ್ ವ್ಯಾಪ್ತಿಯ ಜನಪ್ರತಿನಿಧಿಗಳಿಗೆ ನಾಳೆ(ಜ.17) ಕಾಸರಗೋಡು ನಗರಸಭೆಯ ವನಿತಾಭವನದಲ್ಲಿ, ಕಾಞÂಂಗಾಡ್, ನೀಲೇಶ್ವರ, ಪರಪ್ಪ ಬ್ಲಾಕ್ ವ್ಯಾಪ್ತಿಯ ಜನಪ್ರತಿನಿಧಿಗಳಿಗೆ ಜ.18ರಂದು ನೀಲೇಶ್ವರ ವ್ಯಾಪಾರಭವನದಲ್ಲಿ ಕಾರ್ಯಾಗಾರ ನಡೆಯಲಿದೆ. ಎಲ್ಲ ಜನಪ್ರತಿನಿಧಿಗಳೂ ತಪ್ಪದೆ ಹಾಜರಾಗುವಂತೆ ಕುಟುಂಬಶ್ರೀ ಜಿಲ್ಲಾ ಸಂಚಾಲಕರು ತಿಳಿಸಿರುವರು.