HEALTH TIPS

ಐಸಿಸಿ ಅಧಿಕೃತ ಟ್ವಿಟರ್ ಕವರ್ ಪೇಜ್ ನಲ್ಲಿ ಧೋನಿ ಚಿತ್ರ: ಅಭಿಮಾನಿಗಳು ಫಿದಾ!

 
            ನವದೆಹಲಿ:  ಇತ್ತೀಚಿಗೆ ಆಸ್ಟ್ರೇಲಿಯಾದ ವಿರುದ್ಧದ ಏಕದಿನ ಸರಣಿ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಹೇಂದ್ರ ಸಿಂಗ್ ಧೋನಿ ಬಗ್ಗೆ  ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.
       ಈ ಮಧ್ಯೆ ಐಸಿಸಿ ಟ್ವೀಟರ್ ನಲ್ಲಿ ಮಹೇಂದ್ರ ಸಿಂಗ್ ಧೋನಿಗೆ  ವಿಶೇಷ ಗೌರವ ನೀಡಿದೆ.  ಐಸಿಸಿಯ ಅಧಿಕೃತ ಟ್ವೀಟರ್ ಖಾತೆಯಲ್ಲಿ ಧೋನಿ ಪೋಟೋವನ್ನು ಕವರ್ ಪೋಟೋ ಆಗಿ ಹಾಕಲಾಗಿದೆ. ಈ ಬಗ್ಗೆ ಧೋನಿ ಅಭಿಮಾನಿಗಳಿಗೆ ಸಂತೋಷ ಇಮ್ಮಡಿಗೊಂಡಿದೆ.
       ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾ ಕಾಪಾಡಿ ಧೋನಿ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದ ನಂತರ  ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ.
     ಮೂರು ಏಕದಿನ ಸರಣಿಯಲ್ಲಿ ಎಂಎಸ್ ಧೋನಿ ಮೂರು ಪಂದ್ಯಗಳಲ್ಲಿಯೂ ಸತತವಾಗಿ ಅರ್ಧ ಶತಕ ಗಳಿಸಿದ್ದರು.  ಐಸಿಸಿ ಅಧಿಕೃತ ಟ್ವಿಟರ್ ಖಾತೆಯ ಕವರ್ ನಲ್ಲಿ  ಧೋನಿ ಪೋಟೋ  ಹಾಕಿದ ನಂತರ ಅಭಿಮಾನಿಗಳು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries