ಮುಳ್ಳೇರಿಯ: ನೂಜಿಬೆಟ್ಟು ಶ್ರೀ ಮಹಾವಿಷ್ಣು ದೇವಸ್ಥಾನವು ನವೀಕರಣಗೊಂಡು ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಉತ್ಸವವು ಫೆ.2 ರಿಂದ ಫೆ.7 ರ ವರೆಗೆ ವಿವಿಧ ಧಾರ್ಮಿಕ-ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಇದರ ಪೂರ್ವಭಾವಿಯಾಗಿ ಸುಮಾರು 22 ಉಪಸಮಿತಿಗಳು ಕೈಗೊಳ್ಳಬೇಕಾದ ಕಾರ್ಯ ಚಟುವಟಿಕೆಗಳ ಅವಲೋಕನ ಸಭೆಯು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ವಸಂತ ಪೈ ಬದಿಯಡ್ಕ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚೆಂಡೆಮೂಲೆ ಶಿವಪ್ಪ ಗೌಡ ಹಾಗು ವಿವಿಧ ಸಮಿತಿಯ ಸಂಚಾಲಕರುಗಳು ತಮ್ಮ ಕಾರ್ಯವ್ಯಾಪ್ತಿಯ ಚಟುವಟಿಕೆ ಹಾಗು ಬೆಳವಣಿಗೆಗಳನ್ನು ವಿವರಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಸಲಹೆಗಾರರಾದ ಬೆಳ್ಳಿಪ್ಪಾಡಿ ಸದಾಶಿವ ರೈ ಹಾಗು ಕೃಷ್ಣ ಮಣಿಯಾಣಿ ಅಕ್ಕಪ್ಪಾಡಿ, ಆರ್ಥಿಕ ಸಮಿತಿ ಸಂಚಾಲಕ ಸೀತಾರಾಮ ಮನೊಳಿತ್ತಾಯ ಮಾತನಾಡಿದರು. ಕಾರ್ಯದರ್ಶಿ ಸತ್ಯನಾರಾಯಣ ಮನೊಳಿತ್ತಾಯ, ಅಡ್ಡತ್ತಡ್ಕ ಕುಶಾಲಪ್ಪ ಗೌಡ, ವೆಂಕಟಕೃಷ್ಣ ಕಾರಂತ ನೂಜಿಬೆಟ್ಟು, ಕಾರ್ಯದರ್ಶಿ ಬೊಳ್ಪಾರು ಮಹಾಬಲ ರೈ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕ್ಷೇತ್ರದ ಮೊಕ್ತೇಸರ ಟಿ.ಆರ್.ರವೀಂದ್ರಾಚಾರ್ ಸ್ವಾಗತಿಸಿ, ಸಮಿತಿ ಕಾರ್ಯದರ್ಶಿ ವಸಂತ ನೂಜಿಬೆಟ್ಟು ವಂದಿಸಿದರು.