HEALTH TIPS

ನಮ್ಮನ್ನು ನಾವು ಅರಿತಾಗ ಸಂತಸ : ಎನ್.ಸತೀಶ್

 
           ಕಾಸರಗೋಡು: ಒಳ್ಳೆಯ ಸಂಗೀತ, ಸಾಂಸ್ಕøತಿಕ ಚಟುವಟಿಕೆಗಳನ್ನು ನೋಡುವುದರಿಂದ ಮನಸ್ಸು ನಿರ್ಮಲಗೊಳುತ್ತದೆ. ಗಡಿ ಪ್ರದೇಶದಲ್ಲಿ ಇರುವಷ್ಟು ಸಾಂಸ್ಕøತಿಕ ವೈವಿಧ್ಯಗಳು ಎಲ್ಲಿಯೂ ಇರುವುದಿಲ್ಲ. ಸಪ್ತ ಭಾಷಾ ಸಂಗಮ ಭೂಮಿ ಎಂದು ಕರೆಯಲ್ಪಡುವ ಕಾಸರಗೋಡನ್ನು ನಾವು ಮತ್ತಷ್ಟು ಸಮೃದ್ಧಗೊಳಿಸಬೇಕು. ಆ ನಿಟ್ಟಿನಲ್ಲಿ ಕಾಸರಗೋಡಿಗೆ ಅಭಿಮಾನವೆನಿಸುವ ರಂಗಚಿನ್ನಾರಿ ಕನ್ನಡ ಪರ ಮಾಡುವ ಕೆಲಸಗಳು ನಿಜಕ್ಕೂ ಶ್ಲಾಘನೀಯ ಎಂದು ಕಾಸರಗೋಡು ನಗರಸಭಾ ಮಾಜಿ ಸದಸ್ಯ ಎನ್.ಸತೀಶ್ ಹೇಳಿದರು.
         ಅವರು ಕಾಸರಗೋಡಿನ ಖ್ಯಾತ ಸಂಸ್ಥೆ ರಂಗಚಿನ್ನಾರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಪಿಲಿಕುಂಜೆಯಲ್ಲಿ ಏರ್ಪಡಿಸಿದ `ಹರಸು ತಾಯೇ' ಭಕ್ತಿ ಭಾವ ಜನಪದ ಗೀತೆಗಳ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
      ನಮ್ಮನ್ನು ನಾವು ಮೊದಲು ಅರಿತುಕೊಳ್ಳಬೇಕು. ಹಾಗಾದಾಗ ಮಾತ್ರ ಹೆಚ್ಚು ಸಂತಸದಿಂದಲೂ, ನೆಮ್ಮದಿಯಿಂದಲೂ ಇರಲು ಸಾಧ್ಯವಾಗುತ್ತದೆ ಎಂದರಲ್ಲದೆ ಕಾಸರಗೋಡಿನ ಸಾಹಿತ್ಯಿಕ - ಸಾಂಸ್ಕøತಿಕ ಚಟುವಟಿಕೆಗಳು ಮತ್ತಷ್ಟು ಗಟ್ಟಿಯಾಗಬೇಕೆಂದರು.
    ಅಧ್ಯಕ್ಷತೆ ವಹಿಸಿ ಮಾತನಾಡಿದ ಖ್ಯಾತ ಉದ್ಯಮಿ ಶಿವಾಜಿ ರಾವ್ ಅವರು ಮಲಯಾಳ, ತುಳು, ಕೊಂಕಣಿ, ಬ್ಯಾರಿ, ಕನ್ನಡ ಯಾವ ಮಾತೃ ಭಾಷೆಯವರೇ ಇರಲಿ, ಅವರು ಕಾಸರಗೋಡಿನ ಕನ್ನಡಿಗರು ಎಂದು ಕರೆಯಲ್ಪಡುತ್ತಾರೆ. ಅದು ಈ ಮಣ್ಣಿನ ಗುಣ ಎಂದರು. ಮುಖ್ಯ ಅತಿಥಿಯಾಗಿ ನಗರಸಭಾ ಸದಸ್ಯ ಸುಜಿತ್ ಕುಮಾರ್ ಅಮೈ, ರಂಗಕರ್ಮಿ ವಾಮನ ಮುಳ್ಳಂಗೋಡು ಉಪಸ್ಥಿತರಿದ್ದರು.
     ಪ್ರಾಸ್ತಾವಿಕ ಮಾತನಾಡಿದ ರಂಗಚಿನ್ನಾರಿ ಸಂಸ್ಥೆಯ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಕಳೆದ ವರ್ಷ ನಮ್ಮ ಸಂಸ್ಥೆಯು 38 ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಲ್ಲದೆ, ಹಳ್ಳಿಹಳ್ಳಿಗಳಲ್ಲೂ ಚಟುವಟಿಕೆಗಳನ್ನು ವಿಸ್ತರಿಸಿದ ಬಗ್ಗೆ ಮಾಹಿತಿ ನೀಡಿದರು. ಶಾಲಾ ಮಕ್ಕಳಿಗಾಗಿ ಏರ್ಪಡಿಸಿದ `ರಂಗ ಸಂಸ್ಕøತಿ' ಭಾವಗೀತೆ ಕಲಿಕೆಗಳ ಕಾರ್ಯಾಗಾರವನ್ನು ಮತ್ತಷ್ಟು ವಿಸ್ತರಿಸುವ ಯೋಜನೆಗಳಲ್ಲದೆ, ಚಲನಚಿತ್ರ ಉತ್ಸವವನ್ನು ಏರ್ಪಡಿಸುವುದಾಗಿ ತಿಳಿಸಿದರು.
    ಪಿಲಿಕುಂಜೆ ಆಟ್ರ್ಸ್ ಆ್ಯಂಡ್ ಸ್ಪೋಟ್ರ್ಸ್ ಕ್ಲಬ್‍ನ ಪದಾಧಿಕಾರಿ ರವಿ(ಪ್ರಮೋದ್ ಕುಮಾರ್) ಸ್ವಾಗತಿಸಿದರು. ಖ್ಯಾತ ಸುಗಮ ಸಂಗೀತ ಕಲಾವಿದ, ಅಂತಾರಾಷ್ಟ್ರೀಯ ಖ್ಯಾತಿಯ ರವೀಂದ್ರ ಪ್ರಭು ಹಾಗು ಕಿಶೋರ್ ಪೆರ್ಲ ಅವರಿಂದ ಸುಮಾರು ಎರಡು ಗಂಟೆಗಳ ಕಾಲ ಭಕ್ತಿ, ಭಾವ, ಜನಪದ ಗೀತೆಗಳ ಕಾರ್ಯಕ್ರಮ `ಹರಸು  ತಾಯೇ' ಜನಮನ ಗೆದ್ದಿತು. ಆರ್ಗನ್‍ನಲ್ಲಿ ಪುರುಷೋತ್ತಮ ಕೊಪ್ಪಲ್, ತಬ್ಲಾದಲ್ಲಿ ಅಭಿಜಿತ್ ಶೆಣೈ, ರಿದಂ ಪ್ಯಾಡ್‍ನಲ್ಲಿ ಪ್ರಕಾಶ್ ಸಹಕರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries