ಬದಿಯಡ್ಕ: ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ದಶಮಾನೋತ್ಸವದ ಅಂಗವಾಗಿ ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ವಿದ್ಯಾರ್ಥಿಗಳಿಂದ 'ಸುದರ್ಶನ ವಿಜಯ' ಯಕ್ಷಗಾನ ಪ್ರದರ್ಶನಗೊಂಡಿತು. ಯಕ್ಷಗಾನ ಗುರು ಶ್ರೀ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ನಿರ್ದೇಶನದಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ಮೆಚ್ಚುಗೆಗಳಿಸಿದರು. ಭಾಗವತರಾಗಿ ಅಮೃತಾ ಅಡಿಗ, ಚೆಂಡೆ ಮದ್ದಳೆಗಳಲ್ಲಿ ಸತ್ಯನಾರಾಯಣ ಅಡಿಗ ಮತ್ತು ಕೌಶಿಕ್ ಮೂಡಬಿದ್ರೆ ಹಾಗೂ ಚಕ್ರತಾಳದಲ್ಲಿ ಉದನೇಶ್ ಕುಂಬಳೆ ಸಹಕರಿಸಿದರು.
ಪಾತ್ರವರ್ಗದಲ್ಲಿ ಕಿಶನ್ ಅಗ್ಗಿತ್ತಾಯ(ವಿಷ್ಣು), ಅಭಿಜ್ಞ ಬಿ ಭಟ್(ಲಕ್ಷ್ಮಿ), ಉಪಾಸನಾ ಪಂಜರಿಕೆ(ಸುದರ್ಶನ), ಶ್ರೀಜಾ ಉದನೇಶ್(ದೇವೇಂದ್ರ), ಸಂದೇಶ್ ಅರ್ತಿಪಳ್ಳ(ಅಗ್ನಿ), ದೃಶ್ಯಾ ಕುಂಟಾರು(ವಾಯು), ಶಿವಪ್ರಸಾದ ಕುಂಟಾರು(ವರುಣ), ಮನೀಶ್.ವಿ. ರೈ(ದೇವದೂತ), ನಂದಕಿಶೋರ್ ಮವ್ವಾರು(ಶತ್ರುಪ್ರಸೂದನ), ಶಶಾಂಕ ಶಂಕರ್ ಮೈರ್ಕಳ(ಚಂಡಾಸುರ), ಮನ್ವಿತ್ ಕೃಷ್ಣ (ವ್ಯಾಘ್ರಾಸುರ)ಪಾತ್ರಗಳನ್ನು ನಿರ್ವಹಿಸಿದರು. ನೇಪಥ್ಯದಲ್ಲಿ ಮೋಹನ ಕಿನ್ಯ, ರಾಜೇಶ್ ಕುಂಪಲ ಹಾಗೂ ಗಿರೀಶ್ ಕುಂಪಲ ಸಹಕರಿಸಿದರು. ಉಮಾ ಸುಬ್ರಹ್ಮಣ್ಯ ಭಟ್ ತಲೇಕ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದರು.