ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಜರಗುತ್ತಿರುವ ಧನು ಪೂಜಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಂಗೀತ ವಿದುಷಿ ಅನುರಾಧಾ ಭಟ್ ಅಡ್ಕಸ್ಥಳ ಹಾಗೂ ಅವರ ಶಿಷ್ಯೆಯರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.
ಮೃದಂಗದಲ್ಲಿ ಮುರಳೀಕೃಷ್ಣ ಕುಕ್ಕಿಲ ಹಾಗೂ ವಯಲಿನ್‍ನಲ್ಲಿ ಶ್ರೀಪ್ರಿಯಾ ಪರಕ್ಕಜೆ ಸಹಕರಿಸಿದರು. ಅವರನ್ನು ಸಂಗೀತ ವಿದುಷಿ ಶಕುಂತಳಾ ಕೃಷ್ಣ ಭಟ್ ಕುಂಚಿನಡ್ಕ ಅಭಿನಂದಿಸಿದರು. ರಾಮಕೃಷ್ಣ ಕಾಟುಕುಕ್ಕೆ ವಂದಿಸಿದರು.