ಹರ್ಷಾದ್ ವರ್ಕಾಡಿಯವರಿಂದ ಉದ್ಘಾಟನೆ
ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತಿನ ಬಾಯಿಕಟ್ಟೆ ಅಂಗನವಾಡಿ ಕೇಂದ್ರದ ದಶಕಗಳ ಬೇಡಿಕೆ ಕೊನೆಗೂ ಈಡೇರಿದೆ. ಕಟ್ಟಡವಿಲ್ಲದೇ ಬಾಯಿಕಟ್ಟೆಯ ಅಂಗಡಿ ಕೊಠಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಅಂಗನವಾಡಿ ಕೇಂದ್ರಕ್ಕೆ ಸುಸಜ್ಜಿತ ಅಂಗನವಾಡಿ ಕಟ್ಟಡವನ್ನು ನಿರ್ಮಿಸಿ ಕಾಸರಗೋಡು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ನುಡಿದಂತೆ ನಡೆದಿದ್ದಾರೆ. ಜಿ.ಪಂ.2017-18 ಸಾಲಿನಲ್ಲಿ 12.5 ಲಕ್ಷ ರೂ. ಮೊತ್ತದಲ್ಲಿ ಮಾದರಿ ಶಿಶುಪ್ರಿಯ ಅಂಗನವಾಡಿ ನಿರ್ಮಿಸಿದ್ದು, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ನೂತನ ಕಟ್ಟಡವನ್ನು ಬುಧವಾರ ಲೋಕಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಪೈವಳಿಕೆ ಗ್ರಾ.ಪಂ.ಅಧ್ಯಕ್ಷೆ ಭಾರತಿ.ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಉಪಾಧ್ಯಕ್ಷೆ ಸುನಿತಾ ವಲ್ಟಿ ಡಿ.ಸೋಜಾ, ಸ್ಥಾಯೀ ಸಮಿತಿ ಅಧ್ಯಕ್ಷ ಅಮೀರ್ ಅಲಿ, ಸದಸ್ಯ ಬಶೀರ್ ದೇವಕಾನ, ಐಸಿಡಿಎಸ್ ಮೇಲ್ವಿಚಾರಕಿ ಅಜಿತಾ, ಪಂಚಾಯತು ಮಾಜೀ ಅಧ್ಯಕ್ಷ ಚಂದ್ರ ನಾಯ್ಕ್.ಎಂ., ಮಾಜೀ ಸದಸ್ಯ ನಾರಾಯಣ ಏದಾರು, ಸದಾನಂದ ಕೋರಿಕ್ಕಾರು, ಅಜೀಜ್ ಕಟ್ಟೆ, ಸಾಕ್ಷರತಾ ಪ್ರೇರಕ್ ವಿಶ್ವನಾಥ ಪಿ, ಕುಟುಂಬಶ್ರೀ ಎಡಿಎಸ್ ಶಾಂಭವಿ, ಆಶಾ ಕಾರ್ಯಕರ್ತೆ ಮಾಲತಿ ಮುಂತಾದವರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತಿ ಸದಸ್ಯೆ ರಾಬಿಯಾ ಸ್ವಾಗತಿಸಿ, ಅಂಗನವಾಡಿ ಅಧ್ಯಾಪಿಕೆ ಪ್ರೀತಿ ವಂದಿಸಿದರು.