ತಿರುವಂತಪುರ: ಪ್ರಸಿದ್ಧ ಪುಣ್ಯ ಕ್ಷೇತ್ರ ಶಬರಿಮಲೆ ಪ್ರವೇಶಿದ್ದ ಇಬ್ಬರು ಮಹಿಳೆಯಲು ಅಯ್ಯಪ್ಪನ ಭಕ್ತರಲ್ಲ, ಮಾವೋವಾದಿಗಳಾಗಿದ್ದರು ಎಂದು ಬಿಜೆಪಿ ಗುರುವಾರ ಹೇಳಿದೆ.
ಮಹಿಳೆಯರು ಶಬರಿಮಲೆ ಪ್ರವೇಶಿಸಿದ ಹಿನ್ನಲೆಯಲ್ಲಿ ಕೇರಳ ರಾಜ್ಯದಲ್ಲಿ ಪ್ರತಿಭಟನೆ ಭುಗಿಲೆದ್ದಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ವಿ. ಮುರಳೀಧರನ್ ಅವರು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕರೆ ನೀಡಿರುವ ಕರಾಳ ದಿನಕ್ಕೆ ಬಿಜೆಪಿ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ.
ನಿನ್ನೆ ಶಬರಿಮಲೆ ಪ್ರವೇಶಿಸಿದ ಇಬ್ಬರು ಮಹಿಳೆಯಲು ಭಕ್ತರಾಗಿರಲಿಲ್ಲ. ಅವರು ಮಾವೋವಾದಿಗಳಾಗಿದ್ದರು. ಇದೆಲ್ಲಾ ಸಿಪಿಐ ಪೂರ್ವನಿಯೋಜಿತ ಯೋಜನೆಯಾಗಿದೆ. ಕೇರಳ ಸರ್ಕಾರ ಹಾಗೂ ಸಿಪಿಎಂ ಜೊತೆಗೆ ಮಾವೋವಾದಿಗಳು ಕೈಜೋಡಿಸಿದ್ದಾರೆಂದು ತಿಳಿಸಿದ್ದಾರೆ.