ಪೆರ್ಲ:ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ್ ಸುರಕ್ಷಾ ವಿಮಾ ಯೋಜನೆ ಸಂಭವನೀಯ ಘಟನೆಯಲ್ಲಿ ಕುಟುಂಬಕ್ಕೆ ಆಧಾರವಾಗುವ ಅತ್ಯಂತ ಶ್ರೇಷ್ಠ ಯೋಜನೆ ಎಂದು ವಾಣೀನಗರ ಹೈಯರ್ ಸೆಕೆಂಡರಿ ಶಾಲಾ ಪಿಟಿಎ ಅಧ್ಯಕ್ಷ, ಮಾಜೀ ವಾರ್ಡ್ ಸದಸ್ಯ ನರಸಿಂಹ ಪೂಜಾರಿ ಹೇಳಿದರು.
ಸ್ವರ್ಗದ ಕೇರಳ ಗ್ರಾಮೀಣ ಬ್ಯಾಂಕ್ ವಾಣೀನಗರ ಶಾಖೆಯಲ್ಲಿ ಗುರುವಾರ ನಡೆದ ಜೀವನ್ ಜ್ಯೋತಿ ವಿಮಾ ಯೋಜನೆ ಅನ್ವಯ ಇತ್ತೀಚೆಗೆ ನಿಧನರಾದ ಪ್ರಕಾಶ್ ಭಟ್ ಅವರ ಪತ್ನಿ ದುಗಾರ್ಂಬಿಕಾ ಅವರಿಗೆ ಮೊತ್ತ ಹಸ್ತಾಂತರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸುರಕ್ಷಾ ವಿಮಾ ಯೋಜನೆ ದುರ್ಘಟನೆ ವಿಮೆಯಾಗಿದ್ದು, ಎರಡು ಲಕ್ಷ ರೂಪಾಯಿ ವಿಮೆಗೆ ಕೇವಲ 12 ರೂಪಾಯಿ ವಾರ್ಷಿಕ ಪ್ರಿಮಿಯಂ ಭರಿಸಬೇಕಾಗುತ್ತದೆ.ಗ್ರಾಮೀಣ ಪ್ರದೇಶದ ಶಾಖೆಯು ಅತ್ಯಲ್ಪ ಅವಧಿಯಲ್ಲಿ ಅತಿ ಹೆಚ್ಚು ಪಾಲಿಸಿ ಮಾಡಿಸಿರುವುದು ಶ್ಲಾಘನೀಯ.ಯೋಜನೆಗಳ ಬಗ್ಗೆ ಪ್ರತಿಯೊಬ್ಬನಲ್ಲೂ ಅರಿವು ಮೂಡಿಸ ಬೇಕು.ಕುಟುಂಬ ಈ ಮೊತ್ತವನ್ನು ಫಲಪ್ರದವಾಗಿ ವಿನಿಯೋಗಿಸಿ ಸದುಪಯೋಗ ಪಡೆಯಲಿ ಎಂದು ಹಾರೈಸಿದರು.
ಕೇರಳ ಗ್ರಾಮೀಣ ಬ್ಯಾಂಕ್ ವಿಭಾಗೀಯ ಮುಖ್ಯ ವ್ಯವಸ್ಥಾಪಕ ಬಾಲನ್ ಮೊತ್ತ ಹಸ್ತಾಂತರಿಸಿ ಮಾತನಾಡಿ, ಶಾಖೆಯು ಈ ಮೊದಲು ಮೂರು ಫಲಾನುಭವಿಗಳಿಗೆ ವಿಮಾ ಯೋಜನೆಯ ಪರಿಹಾರ ಮೊತ್ತ ಹಸ್ತಾಂತರಿಸಿದ್ದು, ಯೋಜನೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಹಸ್ತಾಂತ??ದ ಕಿರು ಸಮಾರಂಭ ಏರ್ಪಡಿಸುತ್ತಿದೆ.ಪ್ರಧಾನ ಮಂತ್ರಿಗಳ ಜೀವನ ಜ್ಯೋತಿ ವಿಮಾ ಯೋಜನೆಯಡಿ 2 ಲಕ್ಷ ರೂಪಾಯಿ ಲಭಿಸಲು 330 ವಾರ್ಷಿಕ ಪ್ರಿಮಿಯಂ ಪಾವತಿಸಬೇಕಾಗಿದ್ದು 18 ರಿಂದ 50 ವರ್ಷದ ವ್ಯಕ್ತಿಗಳು ಅರ್ಹರಾಗಿರುತ್ತಾರೆ.ಯಾವುದೇ ಕಾರಣದ ಮರಣ ಸಂಭವಿಸಿದಲ್ಲಿ 2 ಲಕ್ಷ ರೂಪಾಯಿ ಫಲಾನುಭವಿಗಳಿಗೆ ಸಿಗುತ್ತದೆ.ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ದುರ್ಘಟನೆ ವಿಮೆಯಾಗಿದ್ದು, ಕೇವಲ 12 ರೂಪಾಯಿ ವಾರ್ಷಿಕ ಪ್ರಿಮಿಯಂ ಭರಿಸಬೇಕಾಗಿದ್ದು 18 ರಿಂದ 70 ವರ್ಷದವರೆಗಿನ ವ್ಯಕ್ತಿಗಳು ಇದಕ್ಕೆ ಅರ್ಹರಾಗಿರುತ್ತಾರೆ.ವಿಮೆ ಪಡೆದ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟರೆ ಕುಟುಂಬಕ್ಕೆ 2 ಲಕ್ಷ ರೂಪಾಯಿ ವಿಮೆ ದೊರೆಯುವುದು.ಶಾಶ್ವತ ವಿಕಲಚೇತನರಾದಲ್ಲೂ ಹಣ ದೊರೆಯಲಿದ್ದು, ಭಾಗಶಃ ಹಾನಿಗೊಳಗಾದರೆ 1 ಲಕ್ಷ ರೂಪಾಯಿ ವಿಮೆ ಹಣ ದೊರೆಯುತ್ತದೆ.ಆದರೆ ಬ್ಯಾಂಕ್‍ಗಳಲ್ಲಿ ಉಳಿತಾಯ ಖಾತೆ ಹೊಂದಿರ ಬೇಕಾಗಿರುವುದು ಕಡ್ಡಾಯ ಎಂದರು.
ಬ್ಯಾಂಕ್ ವ್ಯವಸ್ಥಾಪಕ ಚಂದ್ರಶೇಖರನ್ ನಾಯರ್ ಸ್ವಾಗತಿಸಿ, ಸಿಬ್ಬಂದಿ ಜಗದೀಶ್ ವಂದಿಸಿದರು.ಬ್ಯಾಂಕ್ ಕಟ್ಟಡದ ಮಾಲಿಕ ಸೇಸಪ್ಪ ಪೂಜಾರಿ, ದಿ.ಪ್ರಕಾಶ್ ಭಟ್ ಅವರ ಪುತ್ರ ನವನೀತ, ಗ್ರಾಹಕರು ಉಪಸ್ಥಿತರಿದ್ದರು.
.