HEALTH TIPS

ಬೆರಗುಗೊಳಿಸಿದ ಅಷ್ಠಾವಧಾನ

   
      ಬದಿಯಡ್ಕ: ಮಂಗಳೂರು ಕಲ್ಕೂರ ಪ್ರತಿಷ್ಠಾನದ ಸಹಯೋಗದೊಂದಿಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಸಂಸ್ಕøತ ಭಾರತಿಯ ಪರಿಯೋಜನಾ ಸಹಾಯಕರಾದ ಅವಧಾನಿ ಸೂರ್ಯ ಹೆಬ್ಬಾರ್ ಮತ್ತು ತಂಡದವರಿಂದ ಶನಿವಾರ ಅಪರಾಹ್ನ ಅಷ್ಟಾವಧಾನ ಕಾರ್ಯಕ್ರಮವು ಜರಗಿತು.
ಈ ಸಂದರ್ಭದಲ್ಲಿ ಅವರು ಮಾತನಾಡಿ ಅಷ್ಟಾವಧಾನವೆಂದರೆ ಅವಧಾನಿಯ ಜ್ಞಾನದ ಪರೀಕ್ಷೆಯಲ್ಲ. ಬೌದ್ಧಿಕವಾದ ಕ್ರೀಡೆ. 8 ಮಂದಿ ಪೃಚ್ಛಕರ ಪ್ರಶ್ನೆಗಳಿಗೆ ಸಮರ್ಪಕವಾಗಿ ಅವಧಾನಿಯೊಬ್ಬನೇ ಉತ್ತರಿಸಬೇಕಾಗಿದೆ. ಮನಸ್ಸಿನ ಏಕಾಗ್ರತೆಯನ್ನು ಸಾಧಿಸುವುದೇ ಅವಧಾನ ಆಗಿದೆ. ಇದರಲ್ಲಿ ಸಾಹಿತ್ಯಾವಧಾನ, ಕಂಠಾವಧಾನ ಇತ್ಯಾದಿ ಬೇರೆ ಬೇರೆ ವಿಧಾನಗಳಿವೆ. ಛಂದೋಬದ್ಧವಾಗಿ ಪದ್ಯರಚನೆಯನ್ನು ಅವಧಾನಿ ಮಾಡಬೇಕು ಹಾಗೂ ಮನರಂಜನೆಯೂ ಜೊತೆಗಿರುತ್ತದೆ ಎಂದ ಅವರು ಅಷ್ಟಾವಧಾನದ ಕುರಿತು ಸಂಪೂರ್ಣ ಮಾಹಿತಿಯನ್ನು ಮೊದಲಾಗಿ ನೀಡಿ ತನ್ನ 10ನೇ ಕಾರ್ಯಕ್ರಮವನ್ನು ಮುಂದುವರಿಸಿದರು.
ನಿಷೇದಾಕ್ಷರದಲ್ಲಿ ಶೋಧ ವಿದ್ಯಾರ್ಥಿ ರವಿಶಂಕರ ಭಟ್ಟ ಎಸ್., ಸಮಸ್ಯಾ ಪೂರಣಂನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ ಶರಣ್ಯ ಪಿ., ದತ್ತಪದೀಯಲ್ಲಿ ಶೋಧ ವಿದ್ಯಾರ್ಥಿ ಗಣೇಶ ಕೃಷ್ಣ ಭಟ್ಟ, ಚಿತ್ರಕ್ಕೆ ಪದ್ಯದಲ್ಲಿ ಮಂಜೇಶ್ವರ ಎಸ್.ಎ.ಟಿ.ಹಿರಿಯ ಮಾಧ್ಯಮಿಕ ಶಾಲೆಯ ಕಲಾ ಅಧ್ಯಾಪಕ ಜಯಪ್ರಕಾಶ ಶೆಟ್ಟಿ ಬೇಳ, ಸಂಖ್ಯಾಬಂಧದಲ್ಲಿ ಎನ್.ಎಚ್.ಎಸ್. ಪೆರಡಾಲದ ಮುಖ್ಯ ಗುರುಗಳಾದ ಶ್ಯಾಮ ಭಟ್ ಕೆ., ಆಶುಕವಿತೆಯಲ್ಲಿ ಮಂಜೇಶ್ವರ ಎಸ್.ಎ.ಟಿ.ಹಿರಿಯ ಮಾಧ್ಯಮಿಕ ಶಾಲೆಯ ಅಧ್ಯಾಪಕ ಗಣೇಶ ಪ್ರಸಾದ ನಾಯಕ್, ಕಾವ್ಯವಾಚನದಲ್ಲಿ ಪ್ರಾಧ್ಯಪಿಕೆ ಶಾಲಿನಿ ಹೆಬ್ಬಾರ್ ಮಂಗಳೂರು ಹಾಗೂ ಅಪ್ರಸ್ತುತ ಪ್ರಸಂಗದಲ್ಲಿ ಮಂಜೇಶ್ವರ ಎಸ್.ಎ.ಟಿ.ಹಿರಿಯ ಮಾಧ್ಯಮಿಕ ಶಾಲೆಯ ಅಧ್ಯಾಪಕ ಜಿ. ವೀರೇಶ್ವರ ಭಟ್ ಕರ್ಮರ್ಕರ್ ಕಾರ್ಯಕ್ರಮ ನಡೆಸಿಕೊಟ್ಟರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗಣೇಶ್ ಪೈ ಬದಿಯಡ್ಕ, ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.
   ನಿರಂತರವಾಗಿ ಎರಡೂವರೆ ಗಮಟೆಗಳಿಗಿಂತಲೂ ಹೆಚ್ಚು ಹೊತ್ತು ನಡೆದ ಅವಧಾನದಲ್ಲಿ ಪೃಚ್ಚಕರ ವೈವಿಧ್ಯಮಯ ಸಮಸ್ಯೆಗಳಿಗೆ ಚಾಕಚಕ್ಯತೆಯಿಂದ ಉತ್ತರಿಸಿದ ಸೂರ್ಯ ಹೆಬ್ಬಾರ್ ಅಚ್ಚರಿಗೆ ಕಾರಣರಾಗಿ ಅಷ್ಟಾವಧಾನದ ಬಗ್ಗೆ ಕುತೂಹಲ ಮೂಡಿಸಿದರು.
    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries