ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಫೆ. 18 ರಿಂದ 24ರ ವರೆಗೆ ನಡೆಯಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದಲ್ಲಿ ಹಲವು ರೀತಿಯ ಪ್ರಾಣಿಗಳು ಭಾಗವಹಿಸಲಿವೆ. ಅದರಲ್ಲಿ ಒಂದಾದ 11 ತಿಂಗಳು ತುಂಬಿದ ಕೆಂಪು ಬಣ್ಣದ ಕಾಸರಗೋಡು ಗಿಡ್ಡ ತಳಿಯ ಹೆಣ್ಣುಕರುವನ್ನು ಬುಧವಾರ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಯಾಗಭೂಮಿಗೆ ಚೆಂಡೆ ಜಾಗಟೆ ವಾದನಗಳೊಡನೆ ಕಾರ್ಯಕರ್ತರು ಸಂಭ್ರಮದಿಂದ ಬರಮಾಡಿಕೊಂಡರು.
ಮುಳಿಂಜದ ವಿಮಲಾ ಎಸ್. ಶೆಟ್ಟಿಯವರು ಬುಧವಾರ ಬೆಳಿಗ್ಗೆ ಯೋಗಾನಂದ ಸರಸ್ವತೀ ಶ್ರೀಗಳ ಉಪಸ್ಥಿತಿಯಲ್ಲಿ ತಮ್ಮ ಮನೆಯ ಕರುವನ್ನು ಈ ವಿಶಿಷ್ಟಯಾಗಕ್ಕೆ ಸಮರ್ಪಿಸಿದರು. ಇದೇ ಗ್ರಾಮದಲ್ಲಿ ಯಾಗಕ್ಕೆ ಅವಶ್ಯವಾದ ಈ ಕರು ದೊರಕಿರುವುದು, ಪರಿಸರಕ್ಕೆ ಒಳ್ಳೆಯದಾಗಬೇಕೆಂಬ ದೈವೇಚ್ಛೆಯನ್ನು ತೋರಿಸಿಕೊಡುತ್ತದೆ, ಗ್ರಾಮದ ಎಲ್ಲರೂ ಯಾಗಸೇವೆಯಲ್ಲಿ ಪಾಲ್ಗೊಳ್ಳೋಣ ಎಂದು ಶ್ರೀಗಳವರು ಈ ಸಂದರ್ಭದಲ್ಲಿ ಅಶೀರ್ವದಿಸಿದರು.