ಮುಳ್ಳೇರಿಯ: ತುಳುನಾಡು ಫ್ರೆಂಡ್ಸ್ ಕಿನ್ನಿಂಗಾರು ನೇತೃತ್ವದಲ್ಲಿ ಜ.12 ಸಂಜೆ 7 ರಿಂದ ಕಿನ್ನಿಂಗಾರ್ ಗ್ರಾಮ ಪಂಚಾಯತಿ ಸ್ಟೇಡಿಯಂನಲ್ಲಿ ಕಬಡ್ಡಿ ಪಂದ್ಯಾಟ ಜರಗಲಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್‍ಬಾಬು ಉದ್ಘಾಟಿಸುವರು. ಕೆ.ಕೃಷ್ಣ ಮಣಿಯಾಣಿ ಅಧ್ಯಕ್ಷತೆ ವಹಿಸುವರು. ಪಂದ್ಯಾಟದಲ್ಲಿ ಕೇರಳ ಮತ್ತು ಕರ್ನಾಟಕದ ಪ್ರಮುಖ 12 ತಂಡಗಳು ಭಾಗವಹಿಸಲಿದೆ.