ಖಶೃಘೊಢೂ: ಕಾಸರಗೋಡು ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಉದ್ದೇಶದೊಂದಿಗೆ ನೂತನ ತಂತ್ರಜ್ಞಾನ ಬಳಕೆಯೊಂದಿಗೆ ವಿವಿಧ ಕ್ರಿಯಾ ಯೋಜನೆಗಳ ಜಾರಿಗಾಗಿ ಸಿದ್ಧತೆ ನಡೆಯುತ್ತಿದೆ.
ಆಧುನಿಕ ದೃಷ್ಟಿಯೊಂದಿಗೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ಈ ಸಂಬಂಧ ಇಂಟರ್ನ್ ಶಿಪ್ ಪ್ರೋಗ್ರಾಂ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುವುದು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಕ್ರೀಯಾ ಯೋಜನೆ ಜಾರಿಗೊಳ್ಳಲಿದೆ. ನಾಗರಿಕ ಸೇವಾ ವಿಭಾಗದಲ್ಲಿ ನೇಮಕಾತಿ ಪಡೆಯಲು ಹಂಬಲಿಸುತ್ತಿರುವ ಉದ್ಯೋಗಾರ್ಥಿಗಿಂದ ಈ ಸಂಬಂಧ ಅರ್ಜಿ ಕೋರಿ, ಅಭಿರುಚಿ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಇಂಟನ್ರ್ಸ್ ಗಳ ಆಯ್ಕೆಮಾಡಲಾಗಿದೆ. ಅತ್ಯುತ್ತಮ ಅಕಾಡೆಮಿಕ್ ಅರ್ಹತೆಯುಳ್ಳ ಅವರ ಮೂಲಕ ಯೋಜನೆಗಳನ್ನು ಅನುಷ್ಠಾನಗೊಳಿಸುವ, ಜಿಲ್ಲೆಗೆ ಮತ್ತು ಜಿಲ್ಲಾಡಳಿತೆಗೆ ಪ್ರಯೋಜನಕಾರಿ ಬಳಕೆ ಈ ಮೂಲಕ ಸಾಧ್ಯವಾಗಿಸುವುದು ಇಲ್ಲಿನ ಗುರಿ.
ಏನಿದು ಯೋಜನೆ:
ಆಯ್ಕೆಗೊಂಡಿರುವ 7 ಇಂಟರ್ಸ್ ಗಳಿಗೆ ವಿವಿಧ ಯೋಜನೆಗಳ ಜವಾಬ್ದಾರಿ ವಹಿಸಲಾಗಿದೆ. ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಪಿ.ಅರ್ಜುನನ್, ಬಿ.ಎ.ಇಂಟರ್ ನ್ಯಾಷನಲ್ ರಿಲೇಷನ್ ಪದವೀಧರ ಕೆ.ಆರ್.ಅರ್ಜುನ್ ನಂಬ್ಯಾರ್, ಬಿ.ಎ.ಮನಶಾಸ್ತ್ರ ಪದವೀಧರ ಆತಿಷ್ ಎಂ.ನಾಯರ್, ಜಿಯೋ ಟೆಕ್ನಿಕಲ್ ಇಂಜಿನಿಯರಿಂಗ್ ಪದವೀಧರೆ ಕೆ.ಭಾಗ್ಯ, ಎಂ.ಎಸ್.ಸಿ. ಸ್ಟಾಟಿಸ್ಟಿಕ್ಸ್ ಪದವೀಧರೆ ಕೆ.ಎಂ.ಮೋನಿಷಾ, ಎಂ.ಬಿ.ಎ.ಪದವೀಧರೆ ಪಿ.ಶ್ರೀಖಾ ಎಂಬವರು ಜಿಲ್ಲಾಧಿಕಾರಿಗಳ ಇಂಟನ್ರ್ಸ್ ಯೋಜನೆಯಲ್ಲಿದ್ದಾರೆ.
ಕಾಸರಗೋಡು ನಗರ ಪ್ರವಾಸೋದ್ಯಮ, ಜಿಲ್ಲೆಯ ಹಸುರೀಕರಣ, ಪೆರಿಯ ಏರ್ ಸ್ಟ್ರಿಪ್ ಯೋಜನೆ, ವಾಹನ ಹರಾಜು, ನೀರಿನ ಕೊರತೆ ಪರಿಹಾರ, ಜಿಲ್ಲೆಯ ಕ್ರೀಡಾವಲಯದ ಗುಣಮಟ್ಟ ಹೆಚ್ಚಳ, ಮಕ್ಕಳಿಗೆ ಬೆಳಗ್ಗಿನ ಉಪಹಾರ ಒದಗಿಸುವ "ಮಧುರಂ ಪ್ರಭಾತಂ" ಯೋಜನೆ ಇತ್ಯಾದಿ ಕಾರ್ಯಕ್ರಮಗಳ ಹೊಣೆಯನ್ನು ಈ ಇಂಟಸ್ರ್ನ್ ಗಳಿಗೆ ನೀಡಲಾಗಿದೆ.
ವಿವಿಧ ಯೋಜನೆಗಳ ಹೊಣೆ:
ಆಯಾ ಗ್ರಾಮಪಂಚಾಯತ್‍ನ ತಲಾ ಎರಡು ಸರಕಾರಿ ಶಾಲೆಯಂತೆ, ಜಿಲ್ಲೆಯ 5 ಗ್ರಾಮಪಂಚಾಯತ್ ಗಳಿಂದ ಹತ್ತು ಸರಕಾರಿ ಶಾಲೆಯಲ್ಲಿ ಕಲಿಕೆ ನಡೆಸುವ ಹಿಂದುಳಿದ ಜನಾಂಗದ ಮಕ್ಕಳಿಗೆ ಬೆಳಗ್ಗಿನ ಉಪಹಾರ ಒದಗಿಸಿ ಕೊಡುವ "ಮಧುರಂ ಪ್ರಭಾತಂ" ಯೋಜನೆಯ ಹೊಣೆ ಪಿ.ಶ್ರೀಖಾ ಅವರಿಗೆ ನೀಡಲಾಗಿದೆ.
ಕಾಸರಗೋಡು ನಗರ ಮತ್ತು ಆಸುಪಾಸಿನ ಪ್ರದೇಶಗಳ ಅಳವಡಿಕೆಯೊಂದಿಗೆ ಪ್ರವಾಸೋದ್ಯಮ ಸಕ್ರ್ಯೂಟ್ ಅಭಿವೃದ್ಧಿ, ನಗರದ ರಸ್ತೆಗಳ ಅಭಿವೃದ್ಧಿ ಇತ್ಯಾದಿಗಳ ಹೊಣೆಯನ್ನು ಬಿ.ಅಮೃತಾ ಅವರಿಗೆ ನೀಡಲಾಗಿದೆ.
ಬೇಕಲ ಪ್ರವಾಸೋದ್ಯಮ ಯೋಜನೆ, ಪ್ರವಾಸೊಧ್ಯಮದಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ, ವಸತಿ ಸೌಲಭ್ಯ ವಿಸ್ತಾರಗೊಳಿಸುವಿಕೆ, ನೂತನ ಪ್ರವಾಸೋದ್ಯಮ ವಲಯಗಳ ಶೋಧನೆ ಇತ್ಯಾದಿ ಹೊಣೆಯನ್ನು ಕೆ.ಮನೀಷಾ ಅವರಿಗೆ ಒದಗಿಸಲಾಗಿದೆ.
ಮಂಜೇಶ್ವರ ತಾಲೂಕಿನಲ್ಲಿ 15 ಸಾವಿರ ಬಿದಿರು ಸಸಿ ನೆಡುವ, ನೀರು ಸಂರಕ್ಷಣೆ ಯೋಜನೆಗಳು, ಮಣ್ಣು ಸಂರಕ್ಷಣೆ ಯೋಜನೆಗಳು, ಬಿದಿರು ಕೇಂದ್ರಿತ ಉದ್ಯಮ ಸ್ಥಾಪನೆ ಇತ್ಯಾದಿಗಳ ಹೊಣೆ ಕೆ.ಭಾಗ್ಯ ಅವರಿಗೆ ನೀಡಲಾಗಿದೆ.
ಪೆರಿಯ ಏರ್ ಸಟ್ರಿಪ್ ಯೋಜನೆಯ ಹೊಣೆ ಕೆ.ಆರ್.ಅರ್ಜುನನ್ ಅವರಿಗೆ, ಜಿಲ್ಲೆಯ ಕ್ರೀಡಾ ವಲಯದ ಅಭಿವೃದ್ಧಿಗೆ ಅವಕಾಶ ಸೃಷ್ಟಿಯ ಹೊಣೆ ಆತಿಷ್ ಎಂ.ನಾಯರ್ ಅವರಿಗೆ ನೀಡಲಾಗಿದೆ.
ರಾಜ್ಯದ ಕ್ರೀಡಾ ವಲಯದ ಅಭಿವೃದ್ಧಿ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿರುವ ಜಿಲ್ಲೆಯನ್ನು ಸೂಕ್ತ ತರಬೇತಿ ಒದಗಿಸಿ ಪ್ರಥಮ ಸ್ಥಾನದಲ್ಲಿನಿಲ್ಲುವಂತೆ ಮಾಡುವ, ಪರಿಶಿಷ್ಟ ಜಾತಿ-ಪಂಗಡದ ವಿದ್ಯಾರ್ಥಿಗಳನ್ನು ಕ್ರೀಡಾ ವಲಯದಲ್ಲಿ ಹೆಚ್ಚುವರಿ ತೊಡಗಿಸಿಕೊಂಡು ಗುಣಮಟ್ಟ ಹೆಚ್ಚಿಸುವ ಯೋಜನೆ ಈ ಮೂಲಕ ಜಾರಿಗೆ ಬರಲಿದೆ.
(ಫೊಟೋ : ಇಂಟನ್ರ್ಸ್ ಶಿಪ್ ನಲ್ಲಿ ಆಯ್ಕೆಗೊಂಡವರು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರೊಂದಿಗೆ. )