ಮುಂಬೈ: ಭಾರತೀಯ ಚಿತ್ರರಂಗದ ರಾಷ್ಟ್ರೀಯ ವಸ್ತು ಸಂಗ್ರಹಾಲಯವನ್ನು ಶನಿವಾರ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಉದ್ಘಾಟಿಸಿದರು.
ಮ್ಯೂಸಿಯಂ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶ ಬದಲಾಗುತ್ತಿದೆ ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದೆ ಎಂದರು.
ದೇಶದಲ್ಲಿ ಮಿಲಿಯನ್ ಸಮಸ್ಯೆಗಳಿದ್ದರೆ ಅದಕ್ಕೆ ಬಿಲಿಯನ್ ಪರಿಹಾರಗಳಿವೆ ಎಂದು ಪ್ರಧಾನಿ ಹೇಳಿದರು.
ಪ್ರಧಾನಿ ಮೋದಿಗೆ, ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್, ಭಾರತೀಯ ಸೆನ್ಸಾರ್ ಮಂಡಳಿ ಮುಖ್ಯಸ್ಥ ಪ್ರಸೂನ್ ಜೋಶಿ, ಸಾಥ್ ನೀಡಿದರು.
ಈ ವೇಳೆ ಬಾಲಿವುಡ್ ಕಲಾವಿದರಾದ ಜೀತೇಂದ್ರ, ರಣ್ಬೀರ್ ಕಪೂರ್, ಅಮೀರ್ ಖಾನ್, ಆಶಾ ಬೋಂಸ್ಲೆ, ಎ ಆರ್ ರೆಹಮಾನ್, ಬೋನಿ ಕಪೂರ್, ಸುಭಾಷ್ ಗಾಯ್, ಆನಂದ್ ಎಲ್ ರೈ, ರೋಹಿತ್ ಶೆಟ್ಟಿ, ಕರಣ್ ಜೋಹರ್, ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
1997ರಲ್ಲಿ ಈ ಮ್ಯೂಸಿಯಂ ನಿರ್ಮಾಣ ಕೆಲಸ ಆರಂಭವಾಗಿದ್ದು, ಅಂತಿಮವಾಗಿ ಸುಮಾರು ಎರಡು ದಶಕಗಳ ನಂತರ ಸಂಪೂರ್ಣವಾಗಿ ಸಿದ್ಧವಾಗಿ ಇಂದು ಲೋಕರ್ಪಣೆಯಾಗಿದೆ.