ಇಂದು ಬೆಳಿಗ್ಗೆ 9.30ಕ್ಕೆ ಮಕ್ಕಳ ಕವಿಗೋಷ್ಠಿ ಸನ್ನಿಧಿ ಟಿ.ರೈ ಪೆರ್ಲ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮನಸ್ವಿ ಪಿಎಂ, ಉಪಾಸನಾ ಪಂಜರಿಕೆ, ಚೈತ್ರಾ ಸಿ.ಎಚ್, ಚಿನ್ಮಯಕೃಷ್ಣ ಕಡಂದೇಲು, ಚಿತ್ತರಂಜನ್ ಕಡಂದೇಲು, ಶಾಮನಾರಾಯಣ ಶರ್ಮಾ ಎನ್, ದೀಕ್ಷಿತ, ಧ್ವನಿ ಜೆ.ರೈ, ಪುನೀತ್ ಐಕೆ, ಆದ್ಯಂತ್ ಅಡೂರು, ಶ್ರದ್ದಾ ಹೊಳ್ಳ ಪಿ, ದೀಕ್ಷಿತ ಕೆ ಸ್ವರಚಿತ ಕವನ ವಾಚಿಸುವರು.
10.15 ರಿಂದ ವೆಳ್ಳಿಕ್ಕೋತ್ ವಿಷ್ಣು ಭಟ್, ಯು.ಜಿ.ನಾರಾಯಣ ಶರ್ಮಾ ಹಾಗೂ ಬಾಲಸುಬ್ರಹ್ಮಣ್ಯ ಕೋಳಿಕ್ಕಜೆ ಅವರಿಂದ ಸಂಗಿತ ಸಂಭ್ರಮ ಪ್ರಸ್ತುತಗೊಳ್ಲಲಿದೆ. 11.45ರಿಂದ ಟಿ.ಎನ್.ಎ ಖಂಡಿಗೆ ಅವರ ಅಧ್ಯಕ್ಷತೆಯಲ್ಲಿ ಹಿರಿಯರ ಕವಿಗೋಷ್ಠಿ ನಡೆಯಲಿದೆ. ರಾಜಶ್ರೀ ತಾರಾನಾಥ ರೈ, ವಿರಾಜ ಅಡೂರು, ವಿಜಯಾ ಸುಬ್ರಹ್ಮಣ್ಯ ಕುಂಬಳೆ, ಅಕ್ಷತಾರಾಜ್ ಪೆರ್ಲ, ಜ್ಯೋಸ್ನ್ಸಾ ಎಂ ಕಡಂದೇಲು, ವಿದ್ಯಾಗಣೇಶ್ ಅಣಂಗೂರು, ಹರ್ಷಿತಾ ಕೆ.ಕಟ್ಟದಮೂಲೆ, ಸತ್ಯವತಿ ಎಸ್ ಭಟ್ ಕೊಳಚ್ಚಪ್ಪು, ಗಣೇಶ್ ಪ್ರಸಾದ್ ನಾಯ್ಕ್, ನವೀನ ಕುಂಟಾರು, ಸೌಮ್ಯಾ ಪ್ರಸಾದ್ ಕಿಳಿಂಗಾರು, ಪದ್ಮಾವತಿ ಏದಾರು, ರೇಖಾ ಶ್ರೀನಿವಾಸ ಮುನಿಯೂರು ಸ್ವರಚಿತ ಕವನ ವಾಚಿಸುವರು.
ಬಳಿಕ ಡಾ.ಶಶಿರಾಜ ನೀಲಂಗಳ ಹಾಗೂ ಜಯಶ್ರೀ ಕಾರಂತರ ನೇತೃತ್ವದಲ್ಲಿ ಗಮಕ ಸ್ವರಭ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1.45ಕ್ಕೆ ರಮ್ಯಶ್ರೀ ಬಳಗದವರಿಂದ ಭಾವ ಸಂಗಮ ಗಾಯನ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ 2ರಿಂದ ಹಿರಿಯ ನ್ಯಾಯವಾದಿ ಥೋಮಸ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ಕಾಸರಗೋಡಿನ ಕನ್ನಡಿಗರು ಎದುರಿಸುತ್ತಿರುವ ಸವಾಲುಗಳು ಹಾಗೂ ಪರಿಹಾರೋಪಾಯಗಳ ಬಗ್ಗೆ ವಿಚಾರ ಸಂಕಿರಣ ನಡೆಯಲಿದೆ. ಜ್ವಲಂತ ಸಮಸ್ಯೆಗಳ ಬಗ್ಗೆ ಹರ್ಷಾದ್ ವರ್ಕಾಡಿ ಪ್ರಬಂಧ ಮಂಡಿಸುವರು. , ಭಾಷಾ ಅಲ್ಪಸಂಖ್ಯಾತರಾದ ಕಾಸರಗೋಡು ಬಗ್ಗೆ ಲಕ್ಷ್ಮೀ ಕೆ., ಕನ್ನಡ ಭಾಷೆ ಮತ್ತು ಸಂಸ್ಕøತಿಯ ಉಳಿವಿಗಾಗಿ ಮಾಡಬೇಕಾದ ಕರ್ತವ್ಯಗಳು ವಿಷಯದ ಬಗ್ಗೆ ಮಹಾಲಿಂಗೇಶ್ವರ ಭಟ್ ಎಂ.ವಿ ಪ್ರಬಂಧ ಮಂಡಿಸುವರು. ಅಪರಾಹ್ನ 3.15ಕ್ಕೆ ಎಂಎಸ್ ನರಸಿಂಹಮೂರ್ತಿ ಅವರಿಂದ ಹಾಸ್ಯ ಚಟಾಕಿ ಕಾರ್ಯಕ್ರಮ ನಡೆಯಲಿದೆ.
ಸಂಜೆ 4.ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಮ್ಮೇಳನದ ಅಧ್ಯಕ್ಷರ ಘನ ಅಧ್ಯಕ್ಷತೆಯಲ್ಲಿ ಉದುಮ ಶಾಸಕ ಕೆ.ಕುಂಞÂರಾಮನ್, ಜಿ.ಪಂ ಅಧ್ಯಕ್ಷ ಎಜಿಸಿ ಬಶೀರ್, ಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್ ಎನ್ ಮುಖ್ಯ ಅತಿಥಿಗಳಾಗಿರುವರು. ವಿದ್ವಾಂಸ ದೊಡ್ಡರಮಗೇಗೌಡ ಸಮಾರೋಪ ಭಾಷಣ ಮಾಡುವರು. ವಿವಿಧ ವಲಯಗಳ ಗಣ್ಯರು ಉಪಸ್ಥಿತರಿರುವರು. ಹಿರಿಯ ಸಾಧಕರಾದ ಎಂ.ಶಂಕರ ನಂಬಿಯಾರ್, ಐ.ವಿ.ಭಟ್, ಕೃಷ್ಣ ಬಟ್ ಖಂಡಿಗೆ, ಶೇಡಿಗುಮ್ಮೆ ವಾಸುದೇವ ಭಟ್, ಪ್ರೇಮಾ ಭಟ್ ತೊಟ್ಟೆತ್ತೋಡಿ, ರಾಧಾಕೃಷ್ಣ ಕೆ ಉಳಿಯತ್ತಡ್ಕ ಅವರನ್ನು ಸಮ್ಮೇಳನದ ವಿಶೇಷ ಪ್ರಸಸ್ತಿ ನೀಡಿ ಗೌರವಿಸಲಾಗುವುದು.
ಸಂಜೆ 6 ರಿಂದ ಅಗಲ್ಪಾಡಿ ಶಾಲಾ ವಿದ್ಯಾರ್ಥಿಗಳಿಂದ ಮುರಾಸುರ ವಧೆ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.