ಕಾಸರಗೋಡು: ಕುಟುಂಬಶ್ರೀ ಜಿಲ್ಲಾ ಮಿಷನ್‍ನ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ(ಡಿ.ಡಿ.ಯು.ಜಿ.ಕೆ.ವೈ) ನೇತೃತ್ವದಲ್ಲಿ ಪ್ರಕಟಿಸಲಾದ ಹಬ್ಬದ ಕ್ಯಾಲೆಂಡರ್ ಬಿಡುಗಡೆ ಜಿಲ್ಲಾಧಿಕಾರಿ ಅವರ ಕೊಠಡಿಯಲ್ಲಿ ನಡೆಯಿತು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಚಾಲಕರಾದ ಡಿ.ಹರಿದಾಸ್, ಪ್ರಕಾಶನ್ ಪಾಲಾಯಿ, ಟಿ.ಜೊಸೆಫ್, ಜಿಲ್ಲಾ ಕಾರ್ಯಕ್ರಮ ಪ್ರಬಂಧಕರಾದ ಕೆ.ರೇಶ್ಮಾ, ಪಿ.ಜಿಜಿನಾ, ಕೆ.ಶಿಲ್ಪ ಮೊದಲಾದವರು ಉಪಸ್ಥಿತರಿದ್ದರು.