ಮಂಜೇಶ್ವರ: ರಂಗಚೇತನ ಸಂಸ್ಕøತಿ ಕೇಂದ್ರ ಬೆಂಗಳೂರು ಮತ್ತು ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ ಸಂಸ್ಕøತಿ ಸಚಿವಾಲಯ ಭಾರತ ಸರಕಾರ(ಎನ್ ಎಸ್ ಡಿ) ಇವರ ಜಂಟಿ ಸಹಯೋಗದಲ್ಲಿ ಚೌಟರ ಪ್ರತಿಷ್ಠಾನ ಮೀಯಪದವು, ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆ ಮತ್ತು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಮೀಯಪದವು ಇದರ ಸಹಕಾರದೊಂದಿಗೆ ರಾಷ್ಟ್ರೀಯ ಯಕ್ಷರಂಗೋತ್ಸವ - 2018 ಮೀಯಪದವಿನ ಚೌಟರ ಚಾವಡಿಯಲ್ಲಿ ಶುಕ್ರವಾರ ಆರಂಭಗೊಂಡಿತು.
ಕಾರ್ಯಕ್ರಮವನ್ನು ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಡಿ.ಚಂದ್ರಶೇಖರ ಚೌಟ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬೆಂಗಳೂರಿನ ರಂಗಚೇತನ ಸಂಸ್ಕøತಿ ಕೇಂದ್ರದ ವ್ಯವಸ್ಥಾಪಕ ಧರ್ಮದರ್ಶಿ ನಂಜುಂಡ ಸ್ವಾಮಿ ತೊಟ್ಟವಾಡಿ ಸ್ವಾಗತಿಸಿ, ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ವಂದಿಸಿದರು. ನಾಲ್ಕು ದಿನಗಳ ರಾಷ್ಟ್ರೀಯ ಯಕ್ಷರಂಗೋತ್ಸವದ ಮೊದಲ ದಿನದಂದು ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಉತ್ತರ ಕನ್ನಡ ಇವರಿಂದ ಮಾರುತಿ ಪ್ರತಾಪ ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಟ್ಟಿತು.