ಕುಂಬಳೆ: ಮನೆಯ ಸಮೀಪ ಅಂಗಳ ವಿಸ್ತರಣೆಗಾಗಿ ಗೋಡೆಯನ್ನು ಅಗೆದು ತೆಗೆಯುತ್ತಿರುವಮತೆ ಬೃಹತ್ ಪ್ರಮಾಣದ ನೀರಿನ ಒರತೆ ಗೋಚರಿಸಿ, ನಿಜವಾದ ಗಮಗಾವತರಣದ ಅನುಭೂತಿಗೊಳಗಾದ ಗಟನೆ ಪೆರ್ಮುದೆ ಸಮೀಪದ ಕಂಬಾರಿನಲ್ಲಿ ನಡೆದಿದೆ.
ಕಂಬಾರು ಶ್ರೀದುರ್ಗಾಪರಮೇಶ್ವರಿ ದೇವಾಲಯದ ನೌಕರೆಯಾಗಿರುವ ಅಲ್ಲಿಗೆ ಸಮೀಪದ ನಿವಾಸಿ ಕುಸುಮ ಎಂಬವರಿಗೆ ಇಂತಹ ವಿಶಿಷ್ಟ ಅನುಭವ ಎರಡು ದಿನಗಳ ಹಿಂದೆ ನಡೆದಿರುವುದಾಗಿ ತಡವಾಗಿ ಬೆಳಕಿಗೆ ಬಂದಿದೆ.
ಮನೆಯ ಅಂಗಳ ಮಿತ ಪ್ರಮಾಣದಲ್ಲಿರುವುದರಿಂದ ಪಕ್ಕದ ಗುಡ್ಡವನ್ನು ಅಗೆದು ಸಮತಟ್ಟುಗೊಳಿಸಲು ಕೆಲಸ ಸಾಗುತ್ತಿರುವಂತೆ ಒಮ್ಮಿಂದೊಮ್ಮಗೆ ನೀರಿನ ಒರತೆ ಪತ್ತೆಯಾಗಿದೆ. ಒಂದೂವರೆ-ಎರಡು ಇಂಚುಗಳಷ್ಟು ಬಲವಿರುವ ನೀರಿನ ಪ್ರವಾಹ ಅಲ್ಲಿ ಸೇರಿದ್ದ ಜನರನ್ನು ಮೊದಲಿಗೆ ಕಕ್ಕಾಬಿಕ್ಕಿಗೊಳಿಸಿತು. ಬಳಿಕ ಅಲ್ಲೆ ಪಕ್ಕದಲ್ಲಿ ಪುಟ್ಟ ಹೊಮಡ ನಿರ್ಮಿಸಿ ಹರಿವ ನೀರು ಸಂಗ್ರಹಗೊಳ್ಳಲು ವ್ಯವಸ್ಥೆ ಮಾಡಲಾಯಿತು.
ಕುಸುಮರ ನಿತ್ಯ ಬಳಕೆಗೆ ಬಾವಿಯೊಂದಿದ್ದರೂ, ಜನವರಿ ತಿಂಗಳಾಂತ್ಯದ ಬಳಿಕ ಬತ್ತಿಹೋಗುತ್ತದೆ. ಬಹಳ ಆಳವಿರುವ ಆ ಬಾವಿಯು ಈ ಕಾರಣದಿಂದ ಕಡು ಬೇಸಗೆಯಲ್ಲಿ ಉಪಯೋಗಕ್ಕೆ ಲಭ್ಯವಾಗುತಯ್ತಿರಲಿಲ್ಲ. ಆದರೆ ಇದೀಗ ಆಶ್ಚರ್ಯಕರವಾಗಿ ಮನೆಯಂಗಲದಲ್ಲೇ ನೀರು ಲಭಿಸಿರುವುದು ಶ್ರೀದೇವಿಯ ಅಭಯದಿಂದ ಎಂದು ಕುಸುಮ ಸಂತಸ ಹಂಚಿಕೊಂಡಿದ್ದಾರೆ.